ಚಿಕ್ಕೋಡಿ

ತಪಸ್ಸು ಇಲ್ಲದೆ ಯಶಸ್ಸು ಇಲ್ಲ: ಭಾಸ್ಕರ್‌ರಾವ್

ತಪಸ್ಸು ಇಲ್ಲದೆ ಯಶಸ್ಸು ಇಲ್ಲ: ಭಾಸ್ಕರ್‌ರಾವ್

ಚಿಕ್ಕೋಡಿ 02: ತಪಸ್ಸು ಇಲ್ಲದೆ ಯಶಸ್ಸು ಇಲ್ಲ, ಅವಕಾಶಗಳಿಲ್ಲದೆ ವ್ಯಕ್ತಿತ್ವ ಇಲ್ಲ,  ಯಸಶ್ಸು ತಪಸ್ಸನ್ನು ಆಧರಿಸಿದೆ, ನಗರ ಪ್ರದೇಶದ ಜನ ಸಂಸ್ಕೃತಿ ಸಂಸ್ಕಾರಗಳಿಂದ ದೂರವಾಗುತ್ತಿರುವುದು ಸರಿಯಾದ ಕ್ರಮವಲ್ಲ, ದೇಶ ಸೇವೆಗೆ ನಮ್ಮ ಜೀವಗಳು ಮೀಸಲಿರಲಿ. ಯಾವುದೇ ಕೆಲಸ ಪ್ರಾಮಾಣಿಕವಾಗಿ ಮಾಡಿದರೆ ಯಶಸ್ಸು ಖಚಿತ ಎಂದು ನಿವೃತ್ತ ಪೋಲಿಸ ಕಮಿಶನರ್ ಭಾಸ್ಕರ್‌ರಾವ್ ಹೇಳಿದರು. 

ತಾಲೂಕಿನ ಯಕ್ಸಂಬಾ  ಪಟ್ಟಣದ ಗೆಳೆಯರ ಬಳಗ ಆವರಣದಲ್ಲಿ ಆಯೋಜಿಸಿದ್ದ 36 ನೇ ಕನ್ನಡೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಕ್ಸಂಬಾ ಪಟ್ಟಣ ಗಡಿಗೆ ಹೊಂದಿಕೊಂಡಿದೆ. ಗಡಿಯಲ್ಲಿ ಇಷ್ಟೊಂದು ಕನ್ನಡ ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಸಂತೋಷ ತರುತ್ತದೆ ಎಂದರು. 

ರಾಯಚೂರಿನ ರಾಷ್ಟ್ರ ಪ್ರಶಸ್ತಿ ವಿಜೇತೆ ಹಾಗೂ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ಕೃಷಿಗೆ ವ್ಯಾಪಾರದ ಸ್ವರೂಪ ಬರಬೇಕು, ಹೆಬ್ಬರಳು ಗುರಿತಿನ ರೈತನೂ ಕೋಟಿ-ಕೋಟಿಯಲ್ಲಿ ಮಾತನಾಡಿದರೆ ಮಾತ್ರ ರೈತ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಒಂದೇ ಬೆಳೆ ಬೆಳೆದರೆ ರೈತ ಶ್ರೀಮಂತನಾಗುದಿಲ್ಲ, ನಾನು ಮಣ್ಣನ ಮುಂದೆ ಅತ್ತೆ ಅದು ನನ್ನ ಕೈಹಿಡಿಯಿತು, ಮಣ್ಣಿಗೆ ನಿಮ್ಮ ಬಣ್ಣಕೋಡಿ ಅದರ ಬಣ್ಣ ನಿಮಗೆ ಬರುತ್ತದೆ, ರೈತನಿಗೆ ಸ್ಥಾನಮಾನ ನೀಡುವುದನ್ನು ಬದಲಾಗಬೇಕು, ಅಭಿಮಾನ ಮತ್ತು ಗೌರವದಿಂದ ಕೆಲಸಮಾಡಿದ್ದಲಿ ನಿಮ್ಮ ಕೈಬಿಡುವುದಿಲ್ಲಾ. ತಾಯಂದಿರು ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು, ಕನ್ನಡ ಭಾಷೆ ಗೌರವಿಸಿ ಉಳಿಸಿ ಬೆಳಸಲು ನಿರಂತರ ಪ್ರಯತ್ನದಲ್ಲಿರಬೇಕು ಎಂದರು. 

ಸಾನಿಧ್ಯ ವಹಿಸಿದ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ  ಮಹಾಸ್ವಾಮಿಗಳು ಮಾತನಾಡಿ ಕೊಟ್ಟ ಕೆಲಸವನ್ನು ಗಟ್ಟಿಯಾಗಿ ಮಾಡುವಲ್ಲಿ ಮಹಿಳೆಯರು ಮುಂದಿದ್ದಾರೆ, ಇಂಗ್ಲಿಷ ವ್ಯಾಮೋಹ ಹೆಚ್ಚಾಗಿದೆ, ಇದರಿಂದ ಕನ್ನಡ ಭಾಷೆ ನಶಿಸುತ್ತಿದೆ. ಎಲ್ಲರೂ ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತಾಡಬೇಕು, ಇತಿಹಾಸ ಒದುವ ಹವ್ಯಾಸವಿದ್ದವನೇ ಪರಿಪೂರ್ಣ ಮನುಷ್ಯ ಎಂದು ಹೇಳಿದರು. 

ಬಳಗದ ಸದಸ್ಯ ಮಲ್ಲಿಕಾರ್ಜುನ ದಡ್ಡಿಕರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸುಧೀರ ಕುಂಭೋಜಕರ, ಸಂಗೀತ ಸಾಧಕ ಮಹೇಶ ಬಾನಗೆ, ಕರಕುಶಲ ಕೆಲಸಗಾರ ಚಿದಾನಂದ ಸಾರವಡೆ ಮುಂತಾದವರನ್ನು ಸತ್ಕರಿಸಿದರು. ಕನ್ನಡೋತ್ಸವದ ಅಂಗವಾಗಿ ಎರಿ​‍್ಡಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ವಿತರಿಸಿದರು.  

ಡಾ ಸುಬ್ರಾವ ಎಂಟೆತ್ತಿನವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌.ಎಲ್‌.ಐನಾಪೂರೆ ಮತ್ತು ಎ.ಎಸ್ ಘಸ್ತಿ ನಿರೂಪಿಸಿದರು. ಎಮ್‌.ವ್ಹಿ.ಮಾಳಗೆ ವಂದಿಸಿದರು. 


ಸುದ್ದಿ ಓದಿ