ಸಿರುಗುಪ್ಪ

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ

ಸಿರುಗುಪ್ಪ08:  ನಮ್ಮ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವುದು ಸಂರಕ್ಷಿಸುವುದು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲಭೂತ ಕರ್ತವ್ಯ ನಾವೆಲ್ಲರೂ ಜಾತ್ಯತೀತ ಮನೋಭಾವನೆ ಬೆಳೆಸಿಕೊಂಡು ಸರ್ವರನ್ನು ಗೌರವಿಸುವ ಪ್ರೀತಿಸುವ ಪರಂಪರೆ ಎಂದು ಭಾರತ ಸರ್ಕಾರ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ವಾರ್ತಾ ಮತ್ತು ಪ್ರಸಾರ ಸಾರ್ವಜನಿಕ ಜನಸಂಪರ್ಕ ಸಚಿವಾಲಯದ ಜನ ಅಭಿಪ್ರಾಯ ಮುಖಂಡರು ಸಾಕ್ಷರತಾ ಹರಿಕಾರ ಸಮಾಜ ಸುಧಾರಕರು ಎ ಅಬ್ದುಲ್ ನಬಿ ಹೇಳಿದರು.  

     ನಗರದ ಇಬ್ರಾಹಿಂ ಮಂಜೀಲ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಅವರು ಮಾತನಾಡುತ್ತಾ ಸುಭಾಷ್ ಚಂದ್ರ ಬೋಸ್ ಭಾರತದ ಸ್ವತಂತ್ರ ಹೋರಾಟದ ಸಮರ ಶೀಲಾ ನೇತಾರ ಅವರ ಆದರ್ಶ ಗುಣ ಸಿದ್ಧಾಂತ ಯುವಕರು ಮೈಗೂಡಿಸಿಕೊಳ್ಳಬೇಕು ಬ್ರಿಟಿಷರಿಗೆ ಅವರು ಸಿಂಹ ಸ್ವಪ್ನ ವಾಗಿದ್ದರು ಭಾರತ ದೇಶದ ಎಲ್ಲಾ ಧರ್ಮದ ಜನರು ಒಗ್ಗಟ್ಟಾಗಿ ಹೋರಾಡ ಬೇಕು ಎಂಬ ಅವರ ಸಂದೇಶವಾಗಿತ್ತು ಈಗ ನಮ್ಮ ದೇಶದಲ್ಲಿ ಕಾಡುತ್ತಿರುವ ಕೋಮುವಾದ ದ್ವೇಷ ವಿಷ ಬೀಜ ಬಿತ್ತುವ ಕೆಲಸ ಬೆಲೆ ಏರಿಕೆ ನಿರುದ್ಯೋಗ ಭ್ರಷ್ಟಾಚಾರ ಸಾಂಸ್ಕೃತಿಕ ಆದಹ ಪತನ ಹಲವಾರು ಸಮಸ್ಯೆ ವಿರುದ್ಧ ಹೋರಾಡಲು ಯುವಕರು ದೇಶಕ್ಕಾಗಿ ಒಂದಾಗಬೇಕಾಗಿದೆ ನಮ್ಮದು ಜಾತ್ಯತೀತ ರಾಷ್ಟ್ರ ಭಾರತೀಯರೆಲ್ಲರೂ ಒಂದೇ ಎಂಬ ಘೋಷಿಸಬೇಕಿದೆ ಎಂದು ಅಬ್ದುಲ್ ನಬಿ ಅವರು ನುಡಿದರು.  

ಕಾಂಗ್ರೆಸ್ ತಾಲೂಕ ಯುವ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಖತೀಬ್ ಜಹೀರುದ್ದೀನ್ ಬಾಬು, ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಡಿ ಹಾಶಿಮ್, ಸಾಮಾಜಿಕ ಕಾರ್ಯಕರ್ತರಾದ ಎ ಮೊಹಮ್ಮದ್ ಇಬ್ರಾಹಿಂ, ಎ ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ, ಬಿಕೆ ಅಲ್ಲಾಭಕ್ಷಿ, ಡಾ ಮೊಹಮ್ಮದ್ ಅಲಿ, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಹಂಡಿ ಹುಸೇನ್ ಸಾಬ್, ಸಾಕ್ಷರತಾ ಕ್ಷೇತ್ರ ಗೌರವ ಸಂಯೋಜಕ ಜೆ ನಾಗೇಂದ್ರ ಗೌಡ ಇದ್ದರು. 


ಸುದ್ದಿ ಓದಿ