ಸಂಕೇಶ್ವರ

ದಿ. 19 ರಂದು ನೀಲಗಾರ ಗಣಪತಿ ವಿಸರ್ಜನೆ

ದಿ. 19 ರಂದು ನೀಲಗಾರ ಗಣಪತಿ ವಿಸರ್ಜನೆ

ಸಂಕೇಶ್ವರ 18: ಸುಮಾರು ಮುನ್ನೂರು ವರ್ಷಗಳ ಇತಿಹಾಸವುಳ್ಳ ನೀಲಗಾರ ಗಣಪತಿಯ ದರ್ಶನಕ್ಕೆ ಇಂದು ಸುಮಾರು 50 ಸಾವಿರ ಮೇಲ್ಪಟ್ಟು ಭಕ್ತಾದಿಗಳು ವಿಘ್ನೇಶ್ವರನ ದರ್ಶನ ಪಡೆದುಕೊಂಡು ತಮ್ಮ ದುಃಖಗಳನ್ನು ಸಮರ​‍್ಿಸಿ ಭಕ್ತರು ಪುನೀತರಾದರು. ಇಂದು ಬೆಳಿಗ್ಗೆ 6 ಗಂಟೆಯಿಂದ ಭಕ್ತರು ಸಾಲು ಸಾಲಾಗಿ ನಿಂತು ದರ್ಶನ ಪಡೆದುಕೊಳ್ಳುವ ದೃಶ್ಯಗಳು ಕಂಡುಬಂದವು. ಸಂಕೇಶ್ವರ ನಗರವು ಗಣಪತಿಯ ಜಾತ್ರೆಗೆ ಶೃಂಗಾರಗೊಂಡು ಜನತೆಯನ್ನು ಆಕರ್ಷಣೆ ಮಾಡಿಕೊಳ್ಳುತ್ತಿರುವುದು.  

ಕಳೆದ ಎರಡು ವರ್ಷಗಳಿಂದ ಕೋವಿಡ್‌-19 ಸಂಕ್ರಾಮಿಕ ರೋಗಗಳಿಂದ ಗುಡಿ- ಗುಂಡಾರಗಳಿಗೆ ಭಕ್ತರ ದರ್ಶನ ಇಲ್ಲವಂತಾಗಿತ್ತು. ಈಗ ಈ ಮಹಾಜಾತ್ರೆಯು ಕಳೆದ 19 ದಿನಗಳಿಂದ ನಗರದಲ್ಲಿ ಪೇಡಾ ಅಂಗಡಿಗಳು, ಆಟಿಕೆ ಸಾಮಾನುಗಳ ಅಂಗಡಿಗಳು, ಹೆಣ್ಣುಮಕ್ಕಳ ಬಳೆಗಳ ಅಂಗಡಿಗಳು ಎದ್ದು ಕಾಣುತ್ತಿದ್ದವು. ಪ್ರಮುಖ ನೀಲಗಾರ ಗಣಪತಿ ಒಂದು ಗಜಾನನ ಹೆದ್ದೂರಶೆಟ್ಟಿ ಗಣಪತಿ, ಮತ್ತೊಂದು ಮಿರ್ಜೆ ಗಣಪತಿಯನ್ನು ಕೂಡಿಸಲಾಗಿತ್ತು. ಈ ಮೂರು ಗಣಪತಿಗಳಿಗೆ ಜನ ಸಾಕಷ್ಟು ಸಾಲು ಸಾಲಾಗಿ ನಿಂತು ದರ್ಶನ ಪಡೆದರು. ಸಂಕೇಶ್ವರದ ಪೋಲಿಸ ಅಧಿಕಾರಿಗಳು ವಿಸರ್ಜನೆಗೆ ಬಿಗಿಬಂದೋಬಸ್ತಿ ಮಾಡಲಾಗಿದೆ. 


ಸುದ್ದಿ ಓದಿ