ಮುಂದಗೋಡ

ಕೃತಕವಾಗಿ ಯಾರೂ ರಕ್ತ ನಿರ್ಮಾಣ ಮಾಡುವುದಿಲ್ಲ:ಶ್ರೀಶೈಲ

ಕೃತಕವಾಗಿ ಯಾರೂ ರಕ್ತ ನಿರ್ಮಾಣ ಮಾಡುವುದಿಲ್ಲ:ಶ್ರೀಶೈಲ

ಲೋಕದರ್ಶನ ವರದಿ 

ಮುಂಡಗೋಡ:ರಕ್ತದಾನ ಮಾಡುವವರು ಭಯಪಡದೆ ಮುಂದೆ ಬರಬೇಕು ಕೃತಕವಾಗಿ ಯಾರೂ ರಕ್ತವನ್ನು ನಿರ್ಮಾಣ ಮಾಡುವುದಿಲ್ಲ ಎಂದು ಸಹಾಯಕ ಅರಣ್ಯ ಸಂರಕ್ಷಕ ಶ್ರೀಶೈಲ ವಾಲಿ ಹೇಳಿದರು.   

ವಿ.ಆರ್‌.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌(ರಿ.)ಹಳಿಯಾಳ, ಸಿಬಿಆರ್‌ಸೆಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆಸ್ಪತ್ರೆ, ಅರಣ್ಯ ಇಲಾಖೆ, ಟಿಂಬರ ಡಿಪೋ ಮತ್ತು ಐ.ಎಮ್‌.ಎ. ಲೈಫ್‌ಲೈನ್ ರಕ್ತನಿಧಿ, ಪಂ.ಸಾ. ಆಸ್ಪತ್ರೆ ಶಿರಸಿ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಪಟ್ಟಣದ ಸಿಬಿಆರ್‌ಸೆಟಿ ಸಭಾಭವನದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಯಂ-ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಎಚ್‌.ಎಫ್‌.ಇಂಗಳೆ ರಕ್ತದಾನ ಶ್ರೇಷ್ಟದಾನ. ಆವಿಷ್ಕಾರ ಆಗದೇ ಇರುವ ಜಗತ್ತಿನ ಅತ್ಯಮೂಲ್ಯ ವಸ್ತುಗಳಲ್ಲಿ ರಕ್ತವೂ ಒಂದು. ಇದನ್ನು ಮನುಷ್ಯನಲ್ಲದೆ ಬೇರೆ ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ರಕ್ತದಾನದ ಬಗ್ಗೆ ಇರುವ ಉಹಾಪೋಹಗಳ ಬಗ್ಗೆ ತೆರೆ ಎಳೆದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಸಿದ್ಧರಾಗಬೇಕು ಎಂದರು. ಸಿಬಿಆರ್‌ಸೆಟಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ ಮಾತನಾಡಿದರು.   

ಈ ವೇಳೆ ಸಹಾಯಕ ಅರಣ್ಯ ಸಂರಕ್ಷಕ ಅಶೋಕ ಹಪ್ಪಳದ, ಕಾತೂರ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ, ಜಿ.ಟಿ.ರೇವಣಕರ, ರೋಟರಿ ಕ್ಲಬ್‌ನ ಅಧ್ಯಕ್ಷ ಬೈಜು ವಿ.ಜೆ., ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿರೇಶ ಹೂಗಾರ, ಸಮೀರ ದೇಸಾಯಿ, ರಕ್ತನಿಧಿ ಕೇಂದ್ರದ ರಾಜೇಶ್ವರಿ, ಜಗದೀಶ ಕಾನಡೆ, ಸಿಬಿಆರ್‌ಸೆಟಿ ಸಿಬ್ಬಂದಿ, ಐ.ಎಮ್‌.ಎ. ಲೈಫ್‌ಲೈನ್ ರಕ್ತನಿಧಿ, ಶಿರಸಿ ಪಂ.ಸಾ.ಆಸ್ಪತ್ರೆ ಸಿಬ್ಬಂದಿ, ಸರಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 33ದಾನಿಗಳು ರಕ್ತದಾನ ಮಾಡಿದರು. 


ಸುದ್ದಿ ಓದಿ