ಹೊಸಪೇಟೆ

ನೆನಹುನುಡಿನಿನಾದ ಸಂಗೀತ ಕಾರ್ಯಕ್ರಮ

ನೆನಹುನುಡಿನಿನಾದ ಸಂಗೀತ ಕಾರ್ಯಕ್ರಮ

ಹೊಸಪೇಟೆ 11: ಸೆ.10ರಂದು ಸಾಯಂಕಾಲ 6.30ಕ್ಕೆ ಶ್ರೀ ಗುರು ಪುಟ್ಟರಾಜ ಸಂಗೀತ ಸಾಧಕರ ಬಳಗ ಹೊಸಪೇಟೆ ಇವರಿಂದ 'ನೆನಹುನುಡಿನಿನಾದ' ಕಾರ್ಯಕ್ರಮವನ್ನು ಹೊಸಮಲಪನಗುಡಿ ಗ್ರಾಮದ ಅರ್‌. ಬಿ.ಲೂಥರ್ ಮತ್ತು ಬಿ. ಶಕುಂತಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಮಲಪನಗುಡಿ ಗ್ರಾಮದ ಹಿರಿಯರಾದ ಬಿ. ನರಸಪ್ಪ ಇವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಕೃಷ್ಣಪ್ಪ ಎಸ್‌. ಜೋಗಿ ಇವರು ಆಗಮಿಸಿದ್ದರು. ಶ್ರೀ ಪುಟ್ಟರಾಜ ಗವಾಯಿಗಳ ಕುರಿತಂತೆ ನಿವೃತ್ತ ಉಪನ್ಯಾಸಕ ಚಂದ್ರಶೇಖರ್‌ಶಾಸ್ತ್ರಿ ಎಚ್‌.ಎಂ. ಇವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಚನ, ಭಕ್ತಿಗೀತೆ, ಭಾವಗೀತೆ ಹಾಗೂ ಜನಪದಗೀತೆಗಳು ಬಳಗದ ವಿದ್ಯಾರ್ಥಿಗಳಿಂದ ಮೂಡಿಬಂದವು. ಸಂಗೀತ ಗುರುದಂಪತಿಗಳಾದ ವೀರೇಶ್ ಹಿಟ್ನಾಳ್ ಹಾಗೂ ಎಚ್‌. ಪುಷ್ಪಾವತಿ ಇವರು ಶ್ರೀ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಯ ಪ್ರಯುಕ್ತ ಹಾಗೂ ಗ್ರಾಮೀಣ ಭಾಗದಲ್ಲಿ ಹಿಂದುಸ್ತಾನಿ ಸಂಗೀತ, ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಪರಂಪರೆಯನ್ನು ಬೆಳೆಸಲು ಅನುವಾಗುವಂತೆ ಹೊಸಮಲಪನಗುಡಿ ಗ್ರಾಮದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಬಳಗದವತಿಯಿಂದ ಆಯೋಜನೆ ಮಾಡಿದ್ದರು. ಬಳಗದ ವಿದ್ಯಾರ್ಥಿನಿಯರಾದ ಉಮಾ, ರುದ್ರಮ್ಮ, ರಮಿಜಾ, ಶ್ವೇತಾ, ಕಾವ್ಯ, ದಕ್ಷಿಣಾ ಇವರು ಗಾನಸುಧೆ ಹರಿಸಿದರು. ವಸಂತ್ ಕುಮಾರ್ ತಬಲ, ಮಹೇಶ್ ಕ್ಯಾಶ್ಯೂ ಮತ್ತು ವಾಣಿಶ್ರೀ ಹಾರ್ಮೋನಿಯಂ ಸಾಥ್ ನೀಡಿದರು. ಗ್ರಾಮದ ಮುಖಂಡರು, ಸಂಗೀತಾಸಕ್ತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ