15 ದಿನಗಳಲ್ಲಿ ದುರಸ್ತಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ
ಲೋಕದರ್ಶನ ವರದಿ
ಘಟಪ್ರಭಾ ಬಲದಂಡೆ ಮುಖ್ಯ ಕಾಲುವೆ ಪರೀಶೀಲಿಸಿದ ಸಚಿವ ಜಾರಕಿಹೊಳಿ
ಬೆಳಗಾವಿ : ಜಿಲ್ಲೆಯಯರಗಟ್ಟಿತಾಲೂಕಿನಕೊಡ್ಲಿವಾಡ, ಮುಗ್ಲಿಹಾಳ ಹಾಗೂ ಗೋಕಾಕ ತಾಲೂಕಿನಕೌಜಲಗಿ ಸಮೀಪದಘಟಪ್ರಭಾ ಬಲದಂಡೆ ಮುಖ್ಯ ಕಾಲುವೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಕಾಲುವೆಯ ವಿವಿಧ ಭಾಗಗಳಲ್ಲಿ ಹಾನಿಯಾಗಿರುವುದರಿಂದ ನೀರು ಸಮರ್ಕವಾಗಿ ಹರಿಯದೆ, ಕಾಲುವೆ ಅಂಚಿನ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರುತಲುಪುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಪರೀಶೀಲನೆ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ಕಾಲುವೆಯಲ್ಲಿ ನೀರು ಸೋರಿಕೆಯಾಗದಂತೆತಡೆಯುವ ದುರಸ್ತಿ ಕಾಮಗಾರಿಯನ್ನು 15 ದಿನಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಜೊತೆಗೆ, ಕಾಲುವೆಯಕೊನೆಯ ಹಂತದವರೆಗೂ ನೀರು ಸಮರ್ಕವಾಗಿತಲುಪುವಂತೆಅಗತ್ಯಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಎದುರಾಗದಂತೆ ವಿಶೇಷ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈಗಾಗಲೇ ಕಾಲುವೆಗೆ ನೀರು ಹರಿಸಲಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಸದ್ಯ ಈ ಭಾಗದಲ್ಲಿ ನೀರಿನಕೊರತೆಇಲ್ಲದಿದ್ದರೂ, ನೀರು ಸೋರಿಕೆಯಾಗದೆ ಸಮರ್ಕವಾಗಿ ಬಳಕೆಯಾಗುವಂತೆ ಅಗತ್ಯ ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ತಿಳಿಸಿದರು.
ಪರೀಶೀಲನೆ ವೇಳೆ ಶಂಕರ್ ಇಟ್ನಾಳ, ಮಲ್ಲಿಕ ಬಾಗವಾನ, ನಿಂಗಪ್ಪಾಕುರಬೇಟ, ಶಿವನಗೌಡ ಪಾಟೀಲ, ಅಶೋಕ ಕಂಟರಡ್ಡಿ, ಎಂ.ಆರ್. ಬೂವಿ, ನೀಲಪ್ಪಾಕಿವಿಟಿ, ರವಿ ಪರವಸಟ್ಟಿ ಸೇರಿದಂತೆಯರಗಟ್ಟಿ, ಗೋಕಾಕ ಹಾಗೂ ಅರಭಾವಿ ಕ್ಷೇತ್ರಗಳ ವಿವಿಧ ಗ್ರಾಮಗಳ ಮುಖಂಡರು ಮತ್ತು ನೀರಾವರಿಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.