ಕೇರಳ ರಾಜ್ಯ ಚುನಾವಣೆಯ ವೀಕ್ಷಕರಾಗಿ ನಿಂಬಗಲ್ ರಾಮಕೃಷ್ಣ ನೇಮಕ
ಹೊಸಪೇಟೆ 25: ನೂತನ ವಿಜಯನಗರ ಜಿಲ್ಲೆ ಹೊಸಪೇಟೆಯ 11ನೇ ವಾರ್ಡ್, ಚಿತ್ತವಾಡ್ಗಿಯ, ವರಕೇರಿ ನಿವಾಸಿ ಅಪ್ಪಟ ಕಾಂಗ್ರೆಸ್ ಪಕ್ಷದ ಅಭಿಮಾನಿ, ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು, ದಲಿತ ಕುಟುಂಬದಲ್ಲಿ ಬೆಳೆದು, ಬಡ ಜೀವ ಸಾಗಿಸುತ್ತಾ, ಸಮಾಜ ಸೇವೆಯನ್ನು ಮಾಡುತ್ತಾ, ಜನರ ಧ್ವನಿಯಾಗಿ ಹೋರಾಟ ಮಾಡುತ್ತಾ ಕೆ.ಪಿ.ಸಿ.ಸಿ. ಸಾಮಾಜಿಕ ಜಾಲತಾಣ ಕಲಬುರ್ಗಿ ವಿಭಾಗದ ಉಸ್ತುವಾರಿಯಾಗಿ ಪಕ್ಷಕ್ಕೆ ದುಡಿದ ನಿಂಭಗಲ್ ರಾಮಕೃಷ್ಣ ಅವರು ಇಂದು ಎ.ಐ.ಸಿ.ಸಿ.ಯಿಂದ ಕೊಚ್ಚಿ, ತ್ರಿಶೂರ್ ಜಿಲ್ಲೆಯ ಪುದುಕಾಡ್, ಉಳ್ಳೂರು, ಕೈಪಮಂಗಲಂ ವಿಧಾನ ಸಭಾ ಕ್ಷೇತ್ರಗಳ ವೀಕ್ಷಕರಾಗಿ ಎ.ಐ.ಸಿ.ಸಿ. ಮತ್ತು ಕೆ.ಪಿ.ಸಿ.ಸಿ. ವತಿಯಿಂದ ನೇಮಕಗೊಂಡಿರುವುದು ನಮಗೆಲ್ಲರಿಗೂ ತುಂಬಾ ಸಂತೋಷವಾಗುತ್ತಿದೆ.
ಕೇರಳ ರಾಜ್ಯದ ಚುನಾವಣೆಯ ಅಂಗವಾಗಿ ಪಕ್ಷದ ಸೂಚನೆಯಂತೆ ಪಕ್ಷದ ಪರ ಪ್ರಚಾರ ಮಾಡಲು ಕೇರಳ ರಾಜ್ಯಕ್ಕೆ ಹೊರಡಿದ್ದಾರೆ ಅವರ ಪಕ್ಷದ ಪ್ರಚಾರ ಮತ್ತು ಅವರು ರಾಜಕೀಯ ಜೀವನದಲ್ಲಿ ಇನ್ನಷ್ಟು ಮತ್ತಷ್ಟು ಬೆಳೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.