ರಾಷ್ಟ್ರೀಯ

ದೇಶದ ಹಿತಾಸಕ್ತಿಯ ಮುಂದೆ ಯಾವ ಸಿದ್ಧಾಂತಗಳೂ ದೊಡ್ಡವಲ್ಲ; ಪ್ರಧಾನಿ ಮೋದಿ

ದೇಶದ ಹಿತಾಸಕ್ತಿಯ ಮುಂದೆ  ಯಾವ  ಸಿದ್ಧಾಂತಗಳೂ  ದೊಡ್ಡವಲ್ಲ; ಪ್ರಧಾನಿ ಮೋದಿ

ನವದೆಹಲಿ,  12: ದೇಶದ  ಹಿತಾಸಕ್ತಿಗಿಂತ ಯಾವುದೇ ಸಿದ್ಧಾಂತ  ದೊಡ್ಡದಲ್ಲ, ಎಲ್ಲ ಸಿದ್ಧಾಂತಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿ  ಅತ್ಯಂತ ದೊಡ್ಡದು ಎಂದು ಪ್ರಧಾನಿ ನರೇಂದ್ರ ಮೋದಿ  ಗುರುವಾರ ಹೇಳಿದ್ದಾರೆ. 

ತಮ್ಮ ಸ್ವಾರ್ಥ  ಉದ್ದೇಶಗಳಿಗಾಗಿ ಸಿದ್ಧಾಂತಗಳ  ವಿಷಯದಲ್ಲಿ  ರಾಜಿ ಮಾಡಿಕೊಳ್ಳುವುದು ತಪ್ಪು ಎಂದು ಅವರು ಸ್ಪಷ್ಟಪಡಿಸಿದರು. ದೆಹಲಿಯ ಜೆಎನ್‌ಯುನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಗುರುವಾರ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.  ತಮ್ಮ ಅನುಕೂಲಕ್ಕಾಗಿ ಸಿದ್ಧಾಂತಗಳನ್ನು  ಬದಲಸಿದರೆ ಅದು   ಎಂದಿಗೂ ಯಶಸ್ವಿಯಾಗದು, ಇದು  ನಿತ್ಯ  ಜೀವನದಲ್ಲಿ ಪ್ರತಿಯೊಬ್ಬರೂ ಎದುರಿಸುತ್ತಿರುವ ಸಂಗತಿಯಾಗಿದೆ ಎಂದು  ಪ್ರಧಾನಿ  ಹೇಳಿದರು. 

ಅವಕಾಶವಾದ ದೂರ ಇರಿಸಿ, ಆರೋಗ್ಯಕರ ಸಂವಾದವನ್ನು ಪ್ರಜಾಪ್ರಭುತ್ವದಲ್ಲಿ ಜೀವಂತವಾಗಿರಿಸುವಂತೆ   ಪ್ರಧಾನಿ  ಸಲಹೆ ನೀಡಿದ್ದಾರೆ.

ನಮ್ಮ ದೇಶದಲ್ಲಿ ವಿಭಿನ್ನ ಸಿದ್ಧಾಂತಗಳು ಮೊಳಕೆಯೊಡೆಯುತ್ತಿವೆ, ಮೊಳಕೆಯೊಡೆದು, ಪ್ರಬುದ್ಧತೆಯನ್ನು ತಲುಪುತ್ತಿವೆ. ಆ ಪರಂಪರೆಯನ್ನ  ಮುಂದುವರಿಸುವುದು  ಅತ್ಯವಶ್ಯಕವಾಗಿದೆ ಎಂದು ಮೋದಿ ಹೇಳಿದರು. ಇಂತಹ ವಿಭಿನ್ನ ಸೈದ್ಧಾಂತಿಕ ಪಾತ್ರಗಳನ್ನು   ನಿಭಾಯಿಸುವ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. 

ಭಾರತೀಯ ಯುವಕರು ಎಂದಿಗೂ ಯಥಾಸ್ಥಿತಿ  ಒಪ್ಪಿಕೊಳ್ಳಬಾರದು, ಅದನ್ನು ಪ್ರಶ್ನಿಸಬೇಕು,  ನಂತರ ಅದನ್ನು  ಒಪ್ಪಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.  ಆದರೆ,  ಈ ಸಂವಾದಗಳು  ಸಂಪೂರ್ಣ ಆರೋಗ್ಯಕರವಾಗಿರಬೇಕು ಎಂದು ಸ್ಪಷ್ಟಪಡಿಸಿದರು.  ಆರೋಗ್ಯಕರ ಸಂವಾದದ  ನಂತರವೇ ತೀರ್ಮಾನಕ್ಕೆ ಬರುವುದು ಉತ್ತಮ ಎಂದು ಅವರು ಹೇಳಿದರು. ಸ್ವಾಮಿ ವಿವೇಕಾನಂದರು ಎಂದಿಗೂ ಯಥಾಸ್ಥಿತಿಯನ್ನು ಸ್ವೀಕರಿಸುತ್ತಿರಲಿಲ್ಲ  ಎಂದು ಮೋದಿ ನೆನಪಿಸಿದರು. ಈ ಸೈದ್ಧಾಂತಿಕ ಹೋರಾಟದಲ್ಲಿ ಯಾರೊಬ್ಬರ ಸಿದ್ಧಾಂತದ ಬಗ್ಗೆ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ, ಆದರೆ ಈ ಸೈದ್ಧಾಂತಿಕ ಸಿದ್ಧಾಂತಗಳ ವಿಚಾರಗಳ ಘರ್ಷಣೆಯ  ಫಲಿತಾಂಶ  ದೇಶದ ಹಿತದೃಷ್ಟಿ, ಅತಿ  ದೊಡ್ಡ ಗುರಿಯಾಗಿರಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ  ಸಂದರ್ಭದಲ್ಲಿ  ಎಲ್ಲಾ ಪಕ್ಷಗಳು ಒಗ್ಗೂಡಿ ಹೋರಾಡಿದ್ದವು  ಎಂದು ಅವರು  ಸ್ಮರಿಸಿದ್ದಾರೆ.ಆ ಸಮಯದಲ್ಲಿ ಕಾಂಗ್ರೆಸ್   ಮಾಜಿ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು. ಅವರೊಂದಿಗೆ   ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಜನ ಸಂಘ ಮತ್ತು ಕಮ್ಯುನಿಸ್ಟ್ ನಾಯಕರು  ಆಂದೋಲನದಲ್ಲಿ ಭಾಗಿಯಾಗಿದ್ದರು. ದೇಶ  ಕಷ್ಟಗಳನ್ನು ಎದುರಿಸುವ ಸಮಯದಲ್ಲಿ  ... ಸಾಂದರ್ಭಿಕವಾಗಿ ಎಲ್ಲ ಸಿದ್ಧಾಂತಗಳ ನಾಯಕರು ಮುಂದೆ ಬಂದು  ದೇಶ ಹಿತಕ್ಕಾಗಿ ಹೋರಾಡಿದ್ದರು  ಎಂದು ಮೋದಿ ಹೇಳಿದರು. ಹೊಸ ಶಿಕ್ಷಣ ನೀತಿಯ ಗುರಿ ಯುವ ಭಾರತವನ್ನು, ಪರಿಪೂರ್ಣವಾದ ವಿಶ್ವಾಸವನ್ನು  ಯುವಕರಲ್ಲಿ ಸೃಷ್ಟಿಸುವುದು   ಗುರಿಯಾಗಿದೆ. ಸ್ವಾಮಿ ವಿವೇಕಾನಂದರು ಸಹ ಅದೇ ಗುರಿಯೊಂದಿಗೆ ಬದುಕಿದ್ದರು,ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಸ್ವಾಭಿಮಾನವನ್ನು ತುಂಬುವ ಉದ್ದೇಶದಿಂದ ಸ್ವಾಮಿ ವಿವೇಕಾನಂದರು  ಜೀವಿಸಿದ್ದರು  ಎಂದು ಮೋದಿ ಹೇಳಿದರು.

ಸುದ್ದಿ ಓದಿ