ಪತ್ರಿಕಾ ವರದಿಗಳಲ್ಲಿ ವಸ್ತುನಿಷ್ಠತೆಯನ್ನು ಕಾಪಾಡಬೇಕು: ವಿಜಯಲಕ್ಷ್ಮಿ ತುಂಗಳ
ಜಮಖಂಡಿ 24: ಪತ್ರಿಕಾ ವರದಿಗಳಲ್ಲಿ ವಸ್ತುನಿಷ್ಠತೆಯನ್ನು ಕಾಪಾಡಬೇಕು. ಪತ್ರಿಕಾರಂಗದ ಪಾವಿತ್ರ್ಯತೆಯನ್ನು ಕಾಪಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪತ್ರಕರ್ತರು ಗಟ್ಟಿಗೊಳಿಸಬೇಕು ಎಂದು ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮಿ ತುಂಗಳ ಹೇಳಿದರು.
ನಗರದ ಕಾನಿಪ ಸಂಘದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರಧಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನಿಪ ಸಂಘದ ಅಧ್ಯಕ್ಷ ಅಪ್ಪು ಪೊತರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುದ್ರಣ ಮಾಧ್ಯಮಕ್ಕೆ ಸಾವಿಲ್ಲ, ಸಾಮಾಜಿಕ ಜಾಲತಾಣ ವೇಗವಾಗಿ ಬೆಳೆದಷ್ಟು ಕುಟುಂಬದಲ್ಲಿಯೇ ಸಂಬಂಧಗಳು ಕೆಟ್ಟು ಹೋಗುತ್ತಿವೆ. ಜುಲೈ 1ರಿಂದ ಪ್ರಾರಂಭವಾದ ಮಂಗಳೂರು ಸಮಾಚಾರ ಪತ್ರಿಕೆಯು ನಾವು ಇಂದು ಜುಲೈ ತಿಂಗಳವಿಡಿ ಪತ್ರಿಕಾ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ. ಪತ್ರಿಕೆಗಳು ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡುತ್ತಿವೆ. ಇಂತಹ ಮಹತ್ವದ ಕಾರ್ಯದಲ್ಲಿ ಪತ್ರಕರ್ತರು ನಿರಂತರವಾಗಿ ಸಮಾಜ ಸೇವೆ ಮಾಡಬೇಕು ಎಂದರು.
ಹಲವಾರು ಪತ್ರಕರ್ತರ ಜೀವನ ಇಂದಿಗೂ ಅತಂತ್ರ ಸ್ಥಿತಿಯಲ್ಲಿದೆ. ಪತ್ರಕರ್ತರು ಪ್ರಾಕೃತಿಕ ವಿಕೋಪಗಳು ಸಂದರ್ಭದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಸುದ್ದಿ ಮಾಡಬೇಕು. ಪತ್ರಕರ್ತರಿಗೆ ಯಾವುದೇ ಭದ್ರತೆ ಇಲ್ಲ ಸರ್ಕಾರ ಪತ್ರಕರ್ತರಿಗೆ ಸೂಕ್ತವಾದ ಭದ್ರತೆ ನೀಡಬೇಕು. ಸುದ್ದಿ ಮಾಡಲು ಹೋದ ಪತ್ರಕರ್ತರಿಗೆ ಯಾವುದೆ ರಕ್ಷಣೆ ಇಲ್ಲದೆ ಸಾಕಷ್ಟು ಪತ್ರಕರ್ತರ ಮೇಲೆ ಹಲ್ಲೆಗಳಾಗಿವೆ, ಕೊಲೆಗಳಾಗಿವೆ ಇದರಿಂದ ಅವರ ಕುಟುಂಬ ಬಿದಿಗೆ ಬಿಳುತ್ತೆ. ಸಮಾಜವೇ ಎಂದು ಹಗಲು ರಾತ್ರಿ ಕೆಲಸ ಮಾಡಿ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾರೆ, ಪತ್ರಕರ್ತರ ನಿಗಮ ಸ್ಥಾಪಿಸಿ ನಮಗೆ ಆರ್ಥಿಕವಾಗಿ ಮೇಲೆ ಬರುಲು ಸರ್ಕಾರ ಮುಂದಾಗಬೇಕು ಎಂದರು.
ತಹಶೀಲ್ದಾರ ಸದಾಶಿವ ಮಕ್ಕೋಜಿ, ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಧಲಬಂಜನ ಮಾತನಾಡಿದರು, ಪತ್ರಕರ್ತ ಟಿ.ಪಿ. ಗಿರಡ್ಡಿ ಅವರಿಗೆ ದಿ,ಬಾಬುರೆಡ್ಡಿ ತುಂಗಳ ಪ್ರಶಸ್ತ್ತಿ ಸ್ವೀಕರಿಸಿದರು. ಪತ್ರಕರ್ತರ ಪ್ರತಿಭಾವಂತ ಮಕ್ಕಳಾದ ಫಲ್ಗುಣಾ ಪಾಟೀಲ, ಗುರುಪ್ರಸಾದ ಮಠ, ಸ್ನೇಹಾ ಅರಕೇರಿ, ಅನುಶ್ರೀ ಪೋತರಾಜ, ಸಿದ್ದಾರ್ಥ ಅರಕೇರಿ ಅವರ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಪತ್ರಿಕಾ ವಿತರಕರಾದ ರಘುನಾಥ ಝಾಂಬರೆ, ಅಕ್ಷಯ ಕೋಲೂರ, ಹಾಗೂ ಹೋರಾಟಗಾರ ನಾಗೇಶ ಜತ್ತಿಯನ್ನು ಸನ್ಮಾನಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್. ಗಲಗಲಿ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ ಸಂಖ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ವಿಸ್ತರ್ಣಾಧಿಕಾರಿ ಸಂತೋಷ ಬಾಡಗಿ ಇದ್ದರು. ಗುರುರಾಜ ಹಿಡಕಲ್ ಪ್ರಾರ್ಥನೆ ಗೀತೆ ಹಾಡಿದರು. ಶಿವಾನಂದ ಕೊಣ್ಣೂರ ಸ್ವಾಗತಿಸಿದರು. ಮಲ್ಲಿಕಾರ್ಜುನ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಫೀಕ ಮಾರಕಪನಳ್ಳಿ ಭಿನ್ನವತ್ತಳೆ ಓದಿದರು. ಬಾಲಕಿ ಸಾನ್ವಿ ಅರಕೇರಿ ಭಕ್ತಿಗೀತೆ ಹಾಡಿದರು. ಮುಖ್ಯ ಶಿಕ್ಷಕ ಶಂಕರ ಲಮಾಣಿ ನಿರೂಪಿಸಿದರು. ಆರ್.ಎಸ್. ಹೊನಗೌಡ ವಂದಿಸಿದರು.
ಪತ್ರಕರ್ತರ ನಿಗಮ ಸ್ಥಾಪಿಸಿ ನಮಗೆ ಆರ್ಥಿಕವಾಗಿ ಮೇಲೆ ಬರುಲು ಸರ್ಕಾರ ಮುಂದಾಗಬೇಕು. ಪತ್ರಕರ್ತರಿಗೆ ಯಾವುದೇ ಭದ್ರತೆ ಇಲ್ಲ ಸರ್ಕಾರ ಪತ್ರಕರ್ತರಿಗೆ ಸೂಕ್ತವಾದ ಭದ್ರತೆ ನೀಡಬೇಕು.ಸುದ್ದಿ ಮಾಡಲು ಹೋದ ಪತ್ರಕರ್ತರಿಗೆ ಯಾವುದೆ ರಕ್ಷಣೆ ಇಲ್ಲದೆ ಸಾಕಷ್ಟು ಪತ್ರಕರ್ತರ ಮೇಲೆ ಹಲ್ಲೆಗಳಾಗಿವೆ, ಕೊಲೆಗಳಾಗಿವೆ ಇದರಿಂದ ಅವರ ಕುಟುಂಬ ಬಿದಿಗೆ ಬಿಳುತ್ತೆ. ಸಮಾಜವೇ ಎಂದು ಹಗಲು ರಾತ್ರಿ ಕೆಲಸ ಮಾಡಿ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾರೆ ಎಂದರು.
ಕಾನಿಪ ಅಧ್ಯಕ್ಷ ಅಪ್ಪು ಪೋತರಾಜ,
ಜಮಖಂಡಿ,