ಓಂ ನಮಃ ಶಿವಾಯ ಪಂಚಾಕ್ಷರಿ ಮಹಾಮಂತ್ರ ಜಪ
ರಾಣಿಬೆನ್ನೂರ 11: ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಸಿದ್ಧಾಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜು. 10 ರಿಂದ ಒಂದು ತಿಂಗಳ ಪರಿಯಂತರ ಪ್ರತಿದಿನ ಬೇಳಗಿನ ಜಾವ 5 ಗಂಟೆಗೆ ಓಂ ನಮಃ ಶಿವಾಯ ಪಂಚಾಕ್ಷರಿ ಮಹಾಮಂತ್ರ ಜಪ ಮಾಡುವ ಅವಕಾಶವನ್ನು ಶ್ರೀ ಮಠದ ಪೀಠಾಧಿಪತಿ ಗುರು ನಾಗರಾಜಾನಂದ ಸ್ವಾಮೀಜಿ ಕರುಣಿಸಿದ್ದಾರೆ. ಸರ್ವ ಭಕ್ತರು ಈ ಪುಣ್ಯಮಯ ಸತ್ಸಂಗದಲ್ಲಿ ಪಾಲ್ಗೊಂಡು ತಮ್ಮ ಜೀವನ ಸಾರ್ಥಕತೆ ಹಾಗೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಫಕ್ಕೀರ್ಪ ಗೌಡ್ರ ತಿಳಿಸಿದ್ದಾರೆ.
ಓಂ ನಮಃ ಶಿವಾಯ ಪಂಚಾಕ್ಷರಿ ಮಹಾಮಂತ್ರ ಜಪ ಯಜ್ಞದಲ್ಲಿ ಭಾಗವಹಿಸಲು ಇಚ್ಚಿಸುವವರು ಶ್ರೀಮಠದಲ್ಲಿ ತಮ್ಮ ಹೆಸರು ನೊಂದಾಸಿಕೊಳ್ಳಲು ಜನಾರ್ಧನ ಕಡೂರ ಇವರನ್ನು 9972272712 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.