ರಾಷ್ಟ್ರೀಯ

ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು...!

ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು...!

ನವದೆಹಲಿ, ಅ  22 : ಪೆಟ್ರೋಲ್ ಬೆಲೆಯ ಹೆಚ್ಚಳದ ನಂತರ  ಇದೀಗ ಮುಂಬೈ ಮತ್ತು ಪೂನಾ, ಮಹಾರಾಷ್ಟ್ರ ಪೂನಾದಲ್ಲಿ ಸೇರಿದಂತೆ ಅನೇಕ  ನಗರಗಳಲ್ಲಿ  ಈರುಳ್ಳಿ ಬೆಲೆ ಗಗನ ಮುಟ್ಟಿದ್ದು,  ಕೊಂಡುಕೊಳ್ಳುವ ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು ತರಿಸುತ್ತಿದೆ. 

ಮಹಾರಾಷ್ಟ್ರದ  ನಾಸಿಕ್ ನ ಲಾಸಾಲ್ ಗಾಂವ್ ಸಗಟು ಮಾರುಕಟ್ಟೆಯಲ್ಲಿ ದರ ಏರಿಕೆಯಿಂದಾಗಿ ಮುಂಬೈ ಮತ್ತು ಪೂನಾ ಮತ್ತಿತರೆ ಕಡೆ  ಈರುಳ್ಳಿ ಪ್ರತಿ ದರ ಹೆಚ್ಚಾಗಿದೆ.ನೂರು ರೂಪಾಯಿಗೆ ತಲುಪಿದೆ ಎಂದೂ  ವರದಿಯಾಗಿದೆ. 

ಲಸಾಲ್ ಗಾಂವ್ ಏಷ್ಯಾದ ಅತೀ ದೊಡ್ಡ ಈರುಳ್ಳಿ    ಮಾರುಕಟ್ಟೆಯಾಗಿದೆ. ಪೂನಾದಲ್ಲಿ ಪ್ರತಿ ಕೆ.ಜಿ. ಈರುಳ್ಳಿ ಬೆಲೆ 100ರಿಂದ 120 ರೂಪಾಯಿಗೆ ಏರಿಕೆಯಾಗಿದೆ . ಮಳೆಯ ಕಾರಣ  ಈರುಳ್ಳಿ ಸರಬರಾಜು ಕಡಿಮೆಯಾಗಿರುವುದೇ  ಬೆಲೆ ಏರಿಕೆಗೆ ಕಾರಣವಾಗಿದೆ. ಪ್ರತಿ ವರ್ಷ ಈರುಳ್ಳಿ ಕಣ್ಣೀರು ಹರಿಸುವುದರ ಜೊತೆಗೆ ಸುದ್ದಿಗೆ ಗುದ್ದು ಕೊಡುತ್ತಿದೆ. ಕೆಲವು ಭಾರಿ ಸರ್ಕಾರಗಳನ್ನು ಗಡ ಗಡ ನಡುಗಿಸಲಿದೆ.  

 


ಸುದ್ದಿ ಓದಿ