ಕಾಂಗ್ರೇಸ್ ಆಡಳಿತ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ: ಸಲೀಂ ಅಹ್ಮದ್
ರಾಣೀಬೆನ್ನೂರ 20: ಬಿಜೆಪಿ ಸರ್ಕಾರ ಈ ದೇಶದ ಮತದಾರರಿಗೆ ಮಹಾ ವಂಚನೆ ಮಾಡಿದೆ. ಇವರ ಆಡಳಿತ ಕಳೆದ 7 ವರ್ಷಗಳ ಅವಧಿಯಲ್ಲಿ ಹೇಳುವುದು ಒಂದು ಮಾಡುವುದು ಮತ್ತೊಂದು ಎನ್ನುವ ಗಾದೆ ಮಾತಿನಂತೆ ಇದೀಗ ಅಕ್ಷರಶ: ನಿಜವಾಗಿದೆ. ಈ ಸರ್ಕಾರ ಎಂದು ಪತನವಾಗುವುದೋ ಎಂದು ಜನರು ಕಾಯುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದೆ. ಕಾರ್ಯಕರ್ತರು ಇಂದಿನಿಂದಲೇ ಇವರ ಜನ ವಿರೋಧಿ ಆಡಳಿತದ ಮಾಹಿತಿ ನೀಡುವುದರ ಮೂಲಕ ಸಮರ್ಥವಾಗಿ ದೇಶದಲ್ಲಿ ಪುನ: ಕಾಂಗ್ರೇಸ್ ಆಡಳಿತ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಹಾಗೂ ನೂತನ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಕರೆ ನೀಡಿದರು.
ಅವರು ರವಿವಾರ ಇಲ್ಲಿಯ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ತಾಲೂಕ ಕಾಂಗ್ರೇಸ್ ಸಮಿತಿ ಮತ್ತು ಕಾರ್ಯಕರ್ತರು ನೀಡಿದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮತದಾರರಿಗೆ ತಮ್ಮ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಕಾಂಗ್ರೇಸ್ ಪಕ್ಷಕ್ಕೆ 135ವರ್ಷಗಳ ಇತಿಹಾಸವಿದೆ. ಪಕ್ಷ ಪಕ್ಷವು ತನ್ನ ಇತಿಹಾಸದಿಂದಲೂ ಕವಿವಾಣಿಯಂತೆ ಸರ್ವ ಜನಾಮಗದ ಶಾಂತಿಯ ತೋಟದ ರೂಪದಲ್ಲಿ ಬೆಳೆದು ಬಂದಿದೆ. ಇಲ್ಲಿ ಯಾವುದೇ ಜಾತಿ-ಮತ-ಭೇದ-ಭಾವ ಕಾಣದೇ ಎಲ್ಲರೂ ನಮ್ಮವರು ಎನ್ನುವ ತತ್ವ-ಸಿದ್ಧಾಂತದ ಅಡಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದರಿಂದಲೇ ಈ ದೇಶವನ್ನು 50ವರ್ಷಗಳ ಕಾಲ ಸುದೀರ್ಘವಾಗಿ ಆಡಳಿತ ನಡೆಸಿದ ಕೀರ್ತಿಯಿದೆ ಎಂದರು.
ಕಳೆದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೇ ಸಿದ್ದರಾಮಯ್ಯನವರು ಪೂರ್ತಿ 5ವರ್ಷ ಆಡಳಿತ ನಡೆಸಿದ್ದಾರೆ. ಬಿಜೆಪಿ ಇದೀಗ ತನ್ನ ಆಡಳಿತದಲ್ಲಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಗುಲಿಸಿ ಅವರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ. ಬಿಜೆಪಿ ಪಕ್ಷ ಈಗ ಶಾಪಕ್ಕೆ ಶಾಪಕ್ಕೆ ಗುರಿಯಗಿದ್ದು ಕೇಂದ್ರ ಮತ್ತು ರಾಜ್ಯದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಚುನಾವಣೆ ಎದುರಿಸಿ ಬಿಜೆಪಿಯನ್ನು ಸೋಲಿಸಿ ದೇಶ ಮತ್ತು ರಾಜ್ಯವನ್ನು ಬಿಜೆಪಿ ಮುಕ್ತವನ್ನಾಗಿ ಮಾಡಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಅವರು ಹಾನಗಲ್ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಸಲೀಂ ಅಹ್ಮದ್ ಅವರು ಗೆಲುವು ಸಾಧಿಸುವುದರ ಮೂಲಕ ಇಡೀ ರಾಜ್ಯಕ್ಕೆ ಹೊಸ ಸಂಚಲನವನ್ನುಂಟು ಮಾಡಿದ್ದಾರೆ. ತಾವು ಚುನಾವಣಾ ಪೂರ್ವದಲ್ಲಿ ಸಲೀಂ ಅವರಿಗೆ ನೀಡಿದ ಭರವಸೆಯಂತೆ ಗೆಲುವು ತಂದು ಕೊಟ್ಟಿದ್ದೇವೆ. 2 ಬಾರಿ ಸೋಲು ಕಂಡಿರಬಹುದು ಆದರೆ ನಿರಂತರ ಕ್ಷೇತ್ರದ ಮತದಾರರ ಮನದಾಳದಲ್ಲಿ ಅವರಿದ್ದಾರೆ. ಇದು ಅವರ ನಿಜವಾದ ಗೆಲುವು ಎಂದು ಹೇಳಿದರು.
ಕಾಂಗ್ರಶ್ ಮುಖಂಡರಾದ ಡಾ. ಆರ್.ಎಂ.ಕುಬೇರ್ಪ, ಕೃಷ್ಣಪ್ಪ ಕಂಬಳಿ, ಪುಟ್ಟಪ್ಪ ಮರಿಯಮ್ಮನವರ, ಪ್ರೊಽ. ಬಿ ಬಿ ನಂದ್ಯಾಲ್, ಬಿ.ಎಸ್.ಮರದ, ಮಂಜನಗೌಡ ಪಾಟೀಲ, ಏಕನಾಥ ಬಾನುವಳ್ಳಿ, ರವೀಂದ್ರಗೌಡ ಪಾಟೀಲ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ವೀಕ್ಷಕರಾದ ಬಸವರಾಜ, ಸದಾನಂದ ಡಂಗನವರ, ನಾಗರಾಜ, ಮುಖಂಡರಾದ ಶೇರುಖಾನ್ ಕಾಬೂಲಿ, ರುಕ್ಮಿಣಿ ಸಾವಕಾರ, ಗೀರೀಶ ಹೆಗ್ಗಪ್ಪನವರ, ಎಸ್ ಆರ್ ಬಾರ್ಕಿ, ವಿಪಿ ಪೋಲೀಸ್ಗೌಡ್ರ, ಶಿವಾನಂದ ಕನ್ನಪ್ಪಳವರ, ಇರ್ಶಾದ್ ಬಳ್ಳಾರಿ, ನಿಂಗರಾಜ ಕೋಡಿಹಳ್ಳಿ, ಕೆ ಡಿ ಸಾವಕಾರ, ಸಲೀಂ ಜವಳಿ, ಉಳಿವೆಪ್ಪ ಸಾಲಿ, ಶ್ರೀನಿವಾಸ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇರ್ಫಾನ್ ದಿಡಗೂರ ಸ್ವಾಗತಿಸಿ, ನಿರೂಪಿಸಿ ಕೊನೆಗೆ ವಂದಿಸಿದರು.