ರಾಷ್ಟ್ರೀಯ

ಗುಜರಾತ್‌ನಲ್ಲಿ ಲಘು ಭೂಕಂಪ; ಯಾವುದೇ ಸಾವು ನೋವಿನ ವರದಿಯಿಲ್ಲ

ಗುಜರಾತ್‌ನಲ್ಲಿ ಲಘು ಭೂಕಂಪ; ಯಾವುದೇ ಸಾವು ನೋವಿನ ವರದಿಯಿಲ್ಲ

ಬುಜ್‌, ಸೆಪ್ಟೆಂಬರ್ 2: ಗುಜರಾತ್‌ನ ಕಚ್‌ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರಿಕ್ಟರ್‌ ಮಾಪನದಲ್ಲಿ 4.1 ತೀವ್ರತೆಯ ಭೂಕಂಫ ಸಂಬಂಧಿಸಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ. 

ಅಧಿಕೃತ ಮಾಹಿತಿ ಪ್ರಕಾರ, ಮಧ್ಯಾಹ್ನ 2.09 ಗಂಟೆಯ ಸಮಯದಲ್ಲಿ ಪಾಕ್‌ ಗಡಿಯಲ್ಲಿಯ ದುದೈನಿಂದ ಈಶಾನ್ಯ ಭಾಗದ ಏಳು ಕಿಮೀ ದೂರದಲ್ಲಿ ಭೂಕಂಪದ ಕೇಂದ್ರ ಸ್ಥಳ ದಾಖಲಾಗಿದೆ. 

ಇಲ್ಲಿನ ಜನರು ತಮ್ಮ ಮನೆಗಳಿಂದ ಹೊರಗೋಡಿ ಬಂದಿದ್ದರು. ಜೂ. 14ರಂದು ಕೂಡ 5.2 ತೀವ್ರತೆಯ ಕಂಪನದ ಭಾವವಾಗಿತ್ತು. 

2001ರಲ್ಲಿ ಗುಜರಾತ್ ಕಚ್‌ ಜಿಲ್ಲೆಯಲ್ಲಿ ಭೀಕರ ಭೂಕಂಪ ಸಂಭವಿಸಿದ್ದು. ಇದರಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿತ್ತು.

ಸುದ್ದಿ ಓದಿ