ಒಳ್ಳೆಯ ಕೆಲಸ ಮಾಡಲಿಕ್ಕೆ ಯಾರಿಗೂ ಭಯಪಡಬಾರದು: ತಹಶೀಲ್ದಾರ ಹಿರೇಮಠ
ಶಿಗ್ಗಾವಿ 11 : ಸರಕಾರದ ಕೆಲಸದಲ್ಲಿ ಮಿನಾಮೇಷ ಎಣಿಸದೇ ಎಲ್ಲಾ ಕೆಲಸ ಮಾಡಬೇಕು ಅಂದರೆ ಓನಿಕೆ ಓಬವ್ವನ ತರ ಒಳ್ಳೆಯ ಕೆಲಸ ಮಾಡಲಿಕ್ಕೆ ಯಾರಿಗೂ ಭಯಪಡಬಾರದು ಎಂದು ತಹಶೀಲ್ದಾರ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ವೀರ ವನಿತೆ ಓನಿಕೆ ಓಬವ್ವನ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ನಾವು ಸರಕಾರಿ ಕಚೇರಿಗಳಲ್ಲಿ ಕೆಟ್ಟ ಕೆಲಸ ಮಾಡುವಾಗ ಇನ್ನೋಬ್ಬರಿಗೆ ಭಯಪಡ ಬೇಕಾಗುತ್ತದೆ ಅದೇ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದರೇ ಯಾರಿಗೂ ಭಯಪಡುವ ಅವಶ್ಯಕತೆ ಇರುವುದಿಲ್ಲ ಎಂದು ವೀರ ವನಿತೆ ಓನಿಕೆ ಓಬವ್ವನ ಉದಾಹರಣೆ ಕೊಟ್ಟು ಹೇಳಿದರು.
ಛಲವಾದಿ ಸಮಾಜದ ಹಿರಿಯರಾದ ಪರುಶರಾಮ ಕಾಳೆ ಮಾತನಾಡಿ ನಮ್ಮ ಸಮಾಜ ಮುಂದೇ ಬರಬೇಕಾದರೇ ಇಂತಹ ವ್ಯಕ್ತಿಗಳ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ, ಸಮಾಜದ ಮುಖಂಡರಾದ ಕರಿಯಪ್ಪ ಕಟ್ಟಿಮನಿ, ಡಾ. ಮಲ್ಲೇಶಪ್ಪ ಹರಿಜನ, ಅಶೋಕ ಕಾಳೆ, ನಿಂಗಪ್ಪ ಹರಿಜನ, ಮಲ್ಲೇಶಪ್ಪ ದೊಡ್ಡಮನಿ, ಮಂಜುನಾಥ ಕಂಕಣವಾಡ, ಶಿವಾನಂದ ಬಾಗೂರ, ಪ್ರೇಮಾ ಪಾಟೀಲ, ನೀಲವ್ವ ಕಾಲವಾಡ , ಬಸಲಿಂಗಪ್ಪ ನರಗುಂದ ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಓನಿಕೆ ಓಬವ್ವ ಗೀತೆಯನ್ನು ಗುರುಲಿಂಗಪ್ಪ ಚಲವಾದಿ ಪ್ರಸ್ತುತ ಪಡಿಸಿದರು, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ ಸಂವಿಧಾನ ಪೀಠಿಕೆ ಭೋದಿಸಿದರು. ಪ್ರಾದ್ಯಾಪಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.