ಅಧ್ಯಕ್ಷರಾಗಿ ನಿಖಿಲ್ ಕತ್ತಿ, ಉಪಾಧ್ಯಕ್ಷರಾಗಿ ಮಗದುಮ್ಮ ಅವಿರೋಧ ಆಯ್ಕೆ
ಹಿರಣ್ಯಕೇಶಿ ಸಕ್ಕರೆ ಕಾರಖಾನೆ
ಸಂಕೇಶ್ವರ 07: ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಂಬರುವ 5 ವರ್ಷಗಳ ಕಾಲಾವಧಿಗಾಗಿ ಅಧ್ಯಕ್ಷರಾಗಿ ನಿಖಿಲ ಉಮೇಶ ಕತ್ತಿ ಮತ್ತು ಉಪಾಧ್ಯಕ್ಷರಾಗಿ ಶ್ರೀಶೈಲಪ್ಪಾ ಮಗದುಮ್ಮ ಇವರು ಎರಡನೇ ಅವಧಿಗೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರಖಾನೆ ಸಭಾಭವನದಲ್ಲಿ ನಡೆದ ಕಾರಖಾನೆಯ ವಿಶೇಷ ಸರ್ವ ಸಾಧಾರಣ ಸಭೆಯ ಬಳಿಕ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಾಗಿದ್ದು, ಮುಂಬರುವ 5 ವರ್ಷಗಳ ಕಾಲಾವಧಿಗಾಗಿ ಅಧ್ಯಕ್ಷ ರನ್ನಾಗಿ ನಿಖಿಲ್ ಉಮೇಶ ಕತ್ತಿ ಹಾಗೂ ಹಿರಿಯ ನಿರ್ದೇಶಕ ಶ್ರೀಶೈಲಪ್ಪಾ ಮಗದುಮ್ಮ ಅವರನ್ನು ಪುನಃ ಉಪಾಧ್ಯಕ್ಷರನ್ನಾಗಿ ಎಲ್ಲ ನಿರ್ದೇಶಕರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಅದರಂತೆ ಚುನಾವಣಾ ಅಧಿಕಾರಿಯಾಗಿ ಎಸಿಕರಲಿಂಗನವರ ಕಾರ್ಯ ನಿರ್ವಹಿಸಿದರು. ಬಳಿಕ ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು.
ಅದರಂತೆ ಈ ಬಾರಿ ನಾಲ್ಕು ಜನ ಹಳೆಯ ನಿರ್ದೇಶಕರ ಬದಲು ನೂತನ ನಿರ್ದೇಶಕರನ್ನು ಆಡಳಿತ ಮಂಡಳಿಗೆ ಸೇರೆ್ಡ ಮಾಡಿಕೊಳ್ಳಲಾಗಿದೆ.
ಅದರಂತೆ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅಶೋಕ ಪಟ್ಟಣಶೆಟ್ಟಿ, ಬಾಬಾಸಾಹೇಬ ಅರಬೋಳೆ, ಬಸಪ್ಪಾ ಮರಡಿ, ಬಸವರಾಜ ಕಲ್ಲುಟ್ಟಿ, ಪ್ರಭುದೇವ ಪಾಟೀಲ, ಶಿವನಾಯಿಕ ನಾಯಿಕ, ಸುರೇಂದ್ರ ದೊಡ್ಡಲಿಂಗನವರ, ಸುರೇಶ ಬೆಲ್ಲದ, ಇವರೆಲ್ಲರು (ಅ) ವರ್ಗದಿಂದ ಕಾರ್ಯ ಆಯ್ಕೆಯಾಗಿದ್ದರೆ(ಬ) ವರ್ಗದಿಂದ ಶಿವಪುತ್ರ ಶೀರಕೋಳಿ ಇವರು ನಿರ್ದೇಶಕ ರಾಗಿ ಕಾರ್ಯ ಮಾಡಲಿದ್ದಾರೆ. ಇದೇ ವೇಳೆ ಹಿರಣ್ಯಕೇಶಿ ಕಾರಖಾನೆಗೆ ಆಗಮಿಸಿದ ಸಚಿವ ಉಮೇಶ ಕತ್ತಿ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಮತ್ತು ನಿರ್ದೇಶಕ ರನ್ನು ಅಭಿನಂಧಿಸಿ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹಾಗೆ ಕಾರ್ಖಾನೆಯನ್ನು ಮುನ್ನಡಿಸಿಕೊಂಡು ಹೋಗುವಂತೆ ಸಲಹೆ ಸೂಚನೆ ನೀಡಿದರು.