ಧಾರವಾಡ - ಹುಬ್ಬಳ್ಳಿ

ಇಟಿಗಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ; ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಇಟಿಗಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ; ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
New School Development and Supervision Committee formed at Itigatti Government High School; Office b

ಇಟಿಗಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ; ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಧಾರವಾಡ 14: ಧಾರವಾಡ ಶಹರದ ಇಟಿಗಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಮ್‌ಸಿ)ಯನ್ನು ರಚಿಸಲಾಗಿದ್ದು, ಇಂದು (ಜು.14) ಪದಗ್ರಹಣ ಕಾರ್ಯಕ್ರಮ ಶಾಲೆಯಲ್ಲಿ ಜರುಗಿತ್ತು. 

ಅಧ್ಯಕ್ಷರಾಗಿ ಚನ್ನಬಸಪ್ಪ ಸಿದ್ದಪ್ಪ ನವಲೂರ ಹಾಗೂ ಸದಸ್ಯರಾಗಿ ಪುಂಡಲೀಕಪ್ಪ ಜಾಧವ, ಹೂವಪ್ಪ ಬಡೆಮ್ಮನವರ, ರವೀಂದ್ರನಾಥ ಸತ್ತೂರ, ಬಸವರಾಜ ಮಾಳಗಿಮನಿ, ಲಾಲಭಾಷಾ ಕಿಲ್ಲೇದಾರ, ಮುತ್ತವ್ವ ಗಾಯಕವಾಡ, ಮಲ್ಲವ್ವ ರೇವಡಿಹಾಳ ಮತ್ತು ಲಕ್ಮೀ ಈಶ್ವರ ಶಿಂಧೆ ಅವರು ಆಯ್ಕೆಯಾಗಿ ಪದಗ್ರಹಣ ಮಾಡಿದರು.  

ನಾಮನಿರ್ದೇಶಿತ ಸದಸ್ಯರಾಗಿ ಗ್ರಾಮದ ಭೂದಾನಿಗಳಾದ ರವೇಂದ್ರನಾಥ ಹ. ದೇಸಾಯಿ, ಆನಂದ ನಾರಾಯಣರಾವ ದೇಸಾಯಿ, ಶೇಖಪ್ಪ ಕರೆಪ್ಪ ನವಲೂರ, ಮಡಿವಾಳಪ್ಪ ನಾರಾಯಣ ಗಾಯಕವಾಡ, ಪ್ರಭು ಬಸಪ್ಪ ಕುಂದರಗಿ, ಮಹಾದೇವಪ್ಪ ಗ. ರೇವಡಿಹಾಳ, ಎ.ಬಿ.ಚನ್ನವೀರನಗೌಡ್ರ ಮತ್ತು ರಕ್ಷೀತಾ ರೇವಡ್ಯಾಳ ಮತ್ತು ಪದನಿಮಿತ್ಯ ಸದಸ್ಯರಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ನೀಲವ್ವ ಯಲ್ಲಪ್ಪ ಅರಿವಾಳ, ಬಸವಣ್ಣೆವ್ವ ಮು. ಪೂಜಾರ ಪದಗ್ರಹಣ ಮಾಡಿದರು.ಎಸ್‌.ಡಿ.ಎಮ್‌.ಸಿ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯೋಪಾದ್ಯಾಯ ರಾಜಕುಮಾರ ಚವ್ಹಾಣ, ಗ್ರಾಮದ ಹಿರಿಯರು, ಪಾಲಕರು ಮತ್ತು ಮಕ್ಕಳು ಭಾಗವಹಿಸಿದ್ದರು.  



ಸುದ್ದಿ ಓದಿ