ಚಿಕ್ಕೋಡಿ

‘ಅಧಿಕಾರಿಗಳು ಆಕ್ಸಿಜನ್‌ಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’

‘ಅಧಿಕಾರಿಗಳು ಆಕ್ಸಿಜನ್‌ಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’

ಚಿಕ್ಕೋಡಿ 20: ಹಳ್ಳಿಗಳಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬಿಕೊಂಡಿದೆ. ಜನರಿಗೆ ಸೂಕ್ತ ಚಿಕಿತ್ಸೆ ಸಿಗಲು ಗ್ರಾಮ ಪಂಚಾಯತ್ ವಾರ್ಡಗಳ ಸಮನ್ವಯ ಸಾಧಿಸಲು ವಾಟ್ಸಆಪ್ ಗ್ರೂಪ್ ಮುಖಾಂತರ ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ವಿವರ, ಬೆಡ್ಡಗಳ ಸಂಖ್ಯೆ, ವೆಂಟಿಲೆಟರ್‌ಗಳ ಸಂಖ್ಯೆ, ಆಕ್ಸಿಜನ್‌ಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಗ್ರಾಮ ಪಂಚಾಯತ ವ್ಯಾಪ್ತಿಗೆ ವಾರ್ ರೂಂ 24*7 ಕ್ರಿಯಾಶೀಲಗೊಳಿಸಬೇಕು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಸೂಚಿಸಿದರು. 

ಗುರುವಾರ ವಿಡಿಯೋ ಕಾನ್ಪರನ್ಸ್‌ ಮೂಲಕ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗಗಳಲ್ಲಿ ಕೋವಿಡ್‌-19 ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರವು ನೀಡಿರುವ ಆದೇಶಗಳನ್ನು ಪಾಲಿಸಲು ಮತ್ತು ಗ್ರಾಮೀಣ ಭಾಗಗಳಲ್ಲಿ ಈ ರೋಗವು ಹೆಚ್ಚು ಹರಡದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ಎಚ್ಚರಿಕೆ ವಹಿಸಲು ಸೂಚಿಸಬೇಕು ಎಂದರು. 

ಕಡ್ಡಾಯವಾಗಿ ಮಾಸ್ಕ ಹಾಗೂ ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. 15 ನೇ ಹಣಕಾಸು ಯೋಜನೆಯಲ್ಲಿ ಕೋವಿಡ್‌-19ರ ಉಪಕರಣಗಳಾದ ಮಾಸ್ಕ, ಸ್ಯಾನಿಟೈಜರ್, ಪಿಪಿಇ ಕಿಟ್, ಪಲ್ಸ ಆಕ್ಸಿಮಿಟರ್, ಥರ್ಮೊ ಸ್ಯಾ-್ಕನರಗಳನ್ನು, ಎಲೆಕ್ಟ್ರೀಕಲ್ ಬನ್ರಿಂಗ್ ಮಶೀನ ಖರೀದಿಸಲು ಅವಕಾಶವಿರುತ್ತದೆ. ಹಾಗೂ ಸೋಂಕಿತರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಹಾಗೂ ಶವಗಳನ್ನು ಸಾಗಿಸಲು ವಾಹನವನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಳ್ಳಬಹುದು. 

ಕೆಮ್ಮು, ಶೀತ, ಜ್ವರದ ರೋಗ ಲಕ್ಷಗಳು ಕಂಡು ಬಂದಲ್ಲಿ ತಕ್ಷಣ ಕೊರೊನಾ ಟೆಸ್ಟನ್ನು ಮಾಡಿಸಿಕೊಳ್ಳಬೇಕು. ಲಕ್ಷಣರಹಿತ ಸೋಂಕಿತರಿದ್ದಲ್ಲಿ ಹೋಮ್ ಐಸೋಲೇಶನ್ ಇರುವುದು, ಮಧ್ಯಮ ರೋಗ ಲಕ್ಷಗಳಿದ್ದಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವುದು. ತೀವ್ರ ರೋಗ ಲಕ್ಷಗಳಿದ್ದಲ್ಲಿ ಆಸ್ಪತ್ರೆಗೆ ದಾಖಲಿಸಬೇಕು ಎಂದರು. 

ಗ್ರಾಮ ಪಂಚಾಯತಿಯ ನರೆಗಾ ಯೋಜನೆಯಡಿಯಲ್ಲಿ ಕೇರೆ ಹೂಳೆತ್ತುವದು ಹಾಗೂ ಇನ್ನಿತರ ಕಾರ್ಯ ನಡೆಯುತ್ತಿದೆ. ಸುಮಾರು 100 ರಿಂದ 200 ಕೆಲಸಗಾರರು ಜೊತೆಗೂಡಿಕೊಂಡು ಕೆಲಸದಲ್ಲಿ  ಸಾಮಾಜಿಕ ಅಂತರ ಕಾಯ್ದುಕೊಂಡತಾಗುವುದಿಲ್ಲ ಅದಕ್ಕಾಗಿ 20 ರಿಂದ 30 ಜನರ ಗುಂಪುಗಳನ್ನಾಗಿ ವಿಂಗಡಿಸಿ ಕೆಲಸ ಮಾಡಿಸುವುದು ಸೂಕ್ತ ಅಥವಾ ಸದ್ಯದ ಮಟ್ಟಿಗೆ ಆ ದಿನಗೂಲಿ ಕಾರ್ಮಿಕರಿಗೆ ಇದೆ ನರೆಗಾ ಯೋಜನೆಯಡಿಯಲ್ಲಿ ವ್ಯಕ್ತಿಗತವಾಗಿ ರಸ್ತೆಯ ಬದಿಯಲ್ಲಿ ಸಸಿ ನೆಡುವ ಕೆಲಸವನ್ನು ಪ್ರಾರಂಭಿಸುವುದು ಸೂಕ್ತ ಎಂದು ಸೂಚಿಸಿದರು. 

ಗ್ರಾಮಗಳಲ್ಲಿ ಸಾರ್ವಜನಿಕರ ಜೊತೆ ನೆರವಾಗಿ ಸಂಪರ್ಕದಲ್ಲಿದ್ದುಕೊಂಡು ಸಾರ್ವಜನಿಕರ ಹಾಗೂ ಗ್ರಾಮದ ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ ಪ್ರತಿಯೊಂದು ಗ್ರಾಮ ಪಂಚಾಯತಿಗಳ ಪಿ.ಡಿ.ಓ ಮತ್ತು ಸಿಬ್ಬಂದಿ ವರ್ಗದವರನ್ನು ಕೊರೊನ ಪ್ರಂಟ್ ಲೈನ್ ವಾರಿಯರ್ಸಗಳಾಗಿ ಪರಿಗಣಿಸಬೇಕೆಂದು ಸಚಿವ ಕೆ.ಎಸ್‌.ಈಶ್ವರ​‍್ಪ ಅವರಿಗೆ ಮನವಿ ಮಾಡಲಾಗಿದೆ ಎಂದರು. 


ಸುದ್ದಿ ಓದಿ