ಸೌಂದತ್ತಿ

ಜೂ.11 ಮತ್ತು 12ರಂದು ನೂತನ ಕಲ್ಮೇಶ್ವರ ಕಲ್ಯಾಣ ಮಂಟಪ ಲೋಕಾರ್ಪಣೆ

ಜೂ.11 ಮತ್ತು 12ರಂದು ನೂತನ ಕಲ್ಮೇಶ್ವರ ಕಲ್ಯಾಣ ಮಂಟಪ ಲೋಕಾರ್ಪಣೆ

ಸವದತ್ತಿ 10: ಪಟ್ಟಣದ ಬೇವಿನಕಟ್ಟಿ ಓಣಿಯಲ್ಲಿರುವ ಪ್ರಸಿದ್ಧ ಕಲ್ಮೇಶ್ವರ ದೇವಸ್ಥಾನದ ಮುಂದೆ ನಿರ್ಮಿಸಿಲಾಗಿರುವ ನೂತನ ಕಲ್ಮೇಶ್ವರ ಕಲ್ಯಾಣ ಮಂಟಪವನ್ನು ಜೂ.11 ಮತ್ತು 12ರಂದು ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಪುರಸಭೆ ಮಾಜಿ ಸದಸ್ಯ ಚಂದ್ರಣ್ಣ ಶಾಮರಾಯನವರ ತಿಳಿಸಿದ್ದಾರೆ. 

ಜೂ.11ರಂದು ಮುಂಜಾನೆ 10ಕ್ಕೆ ಹೋಮ ಹವನದೊಂದಿಗೆ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜೂ.12ರಂದು ಮುಂಜಾನೆ 10.30ಕ್ಕೆ ನೂತನ ಕಲ್ಯಾಣ ಮಂಟಪ ಉದ್ಘಾಟನೆಯೊಂದಿಗೆ ಲೋಕಾರೆ​‍್ಣಗೊಳ್ಳಲಿದೆ. 

ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಮಹಾಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಇನಾಂಹೊಂಗಲ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಬೆಟಸೂರಮಠದ ಅಜ್ಜಯ್ಯಸ್ವಾಮೀಜಿ, ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯವಹಿಸುವರು. 

ಶಾಸಕ ವಿಶ್ವಾಸ ವೈದ್ಯ ಉದ್ಘಾಟನೆ ಮಾಡಲಿದ್ದು, ಪುರಸಭೆ ಮಾಜಿ ಅಧ್ಯಕ್ಷ ಮಹಾಬಳೇಶ್ವರ ಪುರದಗುಡಿ ಅಧ್ಯಕ್ಷತೆವಹಿಸಲಿದ್ದಾರೆ. ಗಣ್ಯರಾದ ವಿರುಪಾಕ್ಷ ಮಾಮನಿ, ಚಂದ್ರಣ್ಣ ಶಾಮರಾಯನವರ, ಶಿವಾನಂದ ಪಟ್ಟಣಶೆಟ್ಟಿ, ಡಾ.ಎಮ್‌.ಎಸ್‌.ಅಮೋಘಿಮಠ, ಸುರೇಶ ಚೋಪ್ರಾ ಇತರರು ಭಾಗವಹಿಸಲಿದ್ದಾರೆ ಎಂದು ಬೇವಿನಕಟ್ಟಿ ಓಣಿಯ ಗುರು ಹಿರಿಯರು ಹಾಗೂ ಕಲ್ಮೇಶ್ವರ ಯುವಕ ಮಂಡಳದ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ