ಬೈಲಹೊಂಗಲ

ನಯಾನಗರ ಸರ್ಕಾರಿ ಪ್ರೌಢ ಶಾಲೆ ಉತ್ತಮ ಸಾಧನೆ

ನಯಾನಗರ ಸರ್ಕಾರಿ ಪ್ರೌಢ ಶಾಲೆ ಉತ್ತಮ ಸಾಧನೆ

ಬೈಲಹೊಂಗಲ 14: ಸಮೀಪದ ನಯಾನಗರ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ 2023-24ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಶಶಾಂಕ ನಾರಾಯಣ ನಲವಡೆ (564) 90.24ಅ, ಪ್ರಥಮ. ಭೀಮಶಿ ನಾಗಪ್ಪ ಕೋಲಕಾರ (558) 89.28ಅ ದ್ವಿತೀಯ. ವಿದ್ಯಾಶ್ರೀ ಬಸಪ್ಪ ಕೊಪ್ಪದ (551) 88.16ಅ, ರವಿ ಸೋಮಶೇಖರ ವಟ್ನಾಳ (551) 88.16ಅ, ಸಿಂಧು ಬಂಡೆಪ್ಪ ಅಳಗೋಡಿ (550) 88.00ಅ ತೃತೀಯ ಸ್ಥಾನವನ್ನು ಪಡೆದಿದ್ದಾರೆ.  

ಬದಲಾದ ಪರೀಕ್ಷೆ ವ್ಯವಸ್ಥೆಯಲ್ಲಿಯೂ ಕೂಡ ಸರ್ಕಾರಿ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡುತ್ತಿರುವುದು ಸಂತಸ ನೀಡಿದೆ ಎಂದು ಶಿಕ್ಷಣ ಪ್ರೇಮಿ ನಾರಾಯಣ ನಲವಡೆ ಹಾಗೂ ಪ್ರಾಥಮಿಕ ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಯಲ್ಲಪ್ಪ ಏಣಗಿ ಹೇಳಿದರು.  

ಹೆಚ್ಚಿನ ಅಂಕ ಪಡೆದು ಪಾಸಾಗುವ ಮೂಲಕ ಶಾಲೆಗೆ ಕೀರ್ತಿ ತಂದ ಮಕ್ಕಳನ್ನು ಮುಖ್ಯೋಪಾಧ್ಯಾಯ ನಾಗೇಶ ಮಾಳನ್ನವರ, ಎಸ್‌ಡಿಎಂಸಿ ಮಾಜಿ ಉಪಾಧ್ಯಕ್ಷ ಶ್ರೀಕಾಂತಗೌಡ ಪಾಟೀಲ ಮತ್ತು ಸಮಸ್ತ ಗುರುಬಳಗ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳು ಗ್ರಾಮಸ್ಥರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ