ಭ್ರಷ್ಟಾಚಾರದ ಕುರಿತು ಅರಿವು ಮೂಡಿಸುವ ಸಪ್ತಾಹ ಭ್ರಷ್ಟಾಚಾರದ ನಿಮರ್ೂಲನೆಗೆ ಎಲ್ಲರ ಸಹಕಾರ ಅಗತ್ಯ: ಪಾಟೀಲ್
ಬಳ್ಳಾರಿ03: ಭ್ರಷ್ಟಾಚಾರದ ನಿಮರ್ೂಲನೆಗೆ ಎಲ್ಲರ ಸಹಕಾರ ಅಗತ್ಯ, ಭ್ರಷ್ಟಾಚಾರದ ತಡೆಗೆ ಸಕರ್ಾರದ ನೀತಿ-ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ಎಲ್.ಪಾಟೀಲ್ ಅವರು ಕರೆ ನೀಡಿದರು.
ನಗರದ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಸಂಶೋಧನಾ ಕೇಂದ್ರದಲ್ಲಿ ಭ್ರಷ್ಟಾಚಾರದ ನಿಮರ್ೂಲನೆಯ ಬಗ್ಗೆ ಜಾಗೃತಿ ಮೂಡಿಸುವ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರದ ನಿಮರ್ೂಲನೆಯಾಗಬೇಕಾದರೆ ಪ್ರತಿಯೊಬ್ಬರೂ ಜವಬ್ದಾರಿಯುತವಾಗಿ ಕೈಜೋಡಿಸಬೇಕು. ಈ ಜಾಗೃತಿಯು "ನನ್ನದೃಷ್ಟಿ-ಭ್ರಷ್ಟಾಚಾರವನ್ನು ನಿಮರ್ೂಲನೆ ಮಾಡಿ, ನವ ಭಾರತವನ್ನು ನಿಮರ್ಿಸುವುದು" ಎಂಬವುದು ಮುಖ್ಯ ಉದ್ದೇಶವಾಗಿದೆ.
ಕೇಂದ್ರ ಜಾಗೃತ ಆಯೋಗವು ಭ್ರಷ್ಟಾಚಾರ ನಿಮರ್ೂಲನೆಗಾಗಿ ತೆಗೆದುಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಈ ಸಂದರ್ಭದಲ್ಲಿ ವಿವರಿಸಿ, ಭ್ರಷ್ಟಾಚಾರ ನಿಮರ್ೂಲನಾ ಕಾಯ್ದೆ-1988ರ ಕುರಿತು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಪ್ರಭಾವತಿಯವರು ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಿಜ್ಞಾನಿಗಳಾದ ಡಾ. ಬಿ.ಎಸ್. ನಾಯಕ್, ಕೇಂದ್ರದ ತಾಂತ್ರಿಕ ಸಿಬ್ಬಂದಿಗಳು ಹಾಗೂ ಆಡಳಿತದ ಸಿಬ್ಬಂದಿಗಳು ಭಾಗವಹಿಸಿದರು. ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಮರ್ೂಲನೆಯ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು.
ಪ್ರಬಂಧ ಸ್ಪಧರ್ೆ : ಬಳ್ಳಾರಿಯ ಕೇಂದ್ರೀಯ ವಿದ್ಯಾಲಯದಲ್ಲಿರುವ ವಿದ್ಯಾಥರ್ಿಗಳಿಗೆ "ಭ್ರಷ್ಟಾಚಾರ ನಿಮರ್ೂಲನೆಗೊಳಿಸಿ ನವ ಭಾರತವನ್ನು ನಿಮರ್ಿಸುವ ತಂತ್ರಗಳು" ಎಂಬ ವಿಷಯದ ಕುರಿತು ಪ್ರಬಂಧ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು.