ಬೈಲಹೊಂಗಲ

ನೇಸರಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಿಂಗಪ್ಪ ಆರ್‌. ಮಾಳನ್ನವರ ನಿಧನ

ನೇಸರಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಿಂಗಪ್ಪ ಆರ್‌. ಮಾಳನ್ನವರ ನಿಧನ

ನೇಸರಗಿ 16: ಇಲ್ಲಿನ ಗ್ರಾಮ ಪಂಚಾಯತ ಅಧ್ಯಕ್ಷರು, ಪ್ರಗತಿಪರ ರೈತರು, ಗ್ರಾಮದ ಹಿರಿಯರಾದ ನಿಂಗಪ್ಪ ರುದ್ರಪ್ಪ . ಮಾಳನ್ನವರ (56) ಇವರು ಅನಾರೋಗ್ಯದಿಂದ ಸೋಮವಾರ  ದಿನಾಂಕ 16-09-2024 ರಂದು ನಿಧನರಾದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಸಹೋದರರು, ಸಹೋದರಿಯರು, ಅಪಾರ ಮಾಳನ್ನವರ ಬಂದು ಬಳಗವನ್ನು ಅಗಲಿದ್ದಾರೆ. 

ನಿಧನಕ್ಕೆ ಶೋಕ. ಗ್ರಾ ಪಂ. ಅಧ್ಯಕ್ಷರಾದ ನಿಂಗಪ್ಪ ಮಾಳನ್ನವರ ನಿಧನಕ್ಕೆ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ,ಮುಖಂಡರಾದ ಆರ್ ಎಮ್‌. ಯತ್ತಿನಮನಿ, ಎಮ್ ವಾಯ್‌.ಸೋಮಣ್ಣವರ, ಯುವ ಮುಖಂಡ ಸಚಿನ ಪಾಟೀಲ, ಗ್ರಾಮದ ಹಿರಿಯರು, ರಾಜಕೀಯ ಮುಖಂಡರು,ಎಲ್ಲ ಸಮಾಜದ ಹಿರಿಯರು,  ಗ್ರಾ ಪಂ. ಸದಸ್ಯರು, ಸುತ್ತಮುತ್ತಲಿನ ಗ್ರಾಮಸ್ಥರು,ಮಾಜಿ ಸೈನಿಕರ ಸಂಘದ ಸದಸ್ಯರು, ಅಪಾರ ಜನಸ್ತೋಮ ಅಂತ್ಯಕ್ರಿಯೆಯಲ್ಲಿ   ಪಾಲ್ಗೊಂಡು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿ, ಸಂತಾಪ ವ್ಯಕ್ತಪಡಿಸಿದರು. 


ಸುದ್ದಿ ಓದಿ