ರಾಣೆಬೆನ್ನೂರ

ದೇಶ ಅಭಿವೃದ್ಧ್ದಿಗೆ ನಾಲ್ಕು ಅಂಗಗಳು ಸಮಾನಾಗಿರಬೇಕು: ಹೂನ್ನಾಳಿ ಶ್ರೀ

ದೇಶ ಅಭಿವೃದ್ಧ್ದಿಗೆ ನಾಲ್ಕು ಅಂಗಗಳು ಸಮಾನಾಗಿರಬೇಕು: ಹೂನ್ನಾಳಿ ಶ್ರೀ
ಶಿಡ್ಲು-ಕೌರವ ಪತ್ರಿಕಾ ನವೀಕೃತ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕ್ರುತ ಆರ್‌.ಜಿ.ಮಹಾನುಭಾವ

ರಾಣೇಬೆನ್ನೂರು 08:   ದೇಶ ಮತ್ತು ನಾಡಿನ ಸಮಗ್ರ ಅಭಿವೃದ್ದಿಯಾಗಬೇಕಾದರೆ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಇದರ ಜೋತೆಗೆ ಪತ್ರಿಕಾರಂಗವು ಸಮರ್ಪಕವಾಗಿ ಪರಸ್ಪರ ಭಾವನಾತ್ಮಕವಾಗಿ ಯಾವುದೇ ಲೋಪ ದೋಷಗಳು ಇಲ್ಲದಂತೆ ಕೆಲಸ ನಿರ್ವಹಿಸಿದರೆ ಸರ್ವಾಂಗಿಣ ಅಭಿವೃದ್ದಿ ಸಾಧಿಸಲು ಸಾಧ್ಯವಾಗುವುದು ಎಂದು ಹೂನ್ನಾಳಿ. ಹಿರೇಕಲ್ಮಠದ ಒಡೆಯರ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು  

ಅವರು ಇಲ್ಲಿನ ಹಳೆ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ “ಶಿಡ್ಲು” ಮತ್ತು “ಕೌರವ”  ದಿನಪತ್ರಿಕೆಯ ನವಿಕೃತ ಕಾರ್ಯಾಲಯದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಪತ್ರಿಕೆಗಳು ಪ್ರತೀಯೋಬ್ಬ ಮನುಷ್ಯನ ಕೈಗನ್ನಡಿ ಪತ್ರಿಕೆ ಓದದೆ ಇರುವ ಮನುಷ್ಯರು ಇಲ್ಲವೇ ಇಲ್ಲ, ಇತಿಹಾಸದ ಪತ್ರಿಕೋದ್ಯಮದಲ್ಲಿ ಅಂದಿನ ಪತ್ರಕರ್ತರು ತಮ್ಮ ನೈಜ ವರದಿ ಮಾಡುವ  ಮೂಲಕ ಸಮಾಜದಲ್ಲಿ ವಳಿತು ಮತ್ತು ಕೆಡಕು ಎರಡನ್ನು ಸಮಾನವಾಗಿ ಭಿಂಭಿಸಿ ಸಮಾಜವನ್ನು ಸುಧಾರಣೆಗೆ ಶ್ರಮಿಸಿದ್ದಾರೆ ಎಂದ ಶ್ರೀಗಳು ತಂತ್ರಜ್ಞಾನ ಸಾಕಷ್ಟು  ಬದಲಾವಣೆ ಕಂಡಿದ್ದರು ಸಮಾಜದಲ್ಲಿ ಇದುವರೆಗೂ ಪರಿಪೂರ್ಣವಾಗಿ ಸಮಾನತೆಯ ಸಮಾಜ ಕಾಣದೆ ಇರುತ್ತಿರುವುದು ಅತ್ಯಂತ ವಿಷಾಧಕರ ಸಂಗತಿಯಾಗಿದೆ ಎಂದರು.  

5 ದಶಕಗಳ ಕಾಲ ಅವಿರಥ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುತ್ತಿರುವ ಶಿಡ್ಲು ಪತ್ರಿಕೆಯ ಕುಟುಂಬದವರ ಮತ್ತು ಪತ್ರಿಕಾ ಬಳಗದವರ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ ಎಂದು ಪ್ರಶಂಶಿಸಿ ಆಶಿರ್ವಚನ ನೀಡಿದ ಮಹಾ ಸ್ವಾಮಿಗಳವರು ಭವಿಷ್ಯದ ದಿನಗಳಲ್ಲಿ ನಡೆಸಲುದ್ದೇಶಿಸಿರುವ ಪತ್ರಿಕೆಯ 50 ನೇ ವಾರ್ಷಿಕೋತ್ಸವ ಸಮಾರಂಭವು ವಿಜ್ರಂಭಣೆಯಿಂದ ನಡೆಯುವ ಸಂಕಲ್ಪ ತಮ್ಮದಾಗಿದ್ದು ವಾಣಿಜ್ಯ ನಗರದ ವರ್ತಕರು, ಗಣ್ಯರು, ಧಾನಿಗಳು, ಸಂಘ ಸಂಸ್ಥೆಗಳು ಹಾಗೂ ಓದುಗರು ಮತ್ತು ಅಭಿಮಾನಿಗಳು ಸರ್ವ ರೀತಿಯಿಂದಲೂ ಸಹಕರಿಸಲು ಮುಂದಾಗಬೇಕೆಂದು ಹೇಳಿದರು. 

ಇದೇ ಸಂಧರ್ಭದಲ್ಲಿ ಪತ್ರಿಕಾ ರಂಗದಲ್ಲಿನ ಅನುಪಮ ಸೇವೆಗಾಗಿ ರಾಜ್ಯ ಪ್ರಶಸ್ತಿಗೆ ಬಾಜನರಾದ  ಶಿಡ್ಲು ಸಂಪಾದಕ ಆರ್‌.ಜಿ.ಮಹಾನುಭಾವಿಮಠ ಅವರನ್ನು ಶ್ರೀಗಳು ನಾಗರೀಕ ಸನ್ಮಾನ ನೀಡಿ ಅಭಿನಂದಿಸಿ ಗೌರವಿಸಿದರು. ಪ್ರಶಸ್ತಿ ಪುರಸ್ಕ್ರುತರಿಗೆ ಸಂಘ ಸಂಸ್ಥೆಗಳ ಮುಖಂಡರು ವರ್ತಕರು ಗಣ್ಯರು, ನಾಗರೀಕರು ಗೌರವಿಸಿ ಸನ್ಮಾನಿಸಿದರು. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾಽಽ ಬಸವರಾಜ ಕೇಲಗಾರ, ನಗರಯೂಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ರೈತ ಮುಖಂಡ ಪ್ರಭು ಸ್ವಾಮಿ ಕರ್ಜಗಿಮಠ, ಸೇರಿದಂತೆ ಮತ್ತಿತರ ಗಣ್ಯರು ಶುಭ ಹಾರೈಸಿ ಮಾತನಾಡಿದರು. ಕುಮಾರಸ್ವಾಮಿ ಮಹಾನುಭಾವಿಮಠ ಪ್ರಾರ್ಥಿಸಿ ನಿರೂಪಿಸಿದರು, ವ್ಯವಸ್ಥಾಪಕ ಸಂಪಾದಕ ಶಿವಯೋಗಿ ಮಹಾನುಭಾವಿಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಶಿಕ್ಷಕ ಎಸ್‌.ಸಿ.ಷಡಾಕ್ಷರಿಮಠ ವಂದಿಸಿದರು. 

ಸುದ್ದಿ ಓದಿ