ರಾಷ್ಟ್ರೀಯ

ಎಲ್‌ಎಸಿ ಮೇಲೆ ಸೂಕ್ಷ್ಮ ನಿಗಾ ಇರಿಸಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ; ರಕ್ಷಣಾ ಸಚಿವಾಲಯ

ಎಲ್‌ಎಸಿ ಮೇಲೆ ಸೂಕ್ಷ್ಮ ನಿಗಾ ಇರಿಸಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ; ರಕ್ಷಣಾ ಸಚಿವಾಲಯ

ನವದೆಹಲಿ, ಆಗಸ್ಟ್ 6: ಪೂರ್ವ ಲಡಾಕ್‌ನ ಗಡಿಯಲ್ಲಿ ಚೀನಾ ಕಡೆಯಿಂದ ಉದ್ಭವಿಸಿರುವ ಏಕಮುಖ  ಘರ್ಷಣೆ ಇನ್ನೂ ಸೂಕ್ಷ್ಮವಾಗಿಯೇ ಮುಂದುವರಿದಿದ್ದು, ಪರಿಸ್ಥಿತಿಯ ಸೂಕ್ತ ಮೌಲ್ಯಮಾಪನ  ಹಾಗೂ ಅದನ್ನು ಆಧರಿಸಿ ಸಂಪೂರ್ಣ ನಿಗಾ ವಹಿಸುವ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ  ಅಗತ್ಯವಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 

ಈ  ಪರಿಸ್ಥಿತಿ ಸುದೀರ್ಘವಾಗಿರಲಿದೆ ಎಂದು ಸಚಿವಾಲಯದ ಅಧಿಕೃತ ದಾಖಲೆಗಳು ಬಹಿರಂಗಪಡಿಸಿದೆ.  ಜೂನ್‌ ತಿಂಗಳಲ್ಲಿ ನಡೆದ ಘಟನೆಗಳನ್ನು ಆಧರಿಸಿದ ಈ ವರದಿಯಲ್ಲಿ, ಮೇ 5ರಿಂದ ವಾಸ್ತವ  ಗಡಿ ರೇಖೆ (ಎಲ್‌ಎಸಿ) ಮತ್ತು ವಿಶೇಷವಾಗಿ ಗಾಲ್ವಾನ್‌ ಕಣಿವೆಯಲ್ಲಿ  ಚೀನಾ ಸೇನೆಯ ದಾಳಿ  ನಿರಂತರವಾಗಿ ಹೆಚ್ಚುತ್ತಲೇ ಇದೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ. 

ಮೇ  17 ಹಾಗೂ 18ರಂದು ಚೀನಾ ಬದಿಯಲ್ಲಿನ ಪ್ರದೇಶಗಳಾದ ಕುಗ್ರಾಂಗ್‌ ನಾಲಾಮತ್ತು ಗೋಗ್ರಾ  ಪ್ರದೇಶಗಳು ಮತ್ತು ಪ್ಯಾಂಗಾಂಗ್‌ ತ್ಸೋನ ಉತ್ತರ ತಟಗಳಲ್ಲಿ ಸೇನೆ ಅತಿಕ್ರಮಣ ಮಾಡಿದೆ  ಎಂದು ವರದಿ ತಿಳಿಸಿದೆ. 

ಜೊತೆಗೆ,  ಜೂ. 15ರಂದು ಗಾಲ್ವಾನ್‌ ಕಣಿವೆಯಲ್ಲಿ ಎರಡೂ ಸೇನೆಯ ನಡುವೆ ನಡೆದ ಘರ್ಷಣೆಯಲ್ಲಿ ಉಭಯ  ಸೇನಾ ಯೋಧರು ಮೃತಪಟ್ಟಿದ್ದಾರೆ ಎಂದು ದಾಖಲೆಗಳು ಸ್ಪಷ್ಟಪಡಿಸಿವೆ. 

ಭಾರತದ 20 ಸೇನಾ ಯೋಧರು ಈ ಘರ್ಷಣೆಯಲ್ಲಿ ಹುತಾತ್ಮರಾಗಿದ್ದರು. ಆದರೆ, ಚೀನಾ ಸರ್ಕಾರ ಸೇನಾ ಯೋಧರ ಸಾವಿನ ಅಂಕಿ ಅಂಶಗಳನ್ನು ಬಹಿರಂಗಪಡಿಸಿಲ್ಲ. 



ಸುದ್ದಿ ಓದಿ