ಬೈಲಹೊಂಗಲ

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ಸಮಾರೋಪ ಸಮಾರಂಭ

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ಸಮಾರೋಪ ಸಮಾರಂಭ

ಬೈಲಹೊಂಗಲ 11: ವಿಜ್ಞಾನವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಮನುಕುಲದ ಅಭ್ಯುದಯಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ ಎಂದು ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಪಾಧ್ಯಕ್ಷ ಎಚ್.ಬಿ. ಹುದ್ದಾರ ಹೇಳಿದರು.

ಅವರು ಪಟ್ಟಣದ ಕೆಆರ್ಸಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಧಾರವಾಡ ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾಥರ್ಿಗಳು ಪ್ರಶ್ನಿಸುವ ಮನೋಭಾವನೆಯೊಂದಿಗೆ ವೈಜ್ಞಾನಿಕ ಚಿಂತಣೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಂಶೋಧನೆ ಬಗ್ಗೆ ಅಧ್ಯಯನ ಕೈಗೊಂಡು ಹೊಸ ಅನ್ವೇಷನೆಗಳ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ರೂಪಗೊಳ್ಳಬೇಕು. ಮೂಲ ವಿಜ್ಞಾನ ವಿಷಯದಲ್ಲಿ ಆಸಕ್ತಿ ಬೆಳೆಸಲು ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಪ್ರಸ್ತುತ ಯುಗದಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವನೆ ಅಳವಡಿಸಿಕೊಂಡು ವಿದ್ಯಾರ್ಥಿಗಳು ವಿಜ್ಞಾನ ಸಂಶೋಧನೆಗೆ ಮುಂದಾಗಿ, ಹಿರಿಯ ವಿಜ್ಞಾನಿಗಳ ಸಾಧನೆಗಳನ್ನು ಅವಲೋಕಿಸಿ ಅಧ್ಯಯನದತ್ತ ತೊಡಗಬೇಕು ಎಂದರು

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಪಾಧ್ಯಕ್ಷ ಬಿ.ದೊಡ್ಡಬಸಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಸೋಲು, ಗೆಲುವು ಮುಖ್ಯವಲ್ಲ.  ಸಿ.ವಿ. ರಾಮನ, ವಿಕ್ರಂ ಸಾರಾಬಾಯಿ, ಎಡಿಷನ್ ಇಂತಹ ವಿಜ್ಞಾನಿಗಳ ನಿದರ್ಶನಗಳು ಸಂಶೋಧನಾ ವಿದ್ಯಾಥರ್ಿ ಜೀವನಕ್ಕೆ ಮಾದರಿಯಾಗಬೇಕು. ಯುವ ಶಕ್ತಿಯನ್ನು ಸರಿದಾರಿಗೆ ಒಯ್ದು, ಸಂಸ್ಕಾರಯುತ ಜೀವನ ತುಂಬುವದು ಎಲ್ಲರ ಹೊಣೆಯಾಗಿದೆ ಎಂದರು.

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮೋಹನ ಪಾಟೀಲ ಮಾತನಾಡಿ, ಬಹುದಿನಗಳ ನಂತರ ನಾಡಿನಲ್ಲಿ ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ನಡೆದಿದ್ದು ಶ್ಲಾಘನೀಯ. ಡಾ. ಸ.ಜ. ನಾಗಲೋಟಿಮಠ ಅವರ ಸಾಧನೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿದೆ ಎಂದರು.

ಧಾರವಾಡ ವಿಭಾಗದ ಸಂಯೋಜಕಿ ಮೀನಾಕ್ಷಿ ಶಿವಾನಂದ ಕುಡಸೋಮಣ್ಣವರ ಮಾತನಾಡಿ, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗಂಡು ಮೆಟ್ಟಿದ ನಾಡಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಅಚ್ಚುಕಟ್ಟಾಗಿ ಜರುಗಿ ಭವಿಷ್ಯದ ವಿಜ್ಞಾನಿಗಳಿಗೆ ಹೊಸ ಹೊಸ ಆವಿಸ್ಕಾರದತ್ತ ಅಧ್ಯಯನ ನಡೆಸಲು ಸಹಕಾರಿಯಾಯಿತು ಎಂದರಲ್ಲದೆ, ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ವೇದಿಕೆಯ ಮೇಲೆ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಉಮೇಶ ಹುನಗುಂದ ಇದ್ದರು.

ಸ.ಜ.ನಾ. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ, ಜಿ.ಬಿ. ನೇಸರಗಿ, ಪ್ರೋ. ಬಸವರಾಜ ಪುರಾಣಿಕಮಠ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ಪ್ರೋ. ಎ.ಕೆ. ಹುಕ್ಕೇದ, ಅಕ್ಷತಾ ಪೂಜೇರ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಚಾರ್ಯ ಬಿ.ಬಿ. ಬೂದಿಹಾಳ ಸ್ವಾಗತಿಸಿದರು. ಎಸ್.ವಿ. ಹಿರೇಮಠ, ಎಂ.ಜಿ. ನಾಗನೂರ ನಿರೂಪಿಸಿದರು. ಪ್ರೊ. ಎಲ್.ಬಿ. ಕದಂ ವಂದಿಸಿದರು. ಹಾವೇರಿ, ಕಾರವಾರ, ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟ, ವಿಜಯಪೂರ ಜಿಲ್ಲೆಗಳ 44 ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು.

ಕಾರವಾರ ಸರಕಾರಿ ಪ್ರಥಮ ದರ್ಜೆ ಕಾಲೇಜು  ಪ್ರಥಮ, ಹುಬ್ಬಳ್ಳಿ ಪಿ.ಸಿ. ಜಾಬಿನ ಕಾಲೇಜು ದ್ವಿತೀಯ, ಹೊನ್ನಾವರ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯ ತೃತೀಯ, ಕಾರವಾರ ಜೆ.ಎಂ.ಜಿ. ಕಾಲೇಜು ನಾಲ್ಕನೆ, ಎಸ್.ಕೆ. ಆಟ್ಸ್, ಹುಬ್ಬಳ್ಳಿ ಎಚ್.ಎಸ್.ಕೆ. ವಿಜ್ಞಾನ ಮಹಾವಿದ್ಯಾಲಯ ವಿದ್ಯಾಥರ್ಿಗಳ ತಂಡ ಐದನೆ ಬಹುಮಾನ ಪಡೆದರು. 

 

 

ಸುದ್ದಿ ಓದಿ