ಹೊಸಪೇಟೆ

ನೇತಾಜಿ ರಾಜಿರಹಿತ ಹೋರಾಟದ ಪ್ರತೀಕ: ಪ್ರಕಾಶ ನಾಯಕ್

ನೇತಾಜಿ ರಾಜಿರಹಿತ ಹೋರಾಟದ ಪ್ರತೀಕ: ಪ್ರಕಾಶ ನಾಯಕ್

ಹೊಸಪೇಟೆ 26: ಪಟ್ಟಣದ ವಿದ್ಯಾರಣ್ಯ ಐಟಿಐ ಕಾಲೇಜಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಸಂಘಟನೆಯ ವತಿಯಿಂದ ದಿ. 26ರಂದು ಆಚರಿಸಲಾಯಿತು. 

ಸ್ವತಂತ್ರ ಸಂಗ್ರಾಮದಲ್ಲಿ ಭಾರತೀಯ ಉದಯೋನ್ಮುಖ ಬಂಡವಾಳಶಾಹಿಗಳು ಹೋರಾಟದ ಪಕ್ಷಗಳಿಗೆ ಧನ ಸಹಾಯ ಮಾಡುತ್ತಿದ್ದರು. ಆದ್ದರಿಂದಾಗಿ ಕೆಲವು ಹೋರಾಟಗಾರರು ಬಂಡವಾಳಶಾಹಿಗಳ ಹಿತವನ್ನು ಕಾಪಾಡುವ ಬಂಡವಾಳಶಾಹಿ ವ್ಯವಸ್ಥೆಗೆ ಪೂರಕವಾಗಿ ರಾಜಿ ಮಾಡಿಕೊಳ್ಳುವ, ಒಪ್ಪಂದಗಳಲ್ಲಿ ಬಗೆ ಹರಿಸಿಕೊಳ್ಳುವ ರಾಜಿಪಂಥವನ್ನು ಹುಟ್ಟುಹಾಕಿದರು. ನೇತಾಜಿ ಅಂತಹ ರಾಜಿಪಂಥವನ್ನು ಪ್ರಧಾನ ಮಾರ್ಗವನ್ನಾಗಿಸಿಕೊಂಡ ಪಕ್ಷದಲ್ಲಿದ್ದುಕೊಂಡೇ ಹೋರಾಟಕ್ಕೆ ಸಮರಶೀಲ ಆಯಾಮವನ್ನು ನೀಡಲು ಯತ್ನಿಸಿದರು. ಕಾಂಗ್ರೆಸ್ ಒಳಗೆ ಕಮ್ಯೂನಿಸ್ಟ ಆಶಯ ನಾಯಕರನ್ನು ಒಗ್ಗೂಡಿಸುವ ಕೆಲಸ ಮಾಡಿದರು. ಬ್ರಿಟಿಷರ ವಿರುದ್ಧ, ಕಾರ್ಖಾನೆಯ ಮಾಲೀಕರ ವಿರುದ್ಧ ನಡೆಯುವ ಎಲ್ಲ ಹೋರಾಟಗಳಲ್ಲಿ ರಾಜಿ ಮಾಡಿಕೊಳ್ಳುವ ಮಾರ್ಗವನ್ನು ಮುಚ್ಚಿದರು. ಇದರಿಂದಾಗಿ ವಿದೇಶಿ ಆಳ್ವಿಕರಾದ ಬ್ರೀಟಿಷರಿಗೆ, ಭಾರತೀಯ ಬಂಡವಾಳಶಾಹಿಗಳಿಗೆ ಮತ್ತು ರಾಜಿಪಂಥದ ನಾಯಕರಿಗೆ ಅಸಮಾಧಾನಕ್ಕೆ ಕಾರಣವಾಯಿತು ಎಂದು ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯ ಪ್ರಕಾಶ ನಾಯಕ್ ಚರಿತ್ರೆಯ ಸಂಗತಿಗಳನ್ನು ನೆನಪಿಸಿಕೊಂಡರು. 

ಸ್ವತಂತ್ರಪೂರ್ವ ಭಾರತದಲ್ಲಿ ಧರ್ಮ, ಜಾತಿ, ಮೌಡ್ಯತೆಗಳ ಜೊತೆಯಲ್ಲಿ ವಿದೇಶಿ ಶ್ರೀಮಂತಿಗೆಯೂ ಅಪಾರವಾದ ಆಕರ್ಷಣೆಗಳು ಇದ್ದವು. ರಾಜಿಪಂಥವು ಇಂತಹ ಆಕರ್ಷಣೆಗೆ ಬಲಿಯಾದವು. ಆದರೆ ನೇತಾಜಿ ದೇವರಲ್ಲಿ ನಂಬಿಕೆ ಉಳ್ಳವರಾಗಿದ್ದರೂ ರಾಜಕೀಯದಲ್ಲಿ ಧರ್ಮ ಬೆರೆಸುವುದನ್ನು ಆರಂಭದಲ್ಲಿಯೇ ಖಂಡಿಸಿದರು. ಬಡವರನ್ನು ಬಡಿದು ಶ್ರೀಮಂತರನ್ನು ಸಾಕುವ ಬಂಡವಾಳಶಾಹಿ ವ್ಯವಸ್ಥೆಯನ್ನು ನಿರಾಕರಿಸಿ ಸಮಾಜವಾದಿ ವ್ಯವಸ್ಥೆಯ ಕನಸನ್ನು ಕಂಡಿದ್ದರು. ಇಂದು ಧರ್ಮದ ಅಮಲು ಮತ್ತು ಶ್ರೀಮಂತರ ಹಂಗಿನಲ್ಲಿ ಒಳಗಾಗದೇ ನೈಜ್ಯ ಮನುಷ್ಯನಾಗಿ ಬದುಕಲು ಇಂದು ನೇತಾಜಿ ಅವರ ರಾಜಿರಹಿತ ಹೋರಾಟದ ಗುಣಗಳನ್ನು ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ.” ಎಂದು ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯ ಅಜ್ಜಯ್ಯ ಸಂಡೂರು ಮಾತನಾಡಿದರು. 

ಸ್ವತಂತ್ರ ಸಂಗ್ರಾಮದಲ್ಲಿ ಲಿಂಗ ತಾರತಮ್ಯವಿಲ್ಲದ, ಜಾತಿ ತಾರತಮ್ಯವಿಲ್ಲದ, ಕೋಮುಭಾವನೆ ಇಲ್ಲದ, ಶೋಷಣೆ ಇಲ್ಲದ ಸಮಾಜವನ್ನು ಕಟ್ಟಬೇಕು ಎಂಬುದು ನೇತಾಜಿ ಮತ್ತು ರಾಜಿರಹಿತ ಕ್ರಾಂತಿಕಾರಿಗಳ ಉದ್ದೇಶವಾಗಿತ್ತು ಎಂಬುದನ್ನು ತಿಳಿಯುವ ಜರೂರು ಇಂದಿನ ವಿದ್ಯಾರ್ಥಿಗಳಿಗೆ ಇದೆ ಎಂದು ಎರಿಸ್ವಾಮಿ ಪ್ರಾಂಶುಪಾಲರು ವಿದ್ಯಾರಣ್ಯ ಐಟಿಐ ಕಾಲೇಜು ಅಭಿಪ್ರಾಯ ವ್ಯಕ್ತಪಡಿಸಿದರು. ಪಾಲಾಕ್ಷ ಹಡಗಲಿ ಇವರು ಕ್ರಾಂತೀಗೀತೆಯನ್ನು ಹಾಡಿದರು. ಶೀಲಾ ಉಪನ್ಯಾಸಕರು ಐಟಿಐ ಕಾಲೇಜು ಇವರು ವಂದನಾರೆ​‍್ಣ ಮಾಡಿದರು. 


ಸುದ್ದಿ ಓದಿ