ಆನ್ಲೈನ್ ಭಾಷಾಂತರ ಉಪನ್ಯಾಸ ಮಾಲೆಯ ಕಾರ್ಯಕ್ರಮ
ಹಂಪಿ 28: ‘ಆನ್ಲೈನ್ ಭಾಷಾಂತರ ಉಪನ್ಯಾಸ ಕಾರ್ಯಕ್ರಮದಲ್ಲಿ ತಜ್ಞ ಭಾಷಾಂತರಕಾರರೇ ಕೃತಿಯ ಕುರಿತು ಮಾತನಾಡುತ್ತಿರುವುದು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶ’ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು. ಕನ್ನಡ ವಿಶ್ವವಿದ್ಯಾಲಯ ಭಾಷಾಂತರ ಅಧ್ಯಯನ ವಿಭಾಗವು ಆಯೋಜಿಸಿದ ಆನ್ಲೈನ್ ಭಾಷಾಂತರ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಎ. ಮೋಹನ ಕುಂಟಾರ್ ಅವರು ಆನ್ಲೈನ್ ಉಪನ್ಯಾಸದ ಬಗೆಗೆ ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ದಿನಾಂಕ 19 ರಿಂದ 24 ಆಗಸ್ಟ್ 2024ರವರೆಗೆ ನಡೆದ ಆನ್ಲೈನ್ ಭಾಷಾಂತರ ಉಪನ್ಯಾಸ ಮಾಲೆಯ ಭಾಗವಾಗಿ ‘ವೈಕಂ ಮುಹಮ್ಮದ್ ಬಷೀರ್ ಅವರ ‘ಪ್ರೇಮ ಪತ್ರ’ ಎಂಬ ವಿಷಯದ ಕುರಿತು ಮೋಹನ ಕುಂಟಾರ್ ಅವರು, ‘ಪ್ರತಿಬಿಂಬ’ - ಮಹಮ್ಮದ್ ಜಸಿಮಾನ್ ಅಜುರ್ದಾ ಅವರ ಕಾಶ್ಮೀರಿ ಪ್ರಬಂಧಗಳು’ ಎನ್ನುವ ವಿಷಯದ ಕುರಿತು ಆನಂದರಾಮ ಉಪಾಧ್ಯ, ಓಲ್ಗಾ ಅವರ ‘ವಿಮುಕ್ತೆ’ ತೆಲುಗು ಕಥಾಸಂಕಲನ ಕನ್ನಡಾನುವಾದ ಎನ್ನುವ ವಿಷಯದ ಕುರಿತು ಅಜಯ್ ವರ್ಮಾ ಅಲ್ಲೂರಿ, ನಯನತಾರಾ ಸೆಹಗಾಲ್ ಅವರ ‘ನಮ್ಮಂಥ ಬಲ್ಲಿದರು!’ ಎನ್ನುವ ವಿಷಯದ ಕುರಿತು ಹೆಚ್.ಎಸ್.ಎಂ.ಪ್ರಕಾಶ್, ಹಾಗೂ ಸೂರ್ಯಕಾಂತನ್ ಅವರ ‘ಮೂಡಣದ ರಂಗು’ ತಮಿಳು ಕೃತಿ ಎನ್ನುವ ವಿಷಯದ ಕುರಿತು ಪಿ. ಮಣಿ, ಮತ್ತು ಡೊನಾಲ್ಡ್ ಆಂಡರ್ಸನ್ ಅವರು ‘ಕೊನೆಯ ಬಿಳಿ ಬೇಟೆಗಾರ’ ಎಂಬ ವಿಷಯದ ಕುರಿತು ಎಲ್. ಜಿ. ಮೀರಾ ಅವರು ಉಪನ್ಯಾಸವನ್ನು ನೀಡಿದರು.
ಈ ಆರು ದಿನಗಳ ಉಪನ್ಯಾಸಗಳಲ್ಲಿ ಭಾಷಾಂತರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಎ. ಮೋಹನ ಕುಂಟಾರ್ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.ಕಾರ್ಯಕ್ರಮದಲ್ಲಿ ಭಾಷಾಂತರ ಅಧ್ಯಯನ ವಿಭಾಗದ ಸಂಶೋಧನಾರ್ಥಿಗಳು ಹಾಗೂ ಆನ್ಲೈನ್ ಮೂಲಕಆಸಕ್ತ ಸಹೃದಯರು ಮತ್ತು ಅನುವಾದಕರಾದ ಜಿ. ವೀರಭದ್ರಗೌಡ ಮತ್ತು ಕಾಶ್ಮೀರಿ ಲೇಖಕರಾದ ಮಹಮ್ಮದ್ ಜಸಿಮಾನ್ ಅಜುರ್ದಾ, ತೆಲುಗು ಲೇಖಕರಾದ ಓಲ್ಗಾ ಹಾಗೂ ವಿಮರ್ಶಕರಾದ ಮುರುಳೀಧರ ಉಪಾಧ್ಯ ಮತ್ತು ಎಂ ಉಷಾ ಅನೇಕರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸಂಚಾಲಕರಾದ ಕೆ.ಅನಂತ ಅವರು ವಂದನಾರೆ್ಣ ಮಾಡಿದರು. ಭಾಷಾಂತರ ಅಧ್ಯಯನ ವಿಭಾಗದ ಸಂಶೋಧನಾರ್ಥಿಗಳಾದ ರೆಬೆಕ್ಕ, ಶ್ವೇತಾ ಬಾಳಿ, ಬೇರ್ಗಿ ಜಯಶ್ರೀ, ವೀನೀತಾ ಅವರು ನಿರ್ವಹಣೆ ಮಾಡಿದರು.