ಶಿಗ್ಗಾವ್

ಮೇ 4ರಂದು ಬಹಿರಂಗ ಸಭೆ

ಮೇ 4ರಂದು ಬಹಿರಂಗ ಸಭೆ

ಶಿಗ್ಗಾವಿ 02:  ಮೇ 4 ರಂದು ಗುರುವಾರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಲಿದ್ದು ಬಹಿರಂಗ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ಶಿಗ್ಗಾವಿ-ಸವಣೂರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶಿಧರ ಯಲಿಗಾರ ತಿಳಿಸಿದರು. 

ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಂದು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ಮೂಲಕ ಆಗಮಿಸಿ ನಂತರ ಜೆಡಿಎಸ್ ಅಭ್ಯರ್ಥಿ ಶಶಿಧರ ಯಲಿಗಾರ ಅವರೊಂದಿಗೆ ರೋಡ್‌ಶೋ ಮೂಲಕ ದ್ಯಾಮವ್ವನ ಪಾದಗಟ್ಟಿಯಿಂದ ಹಳೆಪೇಟೆ, ಹಳೆ ಬಸ್ ನಿಲ್ದಾಣದ ಮೂಲಕ ಹಾಯ್ದು ನಂತರ ಸಂತೆ ಮೈದಾನದಲ್ಲಿ ಬಹಿರಂಗ ಸಭೆಯಲ್ಲಿ ಭಾಗಿಯಾಗಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ರಾಜಹ್ಮಖಾನ್ ಪಠಾಣ, ಈರಣ್ಣ ನವಲಗುಂದ, ಪ್ರಕಾಶ ಬಾರ್ಕಿ, ಬಸಣ್ಣ ಹಾವೇರಿ, ಸಿದ್ದನಗೌಡ ಪಾಟೀಲ್, ಮಾಂತೇಶ ಬೇವಿನಹಳ್ಳಿ, ರವಿ ಕುರಗೋಡಿ, ಸಂಜೀವ ಮಣ್ಣಣ್ಣವರ ಸೇರಿದಂತೆ ಮುಕಂಡರು ಇದ್ದರು. 


ಸುದ್ದಿ ಓದಿ