ಚಿಕ್ಕೋಡಿ

ಕಾಳಜಿ ಕೇಂದ್ರಕ್ಕೆ ಅಧಿಕಾರಿಗಳ ಭೇಟ್ಟಿ; ಪರೀಶೀಲನೆ

ಕಾಳಜಿ ಕೇಂದ್ರಕ್ಕೆ ಅಧಿಕಾರಿಗಳ ಭೇಟ್ಟಿ; ಪರೀಶೀಲನೆ

ಮಾಂಜರಿ,07: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಪ್ರವಾಹ ಸಂತ್ರಸ್ಥರಿಗಾಗಿ ತೆರೆಯಲಾದ ಕಾಳಜಿ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಮೇಲಿನ ಅಧಿಕಾರಿಗಳು ಮತ್ತು ಇಲ್ಲಿಯ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ತಪ್ಪು ಮಾಹಿತಿ ವದರಿಯಾಗಿದ್ದು, ಮೇಲಾಧಿಕಾರಿಗಳು ಇಲ್ಲಿಗೆ ಭೇಟ್ಟಿ ನೀಡಿ, ಸ್ಥಳ ಪರೀಶೀಲನೆ ಮಾಡಿ, ಪಂಚನಾಮೆ ಮಾಡಿದ್ದು, ಯಾವುದೇ ರೀತಿಯ ಅವ್ಯವಹಾರ ಆಗಿಲ್ಲವೆಂದು ನೊಡಲ್ ಅಧಿಕಾರಿ ವಿರುಪಾಕ್ಷಿ ಭಂಡಾರಕರ ಸ್ಪಷ್ಟನೆ ನೀಡಿದ್ದಾರೆ.  

ಅವರು ಹೊಸ ಇಂಗಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಕಾಳಜಿ ಕೇಂದ್ರದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡುತ್ತಾ ಮಾತನಾಡುತ್ತಿದ್ದರು. ಜುಲೈ 27 ಗ್ರಾಮದ ಧನವಾಡೆ ತೋಟದ ಮನೆಗಳಿಗೆ ಪ್ರವಾಹ ಬಂದ ಹಿನ್ನಲ್ಲೆಯಲ್ಲಿ ಅಲ್ಲಿದ್ದ 260 ಜನರನ್ನು ಅದೇ ದಿನ ಇಲ್ಲಿ ಪ್ರಾರಂಭಿಸಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ, ಅವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದೇವೆ. ಅಂದು ಸಂಜೆ ಅವರೆಲ್ಲರೂ ತಮ್ಮ ತಮ್ಮ ಸಂಬಂಧಿಕರ ಮನೆಗಳಿಗೆ ಹೋದವರು ಆಗಷ್ಟ 1 ರ ವರೆಗೆ ಕಾಳಜಿ ಕೇಂದ್ರಕ್ಕೆ ಬಂದಿಲ್ಲವಾದ ಕಾರಣ ಅದೇ ದಿನ ನಾವು ಈ ಕಾಳಜಿ ಕೇಂದ್ರವನ್ನು ಸ್ಥಗಿತಗೊಳಿಸಿದ್ದೇವೆ. ಆದರೇ ಕೇವಲ ಜುಲೈ 27 ಮಧ್ಯಾಹ್ನದ ಊಟದ ವ್ಯವಸ್ಥೆ ಮಾತ್ರ ಮಾಡಲಾಗಿದೆ ಎಂದರು.  

ಇನ್ನೂ ಮಾಜಿ ಗ್ರಾ.ಪಂ. ಸದಸ್ಯರಾದ ವಿಶ್ವನಾಥ ಹುಚ್ಚಟ್ಟೆ ಮಾತನಾಡಿ, ಇಂಗಳಿ ಗ್ರಾಮದ ಕಾಳಜಿ ಕೇಂದ್ರದಲ್ಲಿ ಅವ್ಯವಹಾರ ವಾಗಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದ್ದು, ಇದರಿಂದ ನಮ್ಮ ಗ್ರಾಮದ ಹೆಸರಿಗೆ ಕೆಟ್ಟ ಹೆಸರು ಬಂದಿದೆ. ಆ ರೀತಿಯಾದ ಯಾವುದೇ ಘಟನೆ ಸಂಭವಿಸಿಲ್ಲ. ಅಧಿಕಾರಿಗಳ ತಪ್ಪಿನಿಂದಾಗಿ ಇಂತಹ ಅಚಾತುರ್ಯ ಸಂಭವಿಸಿದೆ ಎಂದರು.   

ಇದಕ್ಕೂ ಮೊದಲು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಶೀಲ್ದಾರ ಚಿದಂಬರ ಕುಲಕರ್ಣಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟ್ಟಿ ನೀಡಿ, ಪಂಚನಾಮೆ ಮಾಡಿ, ಸ್ಪಷ್ಟನೆ ನೀಡಿದ್ದಾರೆ.  

 ಈ ಸಮಯದಲ್ಲಿ ರಮೇಶ ಮುರಚಿಟ್ಟೆ, ಚಂದ್ರಕಾಂತ ಲಂಗೋಟೆ, ವಿಲಾಸ ಪವಾರ, ಬಸವರಾಜ ಚೌಗುಲೆ, ಸಂಜು ಗುರವ, ಸಿದ್ರಾಮ ಶೇಳಕೆ, ಶಾಂತಿನಾಥ ಪಣದೆ, ಪ್ರಕಾಶ ಚಿಗರೆ, ರಾಮಾ ಐಹೊಳೆ, ಪ್ರಕಾಶ ಪಾಟೋಳೆ, ಡಾ. ಅಜೀತ ಚಿಗರೆ, ಸುನೀಲ ಪಾಟೋಳೆ, ಅಣ್ಣಾಸಾಬ ಸರಡೆ, ಪಿಡಿಓ ಎಸ್‌.ಎಚ್‌. ಸಿದ್ದಪ್ಪಾ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ವಡ್ಡರ ಸೇರಿದಂತೆ ಗ್ರಾಮದ ಅನೇಕ ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ