ತಾಳಿಕೋಟಿ

ಕಾಂಗ್ರೆಸ್ ಪಕ್ಷದಿಂದಲೇ ಜನರ ಉದ್ಧಾರ ಸಾಧ್ಯ: ಕಳ್ಳಿಮನಿ

ಕಾಂಗ್ರೆಸ್ ಪಕ್ಷದಿಂದಲೇ ಜನರ ಉದ್ಧಾರ ಸಾಧ್ಯ: ಕಳ್ಳಿಮನಿ

ತಾಳಿಕೋಟಿ: ರಾಜ್ಯದಲ್ಲಿರುವ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಜನಸಾಮಾನ್ಯರ ಹಿತವನ್ನು ಮರೆತಿದೆ. ಆಡಳಿತಯಂತ್ರ ಇಂದು ಸಂಪೂರ್ಣವಾಗಿ ಕುಸಿದು ಹೋಗಿದೆ ರಾಜ್ಯದ ಜನರ ಉದ್ಧಾರವಾಗಬೇಕಾದರೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಲ್ಲಿ ತರಬೇಕಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯೆಕ್ಷೆ ಹಾಗೂ ದೇ.ಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸುಜಾತಾ ಕಳ್ಳಿಮನಿ ಹೇಳಿದರು.

ದೇವರ ಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ಬಿಜೆಪಿ ಸರಕಾರದ ವೈಫಲ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಜನ ಸಂಪರ್ಕಸಭೆ ಯಲ್ಲಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಬಡವರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿತ್ತು ಕೇವಲ ರಾಜಕೀಯ ದುರುದ್ದೇಶಕ್ಕಾಗಿ ಅವುಗಳನ್ನು ಕಡಿತಗೊಳಿಸಲಾಗಿದೆ ಇದೊಂದು ಜನವಿರೋಧಿ ಸರಕಾರವಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಡಾ.ನಂದಕುಮಾರ ಭ್ಯೆರಿ ಮಾತನಾಡಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಈ ಭ್ರಷ್ಟ ಸರಕಾರ ಅಭಿವೃದ್ಧಿಯನ್ನು ಮರೆತು ಜನರನ್ನು ಲೂಟಿಮಾಡುವ ಕೆಲಸ ಮಾಡುತ್ತಿದೆ ಮುಂಬರಲಿರುವ 2023 ಚುನಾವಣೆಯಲ್ಲಿ ಮತದಾರರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಮಾಜಿಶಾಸಕ ಶರಣಪ್ಪ ಸುಣಗಾರ ಅವರು ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿಯ ನಿಜಬಣ್ಣ ಜನರಿಗೆ ಗೊತ್ತಾಗಿದೆ ಇನ್ನೂ ಕೇವಲ ಸುಳ್ಳು ಮಾತುಗಳಿಂದ ಜನರಿಗೆ ಮೋಸಗೊಳಿಸಲು ಸಾಧ್ಯವಿಲ್ಲ.

ಕಾಂಗ್ರೆಸದಿಂದ ಮಾತ್ರ ಜನರಿಗೆ ನೆಮ್ಮದಿಯ ಬದುಕು ಸಿಗಲು ಸಾಧ್ಯ ನಾವೆಲ್ಲರೂ ಸೇರಿ ಮತ್ತೇ ಕಾಂಗ್ರೆಸ ಪಕ್ಷವನ್ನು ಅಧಿಕಾರದಲ್ಲಿ ತರಲು ಪ್ರಯತ್ನಿಸೋಣ ಎಂದು ಹೇಳಿದರು.

ಈ ಸಮಯದಲ್ಲಿ ಹೂ.ಹಿಪ್ಪರಗಿ ಬ್ಲಾಕ್ ಅಧ್ಯಕ್ಷ ಬಾಳನಗೌಡ ಪಾಟೀಲ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು 

ಸುದ್ದಿ ಓದಿ