ನಟಿ ನವನೀತ್ ಕೌರ್ ಗೆ ಕೊರೊನಾ ಪಾಸಿಟಿವ್
ಮುಂಬೈ,
ಆಗಸ್ಟ್ ೮: ಕೊರೊನಾ ಸೋಂಕಿಗೆ ಒಳಗಾಗುತ್ತಿರುವ ಪ್ರಮುಖರ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಹೊಸದಾಗಿ ಮಹಾರಾಷ್ಟ್ರದ ಅಮರಾವತಿ ಸಂಸದೆ ನಟಿ
ನವನೀತ್ ಕೌರ್ ಕೊರೊನಾ ಸೋಂಕಿಗೆ
ಒಳಗಾಗಿದ್ದಾರೆ. ಇತ್ತೀಚಿಗೆ ಕೊರೊನಾ
ಪರೀಕ್ಷೆ ಒಳಗಾಗಿದ್ದ ಅವರಿಗೆ ಪಾಸಿಟಿವ್
ಇರುವುದು ದೃಢಪಟ್ಟಿದೆ. ಪತಿ ರವಿ
ರಾಣಾ, ಮಕ್ಕಳಿಗೂ ಕೂಡಾ ಕೊರೊನಾ ಸೋಂಕು
ತಗುಲಿದೆ.
ಈ ವಿಷಯವನ್ನು ಸ್ವತಃ ನವನೀತ್ ಕೌರ್ ದೃಢಪಡಿಸಿದ್ದಾರೆ. “ ನನ್ನ ಮಗಳು, ಮಗ, ಇತರ ಕುಟುಂಬ ಸದಸ್ಯರಿಗೆ ಕೊರೊನಾ ದೃಢಪಟ್ಟಿದೆ. ಅವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ, ಅವರ ಹಾರೈಕೆ ಮಾಡುವ ಕ್ರಮವಾಗಿ ನನಗೂ ಕೊರೊನಾ ಸೋಂಕು ತಗುಲಿದೆ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ನವನೀತ್ ಕುಟುಂಬದಲ್ಲಿ ಈವರೆಗೆ ೧೦ ಮಂದಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಅವರೆಲ್ಲ ನಾಗಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
೨೦೦೪ರಲ್ಲಿ ತೆರೆಕಂಡ ದರ್ಶನ್ ನಾಯಕರಾಗಿ ನಟಿಸಿದ್ದ 'ದರ್ಶನ್' ಚಿತ್ರದಲ್ಲಿ ಕೌರ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತೆಲುಗು, ಪಂಜಾಬಿ, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿರುವ ನವನೀತ್ ಕೌರ್, ೨೦೧೯ ಸಾರ್ವತ್ರಿಕ ಚುನಾವಣೆಯಲ್ಲಿ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.