ಮೇಘರಾಜ್ ಕೂಲಿಯವರ ಕೆಸಿಸಿ ಬ್ಯಾಂಕ್ ಚುನಾವಣೆಗೆ ನಾಮನಿರ್ದೇಶನ
ಶಿಗ್ಗಾವಿ 26: ಇದೇ ತಿಂಗಳ 30 ರಂದು ನಡೆಯುವ ಧಾರವಾಡ ಕೆಸಿಸಿ ಬ್ಯಾಂಕ್ ಇದರ ಆಡಳಿತ ಮಂಡಳಿಯ ಚುನಾವಣೆಗೆ ಶಿಗ್ಗಾವಿ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನಾಗಿ ಬಂಕಾಪುರ ನಗರದ ವಿಎಸ್‌ಎಸ್ ಬ್ಯಾಂಕಿನ ಮೇಘರಾಜ್ ಕೂಲಿಯವರನ್ನು ಶಾಸಕರು ಮಾಜಿ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರ ನಿರ್ದೇಶನದ ಮೇರೆಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ್ ಮ್ಯಾಗೇರಿ ಹೇಳಿದರು. ಧಾರವಾಡ ಖಾಸಗಿ ಹೋಟೆಲಿನಲ್ಲಿ ನಡೆದ ಸಭೆಯಲ್ಲಿ ಅವರು ಸ್ಪಷ್ಟಪಡಿಸಿದರು ಈ ಸಭೆಯಲ್ಲಿ ವಿಎಸ್‌ಎಸ್ ಬ್ಯಾಂಕಿನ ಪ್ರತಿನಿಧಿಗಳು ತಾಲೂಕಿನ ಗಣ್ಯರು ಹಾಜರಿದ್ದರು