ಶಿಗ್ಗಾವ್

ಶಿಸ್ತಿನ ಜೀವನ ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು: ರವಿ ಮಡಿವಾಳರ

ಶಿಸ್ತಿನ ಜೀವನ ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು: ರವಿ ಮಡಿವಾಳರ

ಶಿಗ್ಗಾವಿ 31: ಜೈನ ಕಾಶಿ ಎಂದೇ ಪ್ರಸಿದ್ದವಾಗಿರುವ ಆಳ್ವಾಸ್ ಸಂಸ್ಥೆ ಮೂಡಬಿದಿರೆಯಲ್ಲಿ ನಡೆದ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕ ರಾಜ್ಯ ಸಂಸ್ಥೆ ನಡೆಸಿದ 43 ನೇ ರಾಜ್ಯ ಮಟ್ಟದ ಕಬ್ ಬುಲ್ ಬುಲ್ ಉತ್ಸವದಲ್ಲಿ ಏಲಕ್ಕಿ ಕಂಪಿನ  ನಗರ ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸಿ ಶಿಗ್ಗಾವಿ ತಾಲೂಕಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ನಂಬರ 1 ಶಾಲೆಯ 10 ವರ್ಷದೊಳಗಿನ 24 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು 5 ದಿನದಕಬ್ ಬುಲ್ ಬುಲ್‌ಉತ್ಸವದ ವಿವಿಧ ಸೃಜನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿ ಬಂದ ವಿಧ್ಯಾರ್ಥಿಗಳಿಗೆ ಶಾಲೆಯ ಶಾಲಾ ಸುಧಾರಣಾ ಸಮಿತಿ ಹಾಗೂ ಪಾಲಕರು ಮತ್ತು ಪೋಷಕರು, ಪ್ರಧಾನ ಗುರುಗಳು, ಶಿಕ್ಷಕ ವೃಂದ ಹೃದಯ ಪೂರ್ವಕವಾಗಿ ಅಭಿನಂದಿಸಿದರು. 

ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ರವಿ ಮಡಿವಾಳರ ಅಭಿನಂದಿಸಿ ಮಾತನಾಡಿದ ಅವರು  ಕಬ್ ಬುಲ್ ಬುಲ್ ಉತ್ಸವದಲ್ಲಿ ಭಾಗವಹಿಸಿ ಶಿಸ್ತಿನ ಜೀವನಕಂಡುಕೊಂಡ ಬಂದ ವಿದ್ಯಾರ್ಥಿಗಳು  ಜೀವನದಲ್ಲಿ ಇದನ್ನು ರೂಢಿಸಿಕೊಂಡು ಉತ್ತಮಪ್ರಜೆಗಳಾಗಬೇಕು ಎಂದು ಕಿವಿಮಾತು ಹೇಳಿದರು. 

ರಾಘವೇಂದ್ರ ದೇಶಪಾಂಡೆ, ಶಿಕ್ಷಕ ಲಿಂಗೇಶ. ಕೆಎಚ್ ಹಾಗೂ ಶಿಕ್ಷಕಿ ನವೀನಾ ಕುಮಾರಿಯವರನ್ನು ಗೌರವಿಸಿ ಸನ್ಮಾನಿಸಿದರು. ಪ್ರಧಾನ ಗುರುಗಳು, ಪಾಲಕರು, ಪೋಷಕರು, ಶಿಕ್ಷಕ ವೃಂದದವರು  ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ