ಜನ್ಮ ಭೂಮಿ, ಹೆತ್ತ ತಾಯಿ, ವಿದ್ಯೆ ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು: ಮಾಕನೂರು
ರಾಣಿಬೆನ್ನೂರು 26: ವಿದ್ಯಾರ್ಥಿಗಳು ಮುಂದಿನ ನಿಮ್ಮ ಜೀವನ ಉತ್ತಮ ಬದುಕು ಸಾಗಲು ಸಂಸ್ಕಾರ ಮತ್ತು ಸಂಸ್ಕೃತಿ ಅಳವಡಿಸಿಕೊಂಡು ಮುನ್ನಡೆಯಬೇಕು, ಜನ್ಮ ಭೂಮಿ, ಹೆತ್ತ ತಾಯಿ, ವಿದ್ಯೆ ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು ಎಂದು ಪ್ರಭಾರಿ ಪ್ರಾಚಾರ್ಯ ಡಾ. ಎಸ್. ಜಿ. ಮಾಕನೂರು ಹೇಳಿದರು.
ನಗರದ ಹೊರವಲಯದ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಸಿ.ಎಂ. ಪರಮೇಶ್ವರ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಭಾವನಾ ಪಾಟೀಲ್, ವಿದ್ಯಾರ್ಥಿ ಸಂಯೋಜಕ ಎ. ದರ್ಶನ್, ದೀಕ್ಷಾ ಪಾಟೀಲ, ರಕ್ಷಿತಾ ಬಾಳಿಕಾಯಿ, ಎಸ್.ಹೆಚ್. ಪುನೀತ, ಅನುಷ ನಾಡಿಗರ ಉಪಸ್ಥಿತರಿದ್ದರು.
ಫೋಟೊ:26ಆರ್‌ಎನ್‌ಆರ್05ರಾಣಿಬೆನ್ನೂರು: ನಗರದ ಹೊರವಲಯದ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಪ್ರಾಚಾರ್ಯ ಡಾ.ಎಸ್.ಜಿ. ಮಾಕನೂರು ಉದ್ಘಾಟಿಸಿದರು.