ರಾಣೆಬೆನ್ನೂರ

ಹೊಸ ಪಿಂಚಣಿ ಯೋಜನೆ ನೌಕರರಿಗೆ ಮರಣ ಶಾಸನ : ಇಸ್ಮಾಯಿಲ್

ಹೊಸ ಪಿಂಚಣಿ ಯೋಜನೆ ನೌಕರರಿಗೆ ಮರಣ ಶಾಸನ :  ಇಸ್ಮಾಯಿಲ್

ರಾಣೆಬೆನ್ನೂರು ಡಿ 18  ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆಯಿಂದ ನೌಕರರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲದಂತಾಗುತ್ತದೆ ಕೂಡಲೇ ಸರ್ಕಾರ ಇದನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಬೇಕೆಂದು ಒತ್ತಾಯಿಸಿ ಡಿ. 20ರಂದು ಬೆಂಗಳೂರು ಫ್ರೀಡಂ ಪಾರ್ಕನಲ್ಲಿ  ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಕರ್ನಾ ಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ  ಪಿಂಚಣಿ  ಹೋರಾಟ ಸಮಿತಿಯ ತಾಲೂಕ ಘಟಕದ ಅಧ್ಯಕ್ಷ ಇಸ್ಮಾಯಿಲ್ ಐರಣಿ ಹೇಳಿದರು.

   ಅವರು ಶನಿವಾರ ಇಲ್ಲಿನ ಕೆ ಇ ಬಿ ಸಮುದಾಯ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. 1-4-2006 ರಿಂದ-ಈ ಹೊಸ ಪಿಂಚಣಿ ಯೋಜನೆ ಜಾರಿಯಿಂದಾಗಿದೆ. ಇದರಿಂದ ಹೊಸದಾಗಿ ಸೇರ್ಪಡೆಗೊಂಡ ನೌಕರರಿಗೆ, ಸಂಧ್ಯಾ ಕಾಲದಲ್ಲಿ  ಜೀವನ ಸಾಗಿಸಲು ಯಾವುದೇ ಭದ್ರತೆ ಇರಲಾರದು. ಕನಿಷ್ಠ ಪಿಂಚಣಿ ಇಲ್ಲದೆ ಅವಲಂಬಿತ ಕುಟುಂಬಸ್ಥರು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಅದಕ್ಕಾಗಿ ಸಕರ್ಾರ ಈ ವಿಷಯ ಕುರಿತು ಸದನದಲ್ಲಿ ಚಚರ್ಿಸಿ ಪುನಹ ಹಳೆಯ ಪಿಂಚಣಿ ಯೋಜನೆ ಯಾರಿಗೊಳಿಸಲು ಓತ್ತಾಯಿಸುತಿದ್ದೇವೆ ಎಂದರು.

 ಸಂಘವು ಎನ್ಪಿಎಸ್ ಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಿ ಅಂದಿನಿಂದ ಇಂದಿನವರೆಗೂ ಅನೇಕ ಹೋರಾಟಗಳು ಮಾಡುತ್ತಾ ಬಂದಿದ್ದೇವೆ ಆದರೆ ಸಕರ್ಾರದ ಉತ್ತರ ಸೊನ್ಯವಾಗಿದೆ.ಎನ್ಪಿಎಸ್ ಯೋಜನೆಗೊಳಪಡು ವ ನೌಕರರು,ಮಾನಸಿಕ ಹಿಂಸೆಗೆ ಮತ್ತು ಭವಿಷ್ಯದ ಚಿಂತನೆಯಲ್ಲಿ ಖಿನ್ನತೆಗೆ ಓಳಡುವಂತಾಗಿದೆ ಎಂದರು ಪ್ರಸ್ತುತ ರಾಜಸ್ಥಾನ್, ಛತ್ತೀಸ್ಗಡ ಮತ್ತು ಜಾರ್ಖಂಡ್ ರಾಜ್ಯಗಳು ಎನ್ಪಿಎಸ್ ಸ್ಕೀಂ ರದ್ದುಗೊಳಿಸಿದೆ ಆದರೆ ರಾಜ್ಯ ಸರ್ಕಾರ ಈ ಕುರಿತು ಹಲವು ಮನವಿ ಸಲ್ಲಿಸಿದರು ಸಕಾರಾತ್ಮಕ ಉತ್ತರ ನೀಡಿಲ್ಲ ಹೀಗಾಗಿ ಸಂಘವು ರಾಜ್ಯದ ಎಲ್ಲಾ ಎನ್ಪಿಎಸ್ ಯೋಜನೆಯಲ್ಲಿ ಪಡುವ ಲಕ್ಷಾಂತರ ನೌಕರರು ಅಂತಿಮ ಹೋರಾಟವೆಂಬಂತೆ ಬೆಂಗಳೂರಲ್ಲಿ ಧರಣಿ ಆರಂಭಿಸಲಾಗುವುದು ಇದು ನಮ್ಮ ಅಂತಿಮ ಹೋರಾಟವಾಗಿದೆ ಎಂದು ಎಚ್ಚರಿಸಿದರು. ಮಾಧ್ಯಮಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಮಹೇಶ್ವರಪ್ಪ ಮೈಲಾರ, ಜಗದೀಶ ಹುಲ್ಯಾಳ, ಬಾಬಾಸಾಬ್  ಜಾತಗೇರ, ನವೀನ್, ಚೇತನ್ ಭಗವಂತಗೌಡ್ರ, ಮಾಲತೇಶ ಸೋಮಣ್ಣನವರ, ಹನುಮರೆಡ್ಡಿ ಶಿಡಗನಾಳ, ಮಂಜುನಾಥ್ ಮೂಕಮ್ಮನವರ ಹೇಳಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ