ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆಗೆ ನೀಲನಗೌಡ ಪಾಟೀಲ ಖಂಡನೆ
ಶಿರಹಟ್ಟಿ ನವೆಂಬರ್ 20: ಕರ್ನಾಟಕ ರಾಜ್ಯದ ಮುಖ್ಯ ನಗರಗಳಾದ ಬೆಳಗಾವಿ, ನಿಪ್ಪಾಣಿ,ಕಾರವಾರ ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ ಸಾಂಸ್ಕೃತಿಕ ಘಟಕದ ಗದಗ ಜಿಲ್ಲಾ ಅಧ್ಯಕ್ಷ ನೀಲನಗೌಡ್ರ ಎಂ ಪಾಟೀಲ್ ಖಂಡಿಸಿದ್ದಾರೆ.
ಉನ್ನತ ಸ್ಥಾನವನ್ನು ಅಲಂಕರಿಸಿ ರಾಜ್ಯ ರಾಜ್ಯಗಳ ಮಧ್ಯ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ,ಕನ್ನಡಿಗರ ತಾಳ್ಮೆ ಪರಿಕ್ಷೀಸಬೇಡಿ.ಬೆಳಗಾವಿಯಂತ ಪ್ರಮುಖ ನಗರಗಳು ಕನ್ನಡದ ಸ್ವತ್ತು.ಈ ನಿಟ್ಟಿನಲ್ಲಿ ಕರ್ನಾಟಕದ ತಂಟೆಗೆ ಬರಬಾರದು,
ಮಹಾರಾಷ್ಟ್ರ ಸರ್ಕಾರಕ್ಕೆ ಇರುವ ಭಾಷಾಭಿಮಾನ,ನಮ್ಮ ಕರ್ನಾಟಕ ಸರ್ಕಾರಕ್ಕೆ ಇಲ್ಲದಿರುವುದು ನೋವಿನ ಸಂಗತಿಯಾಗಿದೆ. ನಮ್ಮ ರಾಜ್ಯದ ಕೆಲವು ನಗರಗಳು ಮಹಾರಾಷ್ಟ್ರಕ್ಕೆ ಸೇರಿವೆ ಎಂದು ಅಲ್ಲಿಯ ಡಿಸಿಎಂ ಹೇಳಿದರೆ.
ನಮ್ಮ ಸರ್ಕಾರವು ಮರಾಠಿಗರ ನಿಗಮ ರಚನೆ ಮಾಡುವುದರ ಮುಖೇನ ಮರಾಠಿಗರ ಪರವಾಗಿ ನಿಂತಿರುವುದು ಯಾವ ನ್ಯಾಯ? ಮರಾಠಿಗರ ನಿಗಮಕ್ಕೆ 50ಕೋಟಿ ಇಟ್ಟಿದ್ದಿರಾ,ಕನ್ನಡ ಪ್ರಾಧಿಕಾರಕ್ಕೆ 5ಕೋಟಿ ಇಟ್ಟಿದ್ದಿರಾ ಎಂದರೆ ನಿಮಗೆ ಮಾತೃಭಾಷೆಗಿಂತ ಅನ್ಯಭಾಷೆ ಮುಖ್ಯವಾಗಿದೆ.
ನಿಮಗೆ ಮರಾಠಿಗರ ಮೇಲಿರುವ ಅಭಿಮಾನ,ಮಹಾರಾಷ್ಟ್ರ ಸರ್ಕಾರಕ್ಕೆ ಯಾಕಿಲ್ಲ ಎಂಬುದನ್ನು ಆಲೋಚಿಸಿ ಮಾತೃಭಾಷೆಯ ಆಸ್ತಿತ್ವಕ್ಕೆ ಧಕ್ಕೆಭಾರದಂತೆ ನೋಡಿಕೊಳ್ಳಬೇಕು ಮರಾಠ ಪ್ರಾಧಿಕಾರವನ್ನು ಹಿಂಪಡೆಯಬೇಕೆಂದು ನೀಲನಗೌಡ ಎಮ್ ಪಾಟೀಲ್ ಅಗ್ರಹಿಸಿದ್ದಾರೆ.