ಸಿಂಧಗಿ

ಜು.28ರಂದು ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ

ಜು.28ರಂದು ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ

ಸಿಂದಗಿ 26: ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘ ಜಿಲ್ಲಾ ಘಟಕ ವಿಜಯಪುರ ವತಿಯಿಂದ 2024ನೆಯ ಸಾಲಿನಲ್ಲಿ ಕೊಡಮಾಡುವ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ವರದಿಗಾರರಾದ ಸಿದ್ದಲಿಂಗ ಕಿಣಗಿ ಹಾಗೂ ಸುದರ್ಶನ ಜಂಗಣ್ಣಿ ಅವರು ಆಯ್ಕೆಯಾಗಿದ್ದಾರೆ ಎಂದು ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಹೇಳಿದ್ದಾರೆ. 

ಜು.28ರಂದು ವಿಜಯಪುರದ ಸೋಲಾಪೂರ ರಸ್ತೆಯಲ್ಲಿರುವ ಪೊಲೀಸ್ ಪರೇಟ್ ಮೈದಾನದ ಎದುರಿರುವ ಪೊಲೀಸ್ ಸಮುದಾಯ ಭವನ ನಡೆಯುವ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ