ರಾಣೆಬೆನ್ನೂರ

ಸನಾತನ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ಮಹತ್ವವಿದೆ: ವಿನೋದ ಕಾಮತ

ಸನಾತನ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಗೆ ಮಹತ್ವವಿದೆ: ವಿನೋದ ಕಾಮತ

ರಾಣೀಬೆನ್ನೂರ 14:  ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ  ವೇದ-ಇತಿಹಾಸ ಕಾಲದಿಂದಲೂ ಗುರು-ಶಿಷ್ಯರಿಗೆ ಭವ್ಯ ಇತಿಹಾಸವಿದೆ.  ಈ ಪರಂಪರೆೆ ಭಾರತೀಯ ಸಂಸ್ಕೃತಿಗೆ ಭೂಷಣವಾಗಿದೆ. ‘ಗುರುಗಳ ಮಹತ್ವ'ವೇ ಅದರಲ್ಲಿನ ಮರ್ಮವಾಗಿದೆ. ಶಿಷ್ಯನು ಯಾವ ಸಾಧನೆ ಮಾಡಬೇಕು ಎಂದು ಗುರುಗಳಿಗೆ ತಿಳಿದಿರುತ್ತದೆ. ಅವನಿಗೆ ಕೇವಲ ಸಾಧನೆಯನ್ನು ಹೇಳಿ ಸುಮ್ಮನಾಗದೇ ಅವನಿಂದ ಸಾಧನೆ ಮಾಡಿಸಿಕೊಳ್ಳುತ್ತಾರೆ. ಗುರುಗಳು ನಿಜವಾಗಿ ಇದನ್ನೇ ಕಲಿಸುತ್ತಾರೆ. ಗುರುಗಳ ಗಮನ ಶಿಷ್ಯನ ಐಹಿಕ ಸುಖದ ಕಡೆಗೆ ಇರುವುದಿಲ್ಲ, ಏಕೆಂದರೆ ಅದು ಪ್ರಾರಬ್ಧಕ್ಕನುಸಾರ ಇರುತ್ತದೆ. ಗುರುಗಳ ಗಮನ ಕೇವಲ ಶಿಷ್ಯನ ಆಧ್ಯಾತ್ಮಿಕ ಉನ್ನತಿಯ ಕಡೆಗೆ ಇರುತ್ತದೆ ಎಂದು  ಸನಾತನ ಸಂಸ್ಥೆಯ ಕರ್ನಾಟಕ ವಕ್ತಾರ ವಿನೋದ ಕಾಮತ ಹೇಳಿದರು. 

ಅವರು  ಬೆಂಗಳೂರ ನಗರದ ಕೇಂದ್ರ ಕಚೇರಿಯಲ್ಲಿ ನಡೆದ ಅಂತರ್ ಜಾಲ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗುರು-ಶಿಷ್ಯ ಪರಂಪರೆ ‘ಜ್ಞಾನದಾನ ಮಾಡುವ ಸದ್ಗುರುಗಳಿಗೆ ಶೋಭಿಸುವಂತಹ ಉಪಮೆ ಈ ತ್ರಿಭುವನದಲ್ಲಿ ಎಲ್ಲಿಯೂ ಇಲ್ಲ. ಅವರಿಗೆ ಸ್ಪರ್ಶಮಣಿಯ (ಪಾರಸಮಣಿ) ಉಪಮೆಯನ್ನು ನೀಡಿದರೂ ಅದು ಅಪೂರ್ಣವಾಗುವುದು; ಏಕೆಂದರೆ ಸ್ಪರ್ಶಮಣಿಯು ಕಬ್ಬಿಣವನ್ನು ಸುವರ್ಣವನ್ನಾಗಿ ಮಾಡಿದರೂ, ಅದರ ಗುಣವನ್ನು ಕೊಡಲು ಸಾಧ್ಯವಿಲ್ಲ ಅಂದರೆ ಕಬ್ಬಿಣವು ಸ್ಪರ್ಶಮಣಿಯ ಗುಣವನ್ನು ಪಡೆಯುವುದಿಲ್ಲ ಎಂದ ಅವರು ಗುರುಗಳ ಮಹತ್ವವನ್ನು ವರ್ಣಿಸಲು ಶಿಷ್ಯನಿಗೆ ಶಬ್ದಗಳು ಸಾಕಾಗುವುದಿಲ್ಲ. ಗುರುಗಳು ಒಳಗೂ ಇದ್ದಾರೆ, ಹೊರಗೂ ಇದ್ದಾರೆ. ನೀವು ಅಂತರ್ಮುಖರಾಗುವಂತಹ ಪರಿಸ್ಥಿತಿಯನ್ನು ಗುರುಗಳು ನಿರ್ಮಿಸುತ್ತಾರೆ. ನಿಮ್ಮನ್ನು ಆತ್ಮದ ಕಡೆಗೆ ಅಂದರೆ ಬ್ರಹ್ಮನ ಕಡೆಗೆ ಸೆಳೆಯಬೇಕೆಂದು ಗುರುಗಳು ಒಳಗೆ ಅಂದರೆ ಹೃದಯದಲ್ಲಿ ಸಿದ್ಧತೆ ಮಾಡುತ್ತಾ ಇರುತ್ತಾರೆ. 

ಎಂದು ವಿಶ್ಲೇಷಿಸಿ ಮಾತನಾಡಿದರು. ಸಂವಾದದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ವಿಷಯ ತಜ್ಞರು, ವಾಗ್ಮಿಗಳು ಮತ್ತಿತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ