ರಾಷ್ಟ್ರೀಯ

ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿ ಯಶಸ್ವಿ ಪರೀಕ್ಷೆ

ಬ್ರಹ್ಮೋಸ್  ಕ್ಷಿಪಣಿಯ ಹೊಸ ಆವೃತ್ತಿ  ಯಶಸ್ವಿ ಪರೀಕ್ಷೆ

ನವದೆಹಲಿ,ಸೆಪ್ಟೆಂಬರ್ 30: ಬ್ರಹ್ಮೋಸ್ ಸೂಪರ್ ಸಾನಿಕ್  ಕ್ರೂಸ್  ಮಿಸೈಲ್  ಪರೀಕ್ಷಾರ್ಥ ಪ್ರಯೋಗ  ಬುಧವಾರ ಯಶಸ್ವಿಯಾಗಿದೆ. ಇದರೊಂದಿಗೆ  ಭಾರತದ   ರಕ್ಷಣ ವ್ಯವಸ್ಥೆ  ಮತ್ತಷ್ಟು ಬಲಿಷ್ಟಗೊಂಡಿದೆ. 400 ಕಿಲೋ ಮೀಟರ್ ದೂರದ ಗುರಿಯನ್ನು ಛೇದಿಸುವ   ಸಾಮರ್ಥ ಈ ಮಿಸೈಲ್ ಹೊಂದಿದೆ. 

ಒಡಿಶಾದ  ಕೇಂದ್ರವೊಂದರಲ್ಲಿ   ಭೂಮಿಯಿಂದ  ಈ   ಕ್ಷಿಪಣಿ   ಪ್ರಯೋಗಿಸಲಾಗಿದೆ.

ಕ್ಷಿಪಣಿ ಅಭಿವೃದ್ದಿ ಪಡಿಸಿರುವ  ವಿಜ್ಞಾನಿಗಳ ತಂಡವನ್ನು  ರಕ್ಷಣಾ ಸಂಶೋಧನ, ಅಭಿವೃದ್ದಿ ಸಂಸ್ಥೆ( ಡಿ ಆರ್ ಡಿ ಓ) ಅದ್ಯಕ್ಷ  ಡಾ. ಸತೀಶ್  ರೆಡ್ಡಿ ಅಭಿನಂದಿಸಿದ್ದಾರೆ. 

ಡಿ ಆರ್ ಡಿ ಓ ಪಿಜೆ -10 ಯೋಜನೆಯಡಿ  ಈ   ಕ್ಷಿಪಣಿ ಪರೀಕ್ಷೆ  ನಡೆಸಲಾಗಿದೆ ದೇಶಿಯ ಬೂಸ್ಟರ್  ಮೂಲಕ   ಪರೀಕ್ಷೆ  ನಡೆಸಲಾಗಿದ್ದು,  ಗುರಿಯ  ವ್ಯಾಪ್ತಿ ಹೆಚ್ಚಿಸಿ  ಅಭಿವೃದ್ದಿಪಡಿಸಿದ ಈ ಕ್ಷಿಪಣಿ ಪ್ರಯೋಗಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ ಎಂದು ಹೇಳಿದ್ದಾರೆ.

ಬ್ರಹ್ಮೋಸ್  ಎಂಬುದು  ರಾಮ್ ಜೆಟ್ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್. ಇದನ್ನು ಜಲಾಂತರ್ಗಾಮಿಗಳು, ನೌಕೆಗಳು, ಯುದ್ಧ ವಿಮಾನಗಳಿಂದ,   ಭೂಮಿಯ ಮೇಲಿನಿಂದಲೂ ಪ್ರಯೋಗಿಸಬಹುದು ರಷ್ಯಾದ  ಸಂಸ್ಥೆಯೊಂದಿಗೆ ಸೇರಿ  ಡಿ ಆರ್ ಡಿ ಓ ಇದನ್ನು  ಅಭಿವೃದ್ದಿಪಡಿಸಿದೆ.

ಬ್ರಹ್ಮೋಸ್   ಮೊದಲ ಆವೃತ್ತಿ  ಭಾರತ ನೌಕಾದಳವನ್ನು 2005ರಲ್ಲಿ ಸೇರ್ಪಡೆಗೊಂಡಿದೆ. ಮೊಟ್ಟ ಮೊದಲು ಐ ಎನ್ ಎಸ್  ರಾಜಪುತ್  ನೌಕೆಯಲ್ಲಿ   ವ್ಯವಸ್ಥೆಗೊಳಿಸಲಾಗಿದೆ.

ಪೂರ್ವ ಲಡಾಖ್ ಗಡಿಯಲ್ಲಿ    ಚೀನಾ ಗಡಿ  ತಂಟೆಯ  ಹಿನ್ನೆಲೆಯಲ್ಲಿ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಿರುವ ಬೆನ್ನಲ್ಲೇ ಈ  ಹೊಸ  ಆವೃತ್ತಿಯ ಪರೀಕ್ಷೆ ಯಶಸ್ವಿಯಾಗಿರುವುದು ಮಹತ್ವ ಪಡೆದುಕೊಂಡಿದೆ.

ರಷ್ಯಾದ ಪಿ-800 ಕ್ಷಿಪಣಿ ಮಾದರಿಯಲ್ಲಿಯೇ ಬ್ರಹ್ಮೋಸ್ ತಯಾರು ಮಾಡಲಾಗಿದೆ. ಭಾರತ ಮತ್ತು ರಷ್ಯಾದ ಎರಡು ನದಿಗಳ ಹೆಸರನ್ನು ಸೇರಿಸಿ ಕ್ಷಿಪಣಿಗೆ ಬ್ರಹ್ಮೋಸ್ ಎಂದು ನಾಮಕರಣ ಮಾಡಲಾಗಿದೆ.

ಸುದ್ದಿ ಓದಿ