ಕಥೆ ಮತ್ತು ವಿಶೇಷ ಲೇಖನಗಳು

ಓ ಬಾಲ್ಯ ನೀ ಮತ್ತೊಮ್ಮೆ ಮರಳಿ ಬರಬಾರದೇ

ಓ ಬಾಲ್ಯ ನೀ ಮತ್ತೊಮ್ಮೆ ಮರಳಿ ಬರಬಾರದೇ

-ಪ್ರಭಾ .ಅ. ಪಾಟೀಲ, ಬೆಳಗಾವಿ

ಯಾಕೋ ಗೊತ್ತಿಲ್ಲ ನಿನ್ನೆಯಿಂದ ಬಾಲ್ಯದಲ್ಲಿ ಕಳೆದ ನೆನಪುಗಳು ಮರುಕಳಿಸುತ್ತ್ತೀವೆ ಯಾವುದೇ ಜವಾಬ್ದಾರಿ ಇರದ ಮನಸ್ಸಿಗೆ ಹೇಗ್ ಅನಿಸುತ್ತೋ ಹಾಗೆ ಇರುವ ನಿನ್ನೇಯ ಚಿಂತೆಯಿಲ್ಲ ನಾಳೆಯ ಹಂಗಿಲ್ಲ ಹೇಗೆ ಎಂಬ ಅಳುಕು ಇಲ್ಲ ಇಂದಿನದನ್ನು ಅನುಭವಿಸುತ್ತ ತಂದೆ ತಾಯಿ ಎಂಬ ಭದ್ರ ಕೋಟೆಯಲ್ಲಿ ಹಾಯ್ ಆಗಿರುತ್ತೇವೆ.

ತಾಯಿ ಯಲ್ಲಮ್ಮನ ಸನ್ನಿಧಿಯಲ್ಲಿರುವ ಸವದತ್ತಿಯಲ್ಲಿ ನನ್ನ ಬಾಲ್ಯ ಕಳೆದದ್ದು 8 ಮನೆಗಳು ಇರುವ ವಠಾರ  ನಮ್ಮಮನೆ ಹೀಗಾಗಿ ಒಂದೇ ವಯಸ್ಸಿನ ಮಕ್ಕಳ ಒಡನಾಟ ಹಾಗೂ ಬೇರೆ ಜಾತಿಯವರು ಬಂದು ಮನೆಗಳಲ್ಲಿ ನೆಲೆಸುವುದರಿಂದ   ಬೇರೆ ಬೇರೆ ಸಂಸ್ಕೃತಿಯ ಆಚಾರ ವಿಚಾರಗಳ ಅರಿವು ನನಗಾಯಿತು ಕೂಡಿ ಆಡುವುದು ಕೂಡಿ ನಲಿಯುವುದು ಒಬ್ಬರ ಕಷ್ಟ ಸುಖದಲ್ಲಿ ಒಬ್ಬರು ಭಾಗೀ ಆಗುವುದು ಯಾವುದೇ ಹಬ್ಬ-ಹರಿದಿನ ಬಂದರೂ ಏನೇ ಸ್ಪೇಷಲ್ ತಿಂಡಿ ತಯಾರಿಸಿದರೂ ಎಲ್ಲರ ಮನೆಗೂ ಹಂಚಿ ತಿನ್ನುವುದು ಇದೆಲ್ಲವನ್ನೂ ನಾ ಕಲಿತೆ ವಿವಿಧತೆಯಲ್ಲಿ ಏಕತೆ ನಾವು ಒಟ್ಟು ನಾಲ್ಕು ಜನ ಮಕ್ಕಳು  ನಮ್ಮ  ತಂದೆ ಶಿಕ್ಷರಾದ್ದರಿಂದ  ಹಾಗೆಯೇ ಮನೆಯಲ್ಲಿ ದೊಡ್ಡಪ್ಪನ ಮಕ್ಕಳು ಸೋದರ ಮಾವನ ಮಕ್ಕಳು ಎಲ್ಲರೂ ಸ್ಕೂಲಿಗೆ ಇಲ್ಲೇ ಇದ್ದರು ಹೀಗಾಗಿ ಮನೆಯಲ್ಲಿ ಗದ್ದಲವೋ ಗದ್ದಲ ಎಲ್ಲರೂ ಸೇರಿ ಲಗೋರಿ ಕಣ್ಣಾಮುಚ್ಚಾಲೆ ಕುಂಟೆ ಬಿಲ್ಲೆ ಕೋ ಕೋ ಆಟಗಳನ್ನು ಹಿತ್ತಲಲ್ಲಿ ಆಡುತ್ತಿದ್ದೆವು ಹಿತ್ತಲಲ್ಲಿ ಒಂದು ಹುಣಸೇ ಮರ ಪೇರು ಮರ ಇತ್ತು ಕಲ್ಲು ಹೊಡೆದು ಹುಣಸೆ ಹಣ್ಣು ಬಿಡಿಸಿ ಉಪ್ಪು ಖಾರ ಹಾಕಿ ಚಿಗಳಿ ಮಾಡಿ ಕಡ್ಡಿಗೆ ಹಚ್ಚಿ ಜುರು ಜುರು ಮಾಡಿ ಸೀಪುವದೆಂದರೆ ಖುಷಿ ಯೋ ಖುಷಿ ಪೇರು ಕಾಯೀ ಕೆಡವಿ ಅದರಲ್ಲಿ ಉಪ್ಪು ಖಾರ ಹಾಕಿ ತಿಂದದ್ದೇ ತಿಂದಿದ್ದು ಅಮ್ಮ ಮಾಡಿದ ಉಂಡಿ ಡಬ್ಬಾ ಅವರು  ಮಲಗೀದಾಗ  ಮೆಲ್ಲನೆ ಹಿತ್ತಲಲ್ಲಿ ತಂದು ಎಲ್ಲರು ಕೂಡಿ ತಿಂದು ಖಾಲಿ ಮಾಡಿ ಅಮ್ಮನ ಜೊತೆ ಬಯಸಿಕೊಂಡಿದ್ದು ಮಳೆಯಲ್ಲಿ ನೆನೆದು ರಾಡಿ ಕಾಲಲ್ಲಿ ಮನೆಯಲ್ಲಿ ಗಲೀಜು ಮಾಡಿ ಅಪ್ಪನ ಪೆಟ್ಟು ತಿಂದದ್ದು ನೆನಪಾಗುವುದು.

ಹಿಂದಿ ಅಂದರೆ ಅಷ್ಟಕ್ಕಷ್ಟೆ ನನಗೆ ಸರ್ ಕಡೆಯಿಂದ ಕೈಗೆ ಪೆಟ್ಟು ತಿಂದದ್ದು ಆ ಕಾಲದಲ್ಲಿ ಟಿವಿ ಮೊಬೈಲ್ ಏನೂ ಇರಲಿಲ್ಲ ರವಿವಾರ ಬಂತೆಂದರೆ ಬೇಗ ಬೇಗ ಸ್ನಾನ ಮುಗಿಸಿ ಆಕಾಶವಾಣಿ ಯಲ್ಲಿ ಬರುವ ಮಕ್ಕಳ ಕಾರ್ಯಕ್ರಮ ಗಿಳಿ ವಿಂಡು ಕಾರ್ಯಕ್ರಮ ಕೇಳುವುದೆಂದರೆ ಅಚ್ಚುಮೆಚ್ಚು ಕ್ರಿಕೆಟ್ ಕಮೆಂಟ್ರಿ ಕೇಳುವುದು ಚಿತ್ರಗೀತೆಗಳ ಕಾರ್ಯಕ್ರಮ ರೇಡಿಯೋ ಮುಂದೆ ಎಲ್ಲಾರು ಟಿಕಾಣಿ ಹಾಕೋರು 

ತಿಂಗಳಿಗೆ ಎರಡು ತಿಂಗಳಿಗೆ ಒಂದು ಸಾರಿ ಥೇಟರ್ ನಲ್ಲಿ ಸಿನಿಮಾ ತೋರಿಸೋರು ನಮ್ಮ ತಂದೆ ಎಂಥಾ ಖುಷಿ ಅಂತೀನಿ ಆಗಿನ ಚಿತ್ರಗಳು ಇನ್ನೂ ಮನದಲ್ಲಿ ಅಚ್ಚಳಿಯದೆ ಇದೆ.

ಇನ್ನು ಅಜ್ಜಿ ಅಜ್ಜಾ ಊರಿಂದ ಬಂದರಂತೂ ಹೇಳತೀರದು ನಮ್ಮ ಖುಷಿ ಅವರ ಕಾಲು ಒತ್ತುತ್ತ ಅವರು ಹೇಳುವ ರಾಜ ರಾಣಿಯರ ಕಥೆ ಮಹಾಭಾರತದ ಕಥೆ ಕೇಳಿದ ಒಂದು ಖುಷಿ ನಮಗೆ ಅವರು ಕೊಡುವ 4 6 8 ಆನೆ ರೊಕ್ಕಾ ಕೊಟ್ಟರೆ ನಮಗೆ ಆನಂದವೋ ಆನಂದ ಅದರಿಂದ ಶಾಲೆಗೆ ಹೋಗುವಾಗ ಬಟಕ ಡಿಲೇ ಕಟ್ಟಿ ಐಸ್ ಕ್ರೀಂ ಸೀಪ್ಕೊಂತ ಶಾಲೆಗೆ ಹೋಗೋರು ಇಲಾಯೀಚೀ ಕಾಯಿ ಕಂಡ್ರಂತು ಮುಗೀತು ತೊಗೊಂಡ ಬಿಡುವುದು.  

ಇನ್ನೂ ರಜೆ ಬಂದರೆ ಹಳ್ಳಿಗೆ ಹೋಗುತ್ತಿದ್ದೆವು ಅಲ್ಲಿಯ ಮಕ್ಕಳ ಮುಂದೆ ಸಿಟಿ ಇಂದ ಬಂದವರೆಂದು ಡಿಮ್ಯಾಂಡೋ ಡಿಮ್ಯಾಂಡು ನಮ್ಮದು ಒಂದು ಸಾರಿ ಹಳ್ಳಿಯ ಸ್ಕೂಲ್ ಬೇಗ ಶುರುವಾಯಿತು ಹಾಗಾಗಿ ನಾನು ದೊಡ್ಡಪ್ಪನ ಮಗಳ ಜೊತೆ ಶಾಲೆಗೆ ಹೋದೆ ಇಂಗ್ಲಿಷ್ ಕ್ಲಾಸ್ ತೆಗೆದುಕೊಂಡರು ಟೀಚರ್ ಎಲ್ಲರಿಗೂ ಇಂಗ್ಲೀಷ ಆಯ ಶಬ್ಧ ದ ಅರ್ಥ ಹೇಳಲು ಹೇಳಿದರು ಯಾರಿಗೂ ಬರಲಿಲ್ಲ ನನಗೆ ಕೇಳಿದರು ನಾನು ಎಂದು ಅರ್ಥ ಹೇಳಿದೆ ನೋಡಿ ಎಷ್ಟು ಜಾಣೆ ಇದ್ದಾರೆ ನಿಮಗೆ ಹೇಳಲು ಆಗಲಿಲ್ಲ ಎಂದು ಹೇಳಿದರು ನನಗಾದ ಖುಷಿ ಹೇಳತೀರದು ಎಲ್ಲ ಮಕ್ಕಳು ನನ್ನ ಕಡೆ ಸಿಟ್ಟೀನಿಂದ ನೋಡ್ತಾ ಇದ್ದರು 

ಆಗಾಗ ನಮ್ಮ ತಂದೆಯೇ ಎಲ್ಲಮ್ಮನ ದೇವಸ್ಥಾನ  ಜಾತ್ರೆ ಹೂಲಿ ಅಜ್ಜನವರ ಮಠ ಎಲ್ಲ ಕಡೆ ಕರೆದುಕೊಂಡು ಹೋಗುವರು ಅಲ್ಲಿ ನಮಗೆ ಬಳಿ ಸರ ವಾಚು ಚಸ್ಮ ಗೊಂಬೆಗಳ ಖರೀದಿ ಇದ್ದದ್ದು ನಮ್ಮ ಕೈಗೆ ಸಿಕ್ಕಾಗ ನಮಗಾಗುವ ಆನಂದ ಹೇಳತೀರದು ಹಬ್ಬ ಹರಿದಿನ ಹೊಸ ಬಟ್ಟೆ ಬಣ್ಣ ಬಣ್ಣದ ಫ್ರಾಕ್ ಲಂಗ ಬ್ಲೌಸ್ ಹಾಕಿಕೊಂಡು ಮೆರೆದಿದ್ದೆ ಮೆರೆದದ್ದು ಆದರೆ ಈಗಿನ ಮಕ್ಕಳಿಗೆ ಏನು ಕೊಡಿಸಿದರು ತೃಪ್ತಿ ಎನ್ನುವುದೇ ಇಲ್ಲ.

ಆಗಾಗ ಮಕ್ಕಳೊಂದಿಗೆ ನನ್ನ ಅನುಭವದ ಮಾತು ಹೇಳುತ್ತಾ ಇರುತ್ತೇನೆ ನನ್ನೆದೆಯ ಗೂಡಿನಲ್ಲಿ ಈ ಎಲ್ಲ ನೆನಪುಗಳು ಸ್ಥಿರವಾಗಿ ನಿಂತಿರುವ ಆಗಾಗ  ಆಲೋಕಕ್ಕೆ ನನ್ನನ್ನು ಕರೆದು ಕೊಂಡು ಹೋಗುವ ವು ನನ್ನ ಹಾಗೆ ನಿಮಗೂ ನಿಮ್ಮೆಲ್ಲರ ಬಾಲ್ಯದ ನೆನಪು ಕಾಡುವುದೇ 

ಓ ಬಾಲ್ಯವೇ ಬಾಲ್ಯ ವೇ 

ನೀ ಮತ್ತೆ ಮರಳಿ ಬರಬಾರದೇ 

ಮರಳಿ ನಾ ಮಗುವಾಗುವಾಸೆ ಬಾಲ್ಯ ಕಳೆಯುವ ಆಸೆ 

ಮತ್ತೊಮ್ಮೆ ನಿನ್ನನ್ನು ಅನುಭವಿಸುವ ಆಸೆ 

ಇದು ಸಾಧ್ಯವೇ?  

ಇದು ಸಾಧ್ಯವೇ? 

ಇದು ಸಾಧ್ಯವೇ? 

ಸುದ್ದಿ ಓದಿ