ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪಜಾಡರ್ ವಿಧಿ ವಶ
ಲೋಕದರ್ಶನ ವರದಿ
ಬೆಳಗಾವಿ: ಜಿಲ್ಲೆಯ ಹುಕ್ಕೇರಿತಾಲೂಕು ಬಾಡಗ್ರಾಮದ ಹಿರಿಯ ನಾಗರಿಕರಾಗಿದ್ದ ನಿಜಪ್ಪ ಶಿವಲಿಂಗ ಜಾಡರ್ (107) ಅವರು ವಯೋಸಹಜಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ 5:30 ಗಂಟೆಗೆತಮ್ಮ ಸ್ವಗೃಹದಲ್ಲಿ ನಿಧನರಾದರು.
ನಿಜಪ್ಪಜಾಡರ್‌ಅವರು ಹುಕ್ಕೇರಿತಾಲೂಕಿನಲ್ಲೇಅತ್ಯಂತ ಹೆಚ್ಚು ವರ್ಷಗಳ ಕಾಲ ಬದುಕಿದ ಹಿರಿಯರಲ್ಲಿಒಬ್ಬರಾಗಿದ್ದು, ತಮ್ಮ ಸರಳತೆ ಹಾಗೂ ಆದರ್ಶಜೀವನದಿಂದಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಅವರುತಮ್ಮ ಹಿಂದೆ 10 ಮಂದಿ ಮಕ್ಕಳು, 57 ಮಂದಿ ಮೊಮ್ಮಕ್ಕಳು ಸೇರಿದಂತೆಅಪಾರಕುಟುಂಬವನ್ನುಅಗಲಿದ್ದಾರೆ. ಮೃತರು ಬೆಳಗಾವಿಯ ಛಾಯಾಚಿತ್ರಗಾರ ಸದಾಶಿವ ಸಂಗಪ್ಪಗೋಳ ಅವರಅಜ್ಜನಾಗಿದ್ದರು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಬಂಧು-ಬಳಗ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರಅಂತ್ಯಕ್ರಿಯೆಕುಟುಂಬದ ಸಂಪ್ರದಾಯದಂತೆ ನೆರವೇರಿತು.