ಗ್ರಾಮ ಪಾಣಿಗಟ್ಟಿದಿಂದ ನೂತನ ಪಿಎಸ್‌ಐ ಸನ್ಮಾನ
ಶಿಗ್ಗಾವಿ : ತಾಲೂಕಿನ ಹುಲಗೂರ ಪೋಲಿಸ ಠಾಣೆಗೆ ನೂತನವಾಗಿ ಪಿ.ಎಸ್.ಐ ಯಾಗಿ ಕರ್ತವ್ಯಕ್ಕೆ ಹಾಜರಾದ ವೈ.ಟಿ.ಹಿರಗಣ್ಣನವರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಘಟಕ ಹಾಗೂ ಗ್ರಾಮ ಪಾಣಿಗಟ್ಟಿ ವತಿಯಿಂದ ಸತ್ಕರಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಪಿ.ಎಸ್.ಐ ಮಾತನಾಡಿ ಪೋಲಿಸ್ ಇಲಾಖೆ ನಿಮ್ಮ ಜೊತೆ ಸದಾ ಇರುತ್ತದ್ದೆ ಅಲ್ಲದೆ ನಿಮ್ಮ ಕಾನೂನ ಬದ್ದವಾಗಿರುವ ನಿಮ್ಮ ಹೋರಾಟಕ್ಕೆ ನಮ್ಮ ಸಹಕಾರ ಇದ್ದೆ ಇರುತ್ತದೆ. ಸಾಮಾಜಿಕ ಅವ್ಯವಸ್ಥೆಯ ಸರಿಪಡಿಸುವ ನಿಟ್ಟಿನಲ್ಲಿ ತಾವು ಕಾನೂನು ಬದ್ದವಾಗಿರುವ ನ್ಯಾಯಯುತ ಹೋರಾಟವನ್ನು ಮಾಡಿ ಜೊತೆಗೆ ನಮ್ಮ ಸಹಕಾರ ಸದಾ ಇರುತ್ತದೆ ಅಂತಾ ತಮ್ಮ ಅಬಿಪ್ರಾಯ ವ್ಯಕ್ತ ಪಡಿಸಿದರು.
ತಾಲೂಕ ಅಧ್ಯಕ್ಷ ಸಂತೋಷಗೌಡ ಪಾಟೀಲ ಮಾತನಾಡಿ ಈ ಬಾಗದಲ್ಲಿ ಅನೈತಿಕ ಚಟುವಟಿಕೆಗಳಾದ ಅಕ್ರಮ ಸರಾಯಿ ಮಾರಾಟ ಜೂಜಾಟ ಓ.ಸಿ ಅಂತಹ ಸಾಮಾಜಿಕ ಮಾರಕ ಕೃತ್ಯಗಳು ನಡೆಯುತ್ತಿವೆ ಅವನ್ನು ತಡೆಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತಾಗಲಿ ಎಂದರು.
ಮೆಹಬೂಬ ಮಸೂತಿ ಜಾವೇಧಹ್ಮದ ಮಸೂತಿ, ಅಶೋಕ ಕುಂದಗೋಳ,ಮೆಹಬೂಬಸಾಬ ಬೂದಿಹಾಳ ರುಸ್ತುಮಖಾನ ಗುತ್ತಲ್. ಸಂತೋಷ ಹೀರೆಗೌಡ್ರ, ಹನುಮಂತಗೌಡ ಮಾಳಪ್ಪನವರ, ಆಸಿಪ್ ಸುಂಕದ, ನಿಜಾಮೂದ್ದಿನ ನಧಾಪ. ಮೌಲಾಲಿ ತಹಶೀಲ್ದಾರ ಇಬ್ರಾಹಿಂಸಾಬ ಮಸೂತಿ ನೂರಹಮ್ಮದ ಸುಂಕದ,ಅಲ್ತಾಪ್ ಮಸೂತಿ,ಪೈರೋಜಖಾನ ಪಾಣಿಗಟ್ಟಿ ದಾದಾಖಾನ ಗುತ್ತಲ್ ಸಂತೋಷ ಹೀರೆಗೌಡ್ರ, ಹನುಮಂತಗೌಡ ಮಾಳಪ್ಪನವರ, ಶ್ರೀದರ ತಳವಾರ ಸೇರಿದಂತೆ ಕರವೇ ಗ್ರಾಮ ಘಟಕದ ಪದಾದಿಕಾರಿಗಳು ಹಾಜರಿದ್ದರು.