ಲೇಖನಗಳು

ಕ್ರಿಯಾಶೀಲ ವ್ಯಕ್ತಿತ್ವದ ನಿಂಗಪ್ಪಾ ಜಮಕಿ

ಕ್ರಿಯಾಶೀಲ ವ್ಯಕ್ತಿತ್ವದ ನಿಂಗಪ್ಪಾ ಜಮಕಿ

ಹೆಚ್ಚು ಜನರನ್ನು ಕಾಡುವ ಒಂದೇ ಒಂದು ಪ್ರಶ್ನೆಯೆಂದರೆ “ನಿವೃತ್ತಿ ನಂತರ ಏನು?” ಮಾಡುವುದು. ವೃತ್ತಿ ಜೀವನದಲ್ಲಿ ನಿಯಮಿತ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಮುಂಜಾನೆ ಇಷ್ಟು ಗಂಟೆಗೆ ಕಚೇರಿಗೆ ಹೋಗುವುದು. ಮಧ್ಯಾಹ್ನದ ಊಟ, ಸಾಯಂಕಾಲದ ಚಹ ಉಳಿದಂತೆ ಕಚೇರಿ ಕೆಲಸ. ಹೀಗೆ  ಯಾಂತ್ರಿಕ ಜೀವನ ನಡೆದುಬಿಟ್ಟಿರುತ್ತದೆ. ನಿವೃತ್ತಿ ಜೀವನ ಕುರಿತಂತೆ ನಾವು ವಿಚಾರವನ್ನೇ ಮಾಡಿರುವುದಿಲ್ಲ. ನಿವೃತ್ತಿಯಾದ ದಿನದಂದಂತೂ ಏನು ಮಾಡುವುದೆಂದು  ತಿಳಿಯದೇ ಜೀವನವೇ ನಿರುಸವೆನಿಸುತ್ತದೆ. ಅದಕ್ಕಾಗಿ ವೃತ್ತಿ ಜೀವನದೊಂದಿಗೆ ಸಂಗೀತ, ಸಾಹಿತ್ಯ, ಚಿತ್ರಕಲೆ, ಸಂಘಟನೆ ಹೀಗೆ ಯಾವುದೇ ಹವ್ಯಾಸ ಬೆಳೆಸಿಕೊಳ್ಳುವುದು ಅತ್ಯವಶ್ಯ. ಹವ್ಯಾಸವೆನ್ನು ನಮ್ಮ  ಕೊನೆಯುಸಿರುವವರೆಗೂ ನಮ್ಮೊಂದಿಗಿರುತ್ತದೆ. ಸಂತಸ ಕೊಡುತ್ತದೆ. 

ಶ್ರೀ ನಿಂಗಪ್ಪಾ ಪರಾ​‍್ಪ ಜಮಕಿಯವರ ಕಾರ‌್ಯವೈಖರಿಯನ್ನು ತಿಳಿದಾಗ ನಿವೃತ್ತಿ ಜೀವನವನ್ನೂ ಹೇಗೆ ಸಂತೋಷದಿಂದ ಕಳೆಯಬಹುದೆಂದು ತಿಳಿದುಕೊಳ್ಳಬಹುದು. ಶ್ರೀ ನಿಂಗಪ್ಪಾ ಇವರು ಮೂಲತಃ ಸವದತ್ತಿ ತಾಲೂಕಿನ ಅರಟಗಲ್ ಗ್ರಾಮದವರು. ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಜುಲೈ 8, 1948 ರಂದು ಜನಸಿದರು. ಇವರ ಮನೆ ಉದ್ಯೋಗವೆಂದರೆ ಕೃಷಿ ಹಾಗೂ ವ್ಯಾಪಾರವಾಗಿತ್ತು.  

ಶ್ರೀ ನಿಂಗಪ್ಪಾ ಪರಾ​‍್ಪ ಜಮಕಿಯವರು ವೃತಿಯನ್ನು ಜೀವನವನ್ನು ಬೈಲಹೊಂಗಲದಲ್ಲಿ ಪಿ.ಡಬ್ಲೂಡಿ. ಇಲಾಖೆಯ ಸೇವೆಯೊಂದಿಗೆ ಪ್ರಾರಂಭಿಸಿದರು. ಮುಂದೆ ಬೆಳಗಾವಿಯ ಎಸ್‌.ಪಿ. ಕಚೇರಿಯಲ್ಲಿ ಎಸ್‌.ಡಿ.ಎ. ನೇಮಕಾತಿಯೊಂದಿಗೆ ಪ್ರಾರಂಭವಾಗಿ ಬಡ್ತಿ ಪಡೆಯುತ್ತ ಹೋಗಿ ಸುಪರಿಡೆಂಡೆಂಟ್ ಅಗಿ ಜುಲೈ 31, 2006ರಲ್ಲಿ ನಿವೃತ್ತಿ ಹೊಂದಿದರು. ಇವರು ತಮ್ಮದೇ ಆದ ವಿಶಿಷ್ಟ ಸೇವೆಯಿಂದ ಎಲ್ಲರಿಂದ ಪ್ರಶಂಸೆಗೆ ಪಾತ್ರರಾದವರು.  

ಸರ್ಕಾರಿ ಸೇವೆ ಸಲ್ಲಿಸುತ್ತಿರುವಾಗಲೇ ಇತರ ಚಟುವಟಿಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಧ್ದರಿಂದ ನಿವೃತೀಜೀವನ ಇವರಿಗೆ ಅಂತಹ ಸಮಸ್ಯೆಯಾಗೇನು ಕಾಡಲಿಲ್ಲ. ಶ್ರೀ ನಿಂಗಪ್ಪಾ ಪರಾ​‍್ಪ ಜಮಕಿಯವರು ತುಂಬ ಕ್ರಿಯಾಶೀಲರು.. ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಜಂಟಿ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ, ರಾಜ್ಯ ಸರ್ಕಾರಿ ನೌಕರರ ಬೆಳಗಾವಿ ಜಿಲ್ಲಾ ಘಟಕ ಒಕ್ಕೂಟ ಅಧ್ಯಕ್ಷರಾಗಿ ಬೇರೆ ಬೇರೆ ಸಂಘಟನೆಗಳಲ್ಲಿ ದುಡಿದವರು. 

ಈ ಸಂದರ್ಭದಲ್ಲಿ ನೌಕರರ ಕುಂದು ಕೊರತೆಗಳಿಗೆ ಸ್ಪಂದಿಸಿ ರಾಜ್ಯ ಸರ್ಕಾರಿ ನೌಕರರ 8ನೇ ವೇತನ ಜಾರಿಗೆ  ತರುವಲ್ಲಿ ಸಂಘದ ಸದಸ್ಯರು ಹಾಗೂ ಅಧ್ಯಕ್ಷರೊಡಗೂಡಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಅಲ್ಲದೇ ಬೆಳಗಾವಿ ನಗರ ಕೋರ್ಟ ಆವರಣದಲ್ಲಿರುವ ನೌಕರರ ಭವನ ಕಟ್ಟಿಸುವಲ್ಲಿ ಅಂದಿನ ಅಧ್ಯಕ್ಷ ಬಿ. ಎಸ್ .ಪಾಟೀಲ ಪ್ರಧಾನ ಕಾರ್ಯದರ್ಶಿ ಪಿ. ಸಿ. ಕೋಕಿತಕರ ಇವರೊಂದಿಗೆ ಶ್ರೀ ನಿಂಗಪ್ಪನವರ ಪಾತ್ರ ಪ್ರಮುಖವಾಗಿತ್ತು. 

ಸಂಘಟನೆ ಕಾರ್ಯದ ಹಿನ್ನಲೆಯಿಂದ ಬಂದಿರುವ ಶ್ರೀ ನಿಂಗಪ್ಪಾ ಪರಾ​‍್ಪ ಜಮಕಿಯವರಿಗೆ ನಿವೃತ್ತಿ ನಂತರ ಬಿ.ಜೆ.ಪಿ. ಮಹಾನಗರ ಜಿಲ್ಲೆಯ ನಿವೃತ್ತಿ ನೌಕರರ ವೇದಿಕೆಯ ಅಧ್ಯಕ್ಷರಾಗಿ ರಾಜಕೀಯದಲ್ಲಿ ಪಕ್ಷದ ಸಂಘಟನೆಗಾಗಿ ಕಾರ್ಯ ನಿರ್ವಹಿಸಿದ ಇವರು ಎಲ್ಲರ ಪ್ರಶಂಸೆಗೆ ಪಾತ್ರರಾದರು.  

ಶ್ರೀ ನಿಂಗಪ್ಪಾ ಪರಾ​‍್ಪ ಜಮಕಿಯವರು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮಂಡಳದ ಉಪಾಧ್ಯಕ್ಷರಾಗಿ 2020 ರವರೆಗೆ ರಾಜಕೀಯದಲ್ಲಿ ಜಕ್ರೀಯವಾಗಿ ತಮ್ಮ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸಿದ್ದಾರೆ.  

ಶ್ರೀ ನಿಂಗಪ್ಪಾ ಪರಾ​‍್ಪ ಜಮಕಿಯವರಗೀಗ 75 ವರ್ಷ. ಇದೇ ದಿ. 21.10.2022 ಶುಕ್ರವಾರದಂದು ಅಟೋನಗರದಲ್ಲಿರುವ ಪ್ಯಾರಡೈಸ್ ಗಾರ್ಡನ್‌ದಲ್ಲಿ ಅಮೃತಮಹೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರು ಶತಮಾನೋತ್ಸವನ್ನು ಆಚರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. 

- ಅಶೋಕ ಮಳಗಲಿ 

ಕವಿ, ಸಾಹಿತಿ ಬೆಳಗಾವಿ 

-0-0-0- 


ಸುದ್ದಿ ಓದಿ