ಸಂಕೇಶ್ವರ

ಸಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಿಡಸೋಸಿ ಶ್ರೀಗಳ ಮಹತ್ವಪೂರ್ಣ ಕೊಡುಗೆ : ಡಾ. ಬಸವಕುಮಾರ ಸ್ವಾಮೀಜಿ ಹೇಳಿಕೆ: ದುರದುಂಡೀಶ್ವರ ಮಠದಲ್ಲಿ ಮಹಾಶಿವರಾತ್ರಿ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ

ಸಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಿಡಸೋಸಿ ಶ್ರೀಗಳ ಮಹತ್ವಪೂರ್ಣ ಕೊಡುಗೆ : ಡಾ. ಬಸವಕುಮಾರ ಸ್ವಾಮೀಜಿ ಹೇಳಿಕೆ: ದುರದುಂಡೀಶ್ವರ ಮಠದಲ್ಲಿ ಮಹಾಶಿವರಾತ್ರಿ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ

ಲೋಕದರ್ಶನ ವರದಿ 


ಸಂಕೇಶ್ವರ : ಗಡಿಭಾಗದ ಜನರಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಬಿತ್ತುವ ಮೂಲಕ ನಿಡಸೋಸಿಯ ಶಿವಲಿಂಗೇಶ್ವರ ಸ್ವಾಮೀಜಿ ಸಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ ಎಂದು ಬಿಜಾಪೂರ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು. 

ನಿಡಸೋಸಿಯ ದುರದುಂಡೀಶ್ವರ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ದಿ. 18 ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಅವರು, ಯುವಕರಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆಸುವ ಕಾರ್ಯ ಮಠಗಳು ಮಾಡುತ್ತಿದ್ದು, ಶ್ರೀಮಠದ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ-ಸಂಸ್ಕೃತಿಗಳು ದೊರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.  

ಮಹಾರಾಷ್ಟ್ರ ರಾಜ್ಯ ವಸ್ತ್ರೋದ್ಯೊಗ ಮಹಾಮಂಡಳ ಚೇಅರಮನ್ ಅಶೋಕರಾವ ಸ್ವಾಮಿ ಮಾತನಾಡಿ, ಜಾತಿ-ಮತ, ಭಾಷೆ-ಪಂಥಗಳನ್ನು ಮೀರಿದ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ನಿಡಸೋಸಿ ಮಠ ಉತ್ತರ ಕರ್ನಾಟಕ, ಪಶ್ಚಿಮ ಮಹಾರಾಷ್ಟ್ರದ ಜನರ ಶೃದ್ಧಾ ಕೇಂದ್ರವಾಗಿದ್ದು, ಮಠವೆಂದರೆ ಕೇವಲ ಧಾರ್ಮಿಕತೆ ಭಾಗವಲ್ಲ, ಮಠಗಳು ಸಮಾಜಮುಖಿಯಾಗಿ ಕಾರ್ಯ ಮಾಡಿದರೆ ಸಮಾಜದಲ್ಲಿ ಯಾವೆಲ್ಲ ಬದಲಾವಣೆ ಕಾಣಬಹುದು ಎಂಬುದಕ್ಕೆ ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿ ಉತ್ತಮ ನಿದರ್ಶನವಾಗಿದ್ದಾರೆ ಎಂದರು. 

ಸಂಕೇಶ್ವರ ಶಂಕರಾಚಾರ್ಯ ಮಠದ ಸಚ್ಚಿದಾನಂದ ಅಭಿನವ ಸ್ವಾಮೀಜಿ ಮಾತನಾಡಿ, ಸಂಕೇಶ್ವರ ಶಂಕರಲಿಂಗ ಹಾಗೂ ನಿಡಸೋಸಿ ಸಂಸ್ಥಾನ ಮಠಗಳು ಉತ್ತಮ ಕಾರ್ಯಗಳ ಮೂಲಕ ಶೈಕ್ಷಣಿಕ, ಸಾಮಾಜಿಕ ಸುಧಾರಣೆ ತರುವ ಮೂಲಕ ಧಾರ್ಮಿಕ ಚಟುವಟಿಕೆಗಳ ಸಾಮಾಜಿಕ ಮೌಲ್ಯ ಬಿತ್ತುವ ಕಾರ್ಯ ಮಾಡಿವೆ ಎಂದರು. ಗಂದಿಗವಾಡದ ಮೃತ್ಯುಂಜಯ ಸ್ವಾಮಿ ಹಿರೇಮಠ ಪ್ರವಚನ ನೀಡಿದರು. ನೂಲದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. 

ಸಾನಿಧ್ಯ ವಹಿಸಿದ್ದ ಶಿವಲಿಂಗೇಶ್ವರ ಸ್ವಾಮೀಜಿ, ಯುವಕರಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಂಸ್ಕೃತಿ-ಸಂಸ್ಕಾರಗಳನ್ನು ಬೆಳೆಸಬೇಕಾಗಿದೆ. ಆಧ್ಯಾತ್ಮಿಕತೆಯಿಂದ ಮನಸು ಹಗುರವಾಗುವ ಜೊತೆಗೆ ಧಾರ್ಮಿಕ ಮೌಲ್ಯಗಳಿಂದ ಮನುಷ್ಯನಲ್ಲಿ ಅಜ್ಞಾನದ ಅಂಧಕಾರ ಮಾಯವಾಗುತ್ತದೆ ಎಂದರು. 

ಅತಿಥಿಗಳಾಗಿ ಮಾಜಿ ಸಚಿವ ಎ.ಬಿ.ಪಾಟೀಲ, ರಾಹುಲ ಜಾರಕಿಹೊಳಿ, ವಿದ್ಯಾನಂದ ಕೇಸ್ತಿ,  ಅಶೋಕ ಶೀಲನ್ನವರ, ಬಾಲಚಂದ್ರ ಕಾಕಡೆ, ಅಲಕಾ ಸ್ವಾಮಿ, ಶಿವಬಸವ ಖೋತ, ಹರ್ಷಾಬಾನು ಜಿ.ಪಿ ಆಗಮಿಸಿದ್ದರು. ಸಂಜಯ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಉಮಾ ಆಲೂರಿ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು. 


ಬಾಕ್ಸ್‌  

ಇಂದಿನ ಕಾರ್ಯಕ್ರಮ :  

ದಿ. 24ರಂದು ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ಗುಗ್ಗುಳೋತ್ಸವ ಕಾರ್ಯಕ್ರಮ ಜರುಗಲಿದ್ದು, ಸುಮಾರು 200 ಜನರಿಗೆ ಗುಗ್ಗುಳೋತ್ಸವ ಜರುಗಲಿದೆ. 


ಸುದ್ದಿ ಓದಿ