ಜಮಖಂಡಿ

ಅವಿರೋಧವಾಗಿ ನೂತವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ

ಅವಿರೋಧವಾಗಿ ನೂತವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ

ಜಮಖಂಡಿ 06:  ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ನೂತವಾಗಿ ಅಧ್ಯಕ್ಷರಾದ ಮಹಾಲಿಂಗ ಸದಾಶಿವ ತಳವಾರ ಹಾಗೂ ಉಪಾಧ್ಯಕ್ಷರಾಗಿ ಶೀತಲಕುಮಾರ ದೇಸಾಯಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಜೆ,ಸಿ, ಸವದಿ ಅವರು ತಿಳಿಸಿದ್ದಾರೆ. 

ನಗರದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಸಮಯದಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಪೋಲಿಸ್ ಬೀಗಿ ಬಂದುಬಸ್ತ್‌ ಏರ​‍್ಪಡಿಸಲಾಗಿತು. ಜಿಲ್ಲಾ ಹೆಚ್ಚುವರಿ ಎಸ್‌ಪಿ, ಪ್ರಸನ್‌ಕುಮಾರ ದೇಸಾಯಿ, ಇಬ್ಬರು ಡಿಎಸ್‌ಪಿಗಳು, ಸಿಪಿಐ ಮಲ್ಲಪ್ಪ ಮಡ್ಡಿ, ಮುಧೋಳ ಸಿಪಿಐ ಮಾದೇವ ಶಿರಹಟ್ಟಿ ಸೇರಿದಂತೆ ಶಹರ ಠಾಣೆ ಪಿಎಸ್‌ಐ, ಗ್ರಾಮೀಣ ಠಾಣೆಯ ಪಿಎಸ್‌ಐ, ಮುಧೋಳ, ಸಾವಳಗಿ, ರಬಕವಿ,ಬನಹಟ್ಟಿ, ಮಹಾಲಿಂಗಪೂರ ಪಿಎಸ್‌ಐಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿತು. 


ಸುದ್ದಿ ಓದಿ