ಶಿಗ್ಗಾವ್

ಮೀಸಲಾತಿ ವಿಚಾರದಲ್ಲಿ ಸಮಯ ಸಾಧಕ ಹೇಳಿಕೆ ಬೇಡ: ಮಂಜುನಾಥ

ಮೀಸಲಾತಿ ವಿಚಾರದಲ್ಲಿ ಸಮಯ ಸಾಧಕ ಹೇಳಿಕೆ ಬೇಡ: ಮಂಜುನಾಥ

ಲೋಕದರ್ಶನ ವರದಿ 

ಶಿಗ್ಗಾವಿ : ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮಯ ಸಾಧಕ ಹೇಳಿಕೆ ಬೇಡ ಮೀಸಲಾತಿ ವಿಳಂಬಕ್ಕೆ ಮೀಸಲಾತಿ ಹೋರಾಟದ ಮುಖಂಡ ಮಂಜುನಾಥ್ ಮಣ್ಣಣ್ಣವರ್  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಂಚಮಸಾಲಿಗಳು ಹಾಗೂ ಇತರ ಲಿಂಗಾಯತ ಪಂಗಡಗಳಿಗೆ ಮೀಸಲಾತಿ ಕೊಡುವಲ್ಲಿ ಪ್ರಮಾಣ ಮಾಡಿ ಕೈಕೊಟ್ಟಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ವ ಹಿತಾಸಕ್ತಿ ರಾಜಕಾರಣದ ತಂತ್ರ ಸಮಾಜಕ್ಕೆ ಅಘಾತ ಉಂಟು ಮಾಡಿದೆ ಮತ್ತೆ ಜಯಮೃತ್ಯುಂಜಯ ಶ್ರೀಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಿರಂತರ ಧರಣಿ ಸತ್ಯಾಗ್ರಹ ಕೈಗೊಂಡು 14 ದಿನಗಳಾಗಿದ್ದು ಈವರೆಗೂ ಯಾವೊಬ್ಬ ಕೇಂದ್ರ ಸರ್ಕಾರದ ಮಂತ್ರಿಗಳು ಗಮನಹರಿಸದಿರುವುದರಿಂದ ಶ್ರೀಗಳು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು ಸಮಾಜದವರು ಉಗ್ರ ಪ್ರತಿಭಟನೆಗೆ ಸಂಘಟಿತರಾಗಿ ಎಂದು ಶ್ರೀಗಳು ಸೂಚನೆ ಕೊಟ್ಟಿದ್ದಾರೆ. 

 ಈ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮಯ ಸಾಧಕತನ ಹೇಳಿಕೆ ನೀಡುತ್ತಿದ್ದು ಸಮುದಾಯದ ಜನರ ಕಣ್ಣಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ ಧೋರಣೆ ಇವರಿಗೂ ಸಹಿಸಿಕೊಂಡಿದ್ದು ಜೋಶಿ ಸಮಯ ಸಾಧಕಗಳಿಗೆ ನೀಡದೆ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ಸ್ಪಷ್ಟತೆ ಕೊಡಬೇಕು ನಿಮ್ಮ ಈ ನಿರ್ಲಕ್ಷ ಧೋರಣೆ ಬರುವುದಿಲ್ಲ ಉಗ್ರ ಪ್ರತಿಭಟನೆಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹೊಣೆಯಾಗಬೇಕಾಗುತ್ತದೆ ಸಮಾಜಕ್ಕೆ ನೋವು ಕೊಡುವುದನ್ನು ಬಿಟ್ಟು ಮೀಸಲಾತಿ ಕೊಡುವ ಕೆಲಸವಾಗಲಿ ಎಂದು ಪಂಚಮಸಾಲಿ ಮುಖಂಡ  ಮಂಜುನಾಥ್ ತೀವ್ರ ಆಕ್ರೋಶ ಹೊರಹಾಕಿ ಸಮಾಜದ ಸಂಯಮ ತಾಳ್ಮೆ ಪರೀಕ್ಷಿಸಬೇಡಿ ಎಂದಿದ್ದಾರೆ.  ಈ ಸಂದರ್ಭದಲ್ಲಿ ಶಂಭುಲಿಂಗಪ್ಪ ಕತ್ತಿ. ಸುರೇಶ ಹುಲಗೂರ. ಉಪಸ್ಥಿತರಿದ್ದರು. 


ಸುದ್ದಿ ಓದಿ