ಅಥಣಿ

6ರಂದು ಗಂಗಾಮಾತೆ ಮಹಿಮೆ ಪುಸ್ತಕ ಬಿಡುಗಡೆ, ಪ್ರತಿಭಾ ಪುರಸ್ಕಾರ

6ರಂದು ಗಂಗಾಮಾತೆ ಮಹಿಮೆ ಪುಸ್ತಕ ಬಿಡುಗಡೆ, ಪ್ರತಿಭಾ ಪುರಸ್ಕಾರ

ಅಥಣಿ 03: ಚಿಕ್ಕೋಡಿ ವಿಭಾಗ ಗಂಗಾಮತಸ್ಥರ ಕೋಳಿ ಸಮಾಜ ಹಾಗೂ ವ್ಯಾಸ ಮಹರ್ಷಿ, ನಿಜಶರಣ ಅಂಬಿಗರ ಚೌಡಯ್ಯ ಯೋಗ ಅಧ್ಯಯನ ಮತ್ತು ಸಂಶೋಧನೆ ಕೇಂದ್ರ ಅಥಣಿ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿಗಳಾದ ಎಸ್ ಕೆ ಹೊಳೆಪ್ಪನವರ ರವರು ರಚಿಸಿರುವ ಗಂಗಾಮಾತೆ ಮಹಿಮೆ ಪುಸ್ತಕ ಬಿಡುಗಡೆ ಹಾಗೂ 2022-2023ನೆಯ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಗಂಗಾಮತ ಸಮಾಜದ ವಿದ್ಯಾರ್ಥಿಗಳಿಗೆ ತೃತೀಯ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವು ಅಥಣಿಯ ರಾಜ್ಯ ಸರಕಾರಿ ನೌಕರರ ಸಭಾ ಭವನದಲ್ಲಿ ರವಿವಾರ ಅಗಸ್ಟ 6 ರಂದು ಮುಂಜಾನೆ 10 ಘಂಟೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕ ಎಸ್ ಕೆ ಹೊಳೆಪ್ಪನವರ ತಿಳಿಸಿದರು.     ಸುದ್ದಿಗೋಷ್ಡಿಯಲ್ಲಿ ಮಾತನಾಡುತ್ತಿದ್ದ ಅವರು ನಿವೃತ್ತ ವೈದ್ಯಾಧಿಕಾರಿ ಡಾ ಸುರೇಶ ಜೆ ಅಥಣಿ ಅಧ್ಯಕ್ಷತೆ ವಹಿಸಲಿದ್ದು,  ಖ್ಯಾತ ಕಾದಂಬರಿಕಾರ ಡಾ ಬಾಳಾಸಾಹೇಬ ಲೋಕಾಪುರ ಪುಸ್ತಕ ಬಿಡುಗಡೆ ಮಾಡುವರು, ಕಾರ್ಯಕ್ರಮದ ಉದ್ಘಟನೆಯನ್ನು ಹಾರೂಗೇರಿಯ ಬಿ.ಆರ್. ದರೂರ ಸಂಶೋಧನಾ ಕೇಂದ್ರದ ನಿವೃತ್ತ ನಿರ್ದೇಶಕ ಹಾಗೂ ಹಿರಿಯ ಸಾಹಿತಿ ಡಾ.ವ್ಹಿ.ಎಸ್.ಮಾಳಿ ಉದ್ಘಾಟಿಸುವರು.    ಮುಖ್ಯ ಅತಿಥಿಗಳಾಗಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ಅಧ್ಯಕ್ಷ  ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಎ ಚಿಕ್ಕಟ್ಟಿ ಯವರು ಆಗಮಿಸುವರು, ಸಾಹಿತಿ ಹಾಗೂ ಪ್ರೌಢಶಾಲೆಯ ಶಿಕ್ಷಕ ಚಿದಾನಂದ ಗೋಟೆ ರವರು ಪುಸ್ತಕ ಪರಿಚಯ ಮಾಡುವರು. ಇದೆ ಸಂದರ್ಭದಲ್ಲಿ ಅಥಣಿ ತಾಲೂಕಾ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಆರ್.ಎಸ್. ಪಾಟೀಲ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಅಥಣಿ ಅವರನ್ನು ಸನ್ಮಾನ ಮಾಡಲಾಗುವುದು ಎಂದರು. 

    ನಂತರ ಮುಂಜಾನೆ 11.30ಕ್ಕೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಗಂಗಾಮತಸ್ಥರ ಸಮಾಜ ಸಂಘದ ನಿಕಟಪೂರ್ವ ಅಧ್ಯಕ್ಷ ಗಂಗಾರಾಮ ಜಿ ತಳವಾರ ವಹಿಸುವರು, ಉದ್ಘಾಟನೆಯನ್ನು ಜಿಲ್ಲಾ ಗಂಗಾಮತಸ್ಥರ ಸಮಾಜ ಸಂಘದ ಅಧ್ಯಕ್ಷ, ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಲೀಪಕುಮಾರ ಕುರಂದೆವಾಡೆಯವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಉಪನ್ಯಾಸಕರಾಗಿ ಬೆಂಗಳೂರಿನ ಅಬಕಾರಿ ಅಧೀಕ್ಷಕ ವಿನೋದ ಬಿ ಢಂಗೆ ಯವರು, ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ ಆಗಮಿಸುವರು, ದಾವಣಗೆರೆಯ ಉಪನ್ಯಾಸಕರು, ಸಾಹಿತಿ ಮಹಾಂತೇಶ ಬಿ ನಿಟ್ಟೂರರವರನ್ನು ಸನ್ಮಾನಿಸಲಾಗುವುದು ಎಂದರು.  

ನಿವೃತ್ತ ತಹಶೀಲ್ದಾರ ರಮೇಶ ಅ ಘಸ್ತಿ, ಬಾಗಲಕೋಟದ ವ್ಯಾಪಾರಸ್ಥ ಯಲ್ಲಪ್ಪ ರಂಗಪ್ಪ ಡಿಗ್ಗಿ, ನಿವೃತ್ತ ಉಪ ತಹಸೀಲ್ದಾರ ಆರ್ ಜಿ ಶಿವಬಸಣ್ಣವರ, ಎಸ್ ಸಿ ಗಂಗಾಪುರ, ರಾಯಭಾಗದ ಸಣ್ಣಪ್ಪ ಸಿದ್ರಾಮ ಮೀಶಿ, ಬಾಗಲಕೋಟದ ನಿವೃತ್ತ ಶಿಕ್ಷಕಿ ಲೀಲಾವತಿ ಮಲ್ಲಪ್ಪ ಬಾರಕೇರ, ಚಿಕ್ಕಾಲಗುಡ್ಡದ ಅನಿಲ ಹನುಮಂತ ಅಂಬಿ, ವೀರಭದ್ರ ದುಂಡಗಿ, ಜಿಲ್ಲಾಗಂಗಾಮತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ  ಅಶೋಕ ಕಬ್ಬಲಿಗೇರ, ಗಂಗಾಮತ ಸಮಾಜದ ಪ್ರತಿನಿಧಿಗಳಾದ ಮಹಾಂತೇಶ ಸತ್ಯಪ್ಪ ಜೇಡರ, ಮಾರುತಿ ನಿಂಗಪ್ಪ ಸುಣಗಾರ, ನ್ಯಾಯವಾದಿಗಳಾದ ಸಂತೋಷ ಪ್ರಕಾಶ ಶಿರಗೆ, ಪ್ರವೀಣ ಅಶೋಕ ಪಲ್ಲೆದ, ಸಮಾಜದ ಮುಖಂಡರುಗಳಾದ ಬಸವರಾಜ ಎಸ್ ಕುರಂದೆವಾಡೆ, ಫಕೀರಪ್ಪ ಎಚ್ ಜುಂಜನ್ನವರ, ವಿನಾಯಕ ವಿಠ್ಠಲ ಕೊಚೇರಿ, ಪ್ರಾಚಾರ್ಯರು ದೀಪಕ ಶಿ. ಗಸ್ತಿ ಉಪಸ್ಥಿತರಿರುವರು ಎಂದು ತಿಳಿಸಿದರು.  ಸುದ್ದಿಗೋಷ್ಟಿಯಲ್ಲಿ ದೀಪಕ್ ಗಸ್ತಿ, ರವೀಂದ್ರ ಪಾಟೀಲ ಉಪಸ್ಥಿತರಿದ್ದರು 

ಸುದ್ದಿ ಓದಿ