ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನೀರಲಗಿ
ಶಿಗ್ಗಾವಿ 8: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಕ್ಕೆ ಜರುಗುವ ಚುನಾವಣೆಗೆ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಸಂಜೀವ ಕುಮಾರ ನೀರಲಗಿ ನಾಮಪತ್ರ ಸಲ್ಲಿಸಿದರು. ಆದಕಾರಣ ತಮ್ಮೆಲ್ಲರ ಆಶೀರ್ವಾದ, ಸಹಕಾರ ಕೋರುತ್ತ, ಮುಂಬರುವ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಕ್ರಿಯಾಶೀಲನಾಗಿರುತ್ತೇನೆ ಎಂಬ ಭರವಸೆಯೊಂದಿಗೆ ತಮ್ಮ ಬೆಂಬಲವನ್ನು ಕೋರುತ್ತೇನೆ.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ವೀರಶೈವ ಲಿಂಗಾಯತ ನಿರ್ದೆಶಕರಾದ ಸಿ ಎಸ್ ಲಕ್ಷ್ಮೇಶ್ವರಮಠ , ಶಿವಶಂಕರ ಕುರುಬೆಟ್ಟ ಹಿರೇಮಠ ಉಪಸ್ಥಿತರಿದ್ದರು.