ಕಾರವಾರ

ಓಂಬುಡ್ಸಮನ್ ಕಛೇರಿ ಪುನರಾರಂಭ

ಓಂಬುಡ್ಸಮನ್ ಕಛೇರಿ ಪುನರಾರಂಭ

ಕಾರವಾರ:  ಕೋವಿಡ-19ಕಾರಣದಿಂದ ಸುಮಾರು ಎರಡು ತಿಂಗಳಿಂದ ಸ್ಥಗಿತವಾಗಿದ್ದ ಉತ್ತರ ಕನ್ನಡ ಜಿಲ್ಲಾಓಂಬುಡ್ಸಮನ್ ಕಾರ್ಯಾಲಯದ ಕಾರ್ಯನಿರ್ವಹಣೆಯನ್ನು  ಪುನಃ ಪ್ರಾರಂಬಿಸಲಾಗಿದ್ದು, ಬಾಕಿ ಇರುವ ಹಾಗೂ ಈ ಎರಡು ತಿಂಗಳ ಅವಧಿಯಲ್ಲಿ ಸ್ವಿಕೃತವಾದ ಪ್ರಕರಣ, ದೂರುಗಳಿಗೆ ಸಂಬಂಧಿಸಿದಂತೆ ಈ ಕೂಡಲೇ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು.  

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲಾ, ತಾಲೂಕಾ ಮತ್ತು ಗ್ರಾಮ ಪಂಚಾಯತ್ ಅನಿಷ್ಟಾನಗೊಳಿಸುವ ಕಾಮಗಾರಿಗಳಲ್ಲಿ ಯೋಜನಾ ಮಾರ್ಗಸೂರ್ಚಿಗಳ ಉಲ್ಲಂಘನೆ, ಕೂಲಿಕಾರರ ಬದಲು ಯಂತ್ರಗಳ ಬಳಕೆ, ಗುತ್ತಿಗೆದಾರ ಬಳಕೆ, ಕಳಪೆ ಕಾಮಗಾರಿ, ಹಣ ದುರುಪಯೋಗ ಅಥವಾ ಗ್ರಾಮೀಣ ಕೂಲಿಕಾರರಿಗೆ ಮತ್ತು ಯೋಜನೆಯಡಿ ಫಲಾನುಭವಿಗಳಿಗೆ ಏನಾದರೂ ವಂಚನೆಯಾಗಿದ್ದಲ್ಲಿ ಓಂಬುಡ್ಸಮನ್ ಕಾರ್ಯಲಯ ಅಭಿಲೇಖಾಲಯ ಕಟ್ಟಡ, ಜಿಲ್ಲಾ ಪಂಚಾಯತ್ ಕಛೇರಿ ಆವರಣ ಕಾರವಾರ ವಿಳಾಸಕ್ಕೆ ಅಂಚೆ ಮೂಲಕ ಅಥವಾ ombud.utk@gmail.comಗೆ ಈಮೇಲ್ ಮೂಲಕ ಲಿಖಿತದೂರು ಸಲ್ಲಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ 9481853117 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಎಂದು ಓಂಬುಡ್ಸಮನ್ ಆರ್ ಜಿ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ