ಶಿಗ್ಗಾವ್

ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣದ ನಿರ್ಲಕ್ಷ ಧೋರಣೆ

ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣದ ನಿರ್ಲಕ್ಷ ಧೋರಣೆ

ಶಿಗ್ಗಾವಿ 16:  ರಾಷ್ಟ್ರೀಯ ಹೆದ್ದಾರಿ ರಸ್ತೆಯ ನಿರ್ಮಾಣದ ನಿರ್ಲಕ್ಷ ಧೋರಣೆ ಹಾಗೂ ಅವಗಡಕ್ಕೆ ಇನ್ನೆಷ್ಟು ಬಲಿಬೇಕು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರಸ್ತೆ ಮಾರ್ಗವನ್ನು ಬಂದು ಮಾಡಲು ಬಂದಿರುವ ಹೆದ್ದಾರಿ ಕಾಮಗಾರಿ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡು ಹಾಗೂ ಚುನಾಯಿತ ಪ್ರತಿನಿದಿಗಳ ನಿರ್ಲಕ್ಷ ಧೋರಣೆಗೆ ತೀವ್ರ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಪಕ್ಷದ ವಕ್ತಾರ ಸಾಮಾಜಿಕ ಹೋರಾಟಗಾರ ಮಂಜುನಾಥ್ ಮಣ್ಣಣ್ಣವರ. 

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ ಹತ್ತಿರ ನಿವೃತ್ತ ಶಿಕ್ಷಕ ಚಮನ್‌ಸಾಬ್ ಸೋಮನಕಟ್ಟಿ ದಾರಿಯಲ್ಲಿಯ ಅಪಘಾತ ಇದು ಹೊಸ ಉದಾಹರಣೆ ಅಷ್ಟೇ ಕಳೆದ 15 ವರ್ಷಗಳಿಂದಲೂ ಶಿಗ್ಗಾವಿ ಹೊಸ ಬಸ್ ನಿಲ್ದಾಣದಿಂದ ಚಾಕಾಪುರ ಗ್ರಾಮದವರೆಗೂ ಇರುವ ರಾಷ್ಟ್ರೀಯ ಹೆದ್ದಾರಿ ಅವಘಡಕ್ಕೆ ಅಂದಾಜು ನೂರಕ್ಕಿಂತಲೂ ಹೆಚ್ಚು ಜನರು ಹಾಗೂ ಜಾನುವಾರುಗಳು ಪ್ರಾಣ ಕಳೆದುಕೊಂಡರು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ದಿವ್ಯ ನಿರ್ಲಕ್ಷ ಬಿಜೆಪಿ ಪಕ್ಷದ ಕೆಲವು ಪ್ರಭಾವಿಗಳ ಒತ್ತಡ ಹಾಗೂ ಅಧಿಕಾರದ ದಾಹಕ್ಕೆ ಜನಸಾಮಾನ್ಯರು ಬಲಿಯಾಗುತ್ತಿರುವುದು ಚುನಾಯಿತ ಪ್ರತಿನಿದಿಗಳ ನಿರಂತರ ನಿರ್ಲಕ್ಷ ಧೋರಣೆ ಕಾಣುತ್ತಿಲ್ಲವೆ ನರೇಂದ್ರ ಮೋದಿಜಿ ಅವರು ಇಂತಹ ನಿರ್ಲಕ್ಷ ಧೋರಣೆಯನ್ನು ಗಮನಿಸಬೇಕು ಮನ್ ಕಿ ಬಾತ್ ಏನೇ ಹೇಳಿದರೂ ಜನರ ಜೀವನಕ್ಕಾಗಿ ಹೃದಯದಿಂದ ಕೆಲಸ ಮಾಡಬೇಕು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ಲೆಕ್ಕಕ್ಕಿಲ್ಲದಂತೆ ದುರಂತಗಳಾದಾಗ ಮಾತ್ರ ಕೆಲಸ ಮಾಡಿ ಹೋಗುತ್ತಿದೆ ಇದನ್ನು ಯಾರು ಕೇಳುವವರಿಲ್ಲ ಇದೀಗ ಒತ್ತಡ ಹಾಕಿದ ಪರಿಣಾಮ ರಸ್ತೆ ಬಂದ್ ಮಾಡುವ ಕೆಲಸ ಮಾಡುತ್ತಿದ್ದು ಅದು ಸಹ ಶಾಶ್ವತ ಕೆಲಸವಾಗುತ್ತಿಲ್ಲ ಜನರ ಜೀವದ ಬೆಲೆ ಚುನಾಯಿತ ಪ್ರತಿನಿದಿಗಳ ಅವರಿಗೆ ತಿಳಿದಿದ್ದರೆ ನಿಮ್ಮಿಂದ ಪರಿಹಾರ ನಮಗೆ ಬೇಕಿಲ್ಲ ಬೆಲೆ ಕಟ್ಟಲಾಗದ ಜೀವ ಹೋಗಿದೆ ಆತ್ಮಸಾಕ್ಷಿ ಇದ್ದರೆ ಈ ಹೆದ್ದಾರಿಗೆ ಮೇಲ್ ಸೇತುವೆ ನಿರ್ಮಾಣ ಮಾಡಲಿ ಇಲ್ಲವಾದರೆ ಜನತೆಯ ಕ್ಷಮೆ ಕೋರಿ ಚುನಾಯಿತ ಪ್ರತಿನಿದಿಗಳು ರಾಜಕೀಯದಿಂದ ನಿವೃತ್ತಿ ಪಡೆಯಲಿ ಎಂದು ಮಂಜುನಾಥ್ ಮಣ್ಣಣ್ಣವರ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ಕೂಡ್ಲಿವಾಡ, ಬಿಸಿ ಪಾಟೀಲ್, ಪೊಲೀಸ್ ಸಿಬ್ಬಂದಿ ಹೆದ್ದಾರಿ ಕೆಲಸದ ಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ