ಮನರಂಜನೆ

ಒ ಟಿ ಟಿ ಜನಪ್ರಿಯತೆ … ಟಾಪ್‌ 5 ಪಟ್ಟಿಯಲ್ಲಿ ಸಮಂತಾ

ಒ ಟಿ ಟಿ ಜನಪ್ರಿಯತೆ … ಟಾಪ್‌ 5 ಪಟ್ಟಿಯಲ್ಲಿ ಸಮಂತಾ

ಮುಂಬೈ, ಡಿ 30 :  ಒಟಿಟಿಯಲ್ಲಿ ಹೆಚ್ಚು ಜನಪ್ರಿಯ ನಟ ನಟಿಯರ ಪಟ್ಟಿಯನ್ನು ಒರ್ಮಾಕ್ಸ್ ಮೀಡಿಯಾ ಬಿಡುಗಡೆ ಮಾಡಿದೆ. ಭಾರತೀಯ OTT ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ಅಭಿನಯದಿಂದ ಪ್ರಭಾ ವಬೀರಿದ ಟಾಪ್ ಐವರು ನಟರ ಪಟ್ಟಿಯಲ್ಲಿ ಸಮಂತಾ ಕೂಡ ಇರುವುದು ವಿಶೇಷ. ಆಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಮನೋಜ್ ಬಾಜಪೇಯಿ, ಎರಡನೇ ಸ್ಥಾನದಲ್ಲಿ ಮನೋಜ್ ತ್ರಿಪಾಠಿ, ಮೂರನೇ ಸ್ಥಾನದಲ್ಲಿ ನವಾಜುದ್ದೀನ್ ಸಿದ್ದಿಕಿ ಹಾಗೂ ನಾಲ್ಕನೇ ಸ್ಥಾನದಲ್ಲಿ ಸಮಂತಾ ಇದ್ದಾರೆ. ನಂತರದ ಸ್ಥಾನದಲ್ಲಿ ರಾಧಿಕಾ ಆಪ್ಟೆ, ಕೆಕೆ ಮೆನನ್, ಸೈಫ್ ಅಲಿ ಖಾನ್, ಸುಶ್ಮಿತಾ ಸೇನ್, ಜಿತೇಂದ್ರ ಕುಮಾರ್ ಹಾಗೂ ತಮನ್ನಾ ಭಾಟಿಯಾ ಪಡೆದುಕೊಂಡಿದ್ದಾರೆ.

‘ಫ್ಯಾಮಿಲಿ ಮ್ಯಾನ್ 2’ ನಲ್ಲಿ ಗ್ರೇ ಶೆಡ್ಸ್ ಪಾತ್ರದಲ್ಲಿ ಸಮಂತಾ ಅದ್ಬುತವಾಗಿ ಅಭಿನಯಿಸಿದ್ದರು. ಆ ಪಾತ್ರದಲ್ಲಿ ಡಿಗ್ಲಾಮರ್ ಆಗಿ ಕಾಣಿಸಿಕೊಂಡಿದ್ದರೂ, ಆಕೆಯ ಅಭಿನಯ, ಆಕ್ಷನ್ ಸನ್ನಿವೇಶಗಳಲ್ಲಿ ಆಕೆ ಪ್ರದರ್ಶಿಸಿರುವ ಪ್ರತಿಭೆಗೆ ಭಾರತೀಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಕ್ರೆಡಿಟ್‌ನೊಂದಿಗೆ ಸಮಂತಾ ಬಾಲಿವುಡ್‌ಗೆ ಈಗ ಸುಲಭವಾಗಿ ಎಂಟ್ರಿ ಕೊಡುತ್ತಿದ್ದಾರೆ. ಅವರು ನಾಯಕಿಯಾಗಿ ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳು ಪ್ಲಾನಿಂಗ್‌ನಲ್ಲಿವೆ.

ಸುದ್ದಿ ಓದಿ